Ullal: ಕಾಲೇಜು ಹುಡುಗನ ಹುಲಿ ತಲೆ ಕೀ ಚೈನ್‌ಗೆ ಬೇಡಿಕೆ!
ಸಣ್ಣ ವಯಸ್ಸಿನಲ್ಲೇ ಮೂಡಿದ ಕಲಾಸಕ್ತಿಯಿಂದ ಲಾಭ; ಬಿಡುವಿನ ವೇಳೆಯಲ್ಲಿ ತಲೆಯ ಪ್ರತಿಕೃತಿ ರಚಿಸಿ ಮಾರಾಟ
Team Udayavani, Oct 1, 2024, 1:15 PM IST
ಉಳ್ಳಾಲ: ನವರಾತ್ರಿಗೆ ಭಾರಿ ಜನಾಕರ್ಷಣೆ ಪಡೆಯುವ ಹುಲಿ ವೇಷ, ಕುಣಿತ ಈಗ ಬೇರೆ ಬೇರೆ ರೂಪಗಳಲ್ಲಿ ವ್ಯಾಪಿಸುತ್ತಿದೆ. ಮನೆ ಮನೆಗೆ ಬರುವ ಹುಲಿಗಳು, ದೊಡ್ಡ ವೇದಿಕೆಗಳಲ್ಲಿ ನಡೆಯುವ ಹುಲಿ ವೇಷದ ಸ್ಪರ್ಧೆಗಳ ನಡುವೆ ಹುಲಿಗಳ ತಲೆಯ ಪ್ರತಿಕೃತಿ, ಕೀಚೈನ್‌ಗಳಿಗೂ ಭಾರಿ ಬೇಡಿಕೆ ಹುಟ್ಟಿಕೊಂಡಿದೆ. ಇದನ್ನು ಗಮನಿಸಿ ಕೋಟೆಕಾರಿನ ಬಾಲಕನೊಬ್ಬ ಆರಂಭಿಸಿರುವ ಹುಲಿ ವೇಷದ ಕೀ ಚೈನ್ ಮತ್ತು ಪ್ರತಿಕೃತಿ ನಿರ್ಮಾಣ ಕಾಯಕಕ್ಕೆ ಈಗ ಭಾರಿ ಬೆಲೆ ಬಂದಿದೆ. ಬೆಂಗಳೂರು, ಮುಂಬಯಿ ಸಹಿತ ವಿವಿಧೆಡೆಯಿಂದ ಬೇಡಿಕೆಗಳು ಬರುತ್ತಿವೆಯಂತೆ.
ಕೋಟೆಕಾರು ನಿವಾಸಿ ಪ್ರಸಿದ್ಧ ಕಲಾವಿದ ಜಯಪ್ರಸಾದ್ (ಜೆ.ಪಿ.) ಆಚಾರ್ಯ ಅವರ ಪುತ್ರನಾಗಿರುವ ಪ್ರಥಮ ಪಿಯುಸಿ ವಿದ್ಯಾರ್ಥಿ ಜ್ಯೇಷ್ಠ ಆಚಾರ್ಯ ಮೂರನೇ ವಯಸ್ಸಿನಿಂದಲೇ ಚಿತ್ರಕಲೆಯಲ್ಲಿ ತೊಡಗಿಕೊಂಡಿದ್ದ. ಅದರ ಜತೆಗೆ ತಂದೆಯ ಗರಡಿಯಲ್ಲಿ ಪಳಗಿದ್ದ. ಬಿಡುವಿನ ವೇಳೆಯಲ್ಲಿ ಹವ್ಯಾಸಕ್ಕಾಗಿ ಆರಂಭಿಸಿದ ಹುಲಿ ವೇಷದ ತಲೆಯ ಪ್ರತಿಕೃತಿ ರಚನೆ ಇದೀಗ ಬೇಡಿಕೆಯನ್ನು ಪಡೆದುಕೊಂಡಿದೆ.
ಕಲಾವಿದ ಜೆ.ಪಿ. ಆಚಾರ್ಯ ಅವರು ಹುಲಿ ವೇಷ ಸ್ಪರ್ಧೆಯ ವಿಜೇತರಿಗೆ ನೀಡುವ ಹುಲಿಯ ತಲೆಗಳ ಪ್ರತಿಕೃತಿಯನ್ನು ಹಲವು ವರ್ಷಗಳಿಂದ ನಿರ್ಮಿಸುತ್ತಿದ್ದಾರೆ. ಈ ನಡುವೆ ಜ್ಯೇಷ್ಠ ಒಂದು ಇಂಚು ಮತ್ತು ಎರಡು ಇಂಚಿನ ಹುಲಿಯ ತಲೆಯ ಪ್ರತಿಕೃತಿಯನ್ನು ನಿರ್ಮಿಸಿ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪ್ರಕಟಿಸಿದ್ದಾರೆ. ಜಾಲತಾಣದಲ್ಲಿ ವೀಕ್ಷಿಸಿದ ಜನರು ತಮಗೂ ಅದೇ ಮಾದರಿಯಲ್ಲಿ ತಯಾರಿಸಿಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಜ್ಯೇಷ್ಠ ಕಲಿಕೆಯ ಜತೆಗೇ ಈ ಪ್ರತಿಕೃತಿ ಮತ್ತು ಕೀಚೈನ್ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾಲೇಜಿನಿಂದ ಬರುವಾಗ ಸಂಜೆ ಐದು ಗಂಟೆ ಆಗುತ್ತದೆ. ಕಲಿಕೆಯೊಂದಿಗೆ ಈ ಒಂದು ಪ್ರತಿಕೃತಿಗೆ ಬಣ್ಣ ತುಂಬಲು ಒಂದು ದಿವಸ ಹಿಡಿಯುತ್ತದೆ. ಹವ್ಯಾಸಕ್ಕಾಗಿ ಆರಂಭಿಸಿರುವ ಈ ಕಲೆಯನ್ನು ಕಲಿಕೆಯೊಂದಿಗೆ ಮುಂದುವರಿಸುತ್ತೇನೆ. ಬೇಡಿಕೆಗೆ ಅನುಗುಣವಾಗಿ ತಯಾರಿಸಿಕೊಡುವ ಯೋಜನೆ ಇದೆ.
-ಜ್ಯೇಷ್ಠ ಆಚಾರ್ಯ,ಯುವ ಕಲಾವಿದ
ಜ್ಯೇಷ್ಠ ಮೂರನೇ ವರ್ಷದಿಂದಲೇ ಡ್ರಾಯಿಂಗ್ ರಚಿಸಲು ಆರಂಭಿಸಿದ್ದ. ಬಳಿಕ ನಾನು ಮಾಡುತ್ತಿದ್ದ ಪ್ರತಿಕೃತಿಗಳ ಬಗ್ಗೆ ಆಸಕ್ತಿ ಮೂಡಿ ಹುಲಿಯ ತಲೆಯ ಸಣ್ಣ ಪ್ರತಿಕೃತಿ ರಚಿಸಿದ್ದ. ಭಾರ ಕಡಿಮೆ ಮಾಡುವುದಕ್ಕಾಗಿ ಈಗ ಫೈಬರ್ ಮೋಲ್ಡ್‌ನಲ್ಲಿ ಪ್ರತಿಕೃತಿ ತಯಾರಿಸಿ ಬಣ್ಣ ತುಂಬುವ ಕೆಲಸ ಮಾಡುತ್ತಿದ್ದಾನೆ.
-ಜೆ.ಪಿ. ಆಚಾರ್ಯ ಕೋಟೆಕಾರು, ಕಲಾವಿದರು
ಹುಲಿ ತಲೆ ಪ್ರತಿಕೃತಿ ನಿರ್ಮಾಣ ಹೇಗೆ?
ಮೊದಲು ಮಣ್ಣಿನಲ್ಲಿ ಹುಲಿಯ ತಲೆಯ ಪ್ರತಿಕೃತಿಯನ್ನು ತಯಾರಿಸಿ ಬಳಿಕ ಅದರ ಸಿಲಿಕಾನ್ ಮೌಲ್ಡ್ ತೆಗೆಯುತ್ತೇನೆ. ಫೈಬರ್‌ನಲ್ಲಿ ಗಟ್ಟಿ ಮಾಡುತ್ತೇನೆ. ಹೀಗೆ ಮಾಡಿದ ಒಂದು ಪ್ರತಿಕೃತಿಯನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದೆ. ಕೆಲವರು ಇದರ ಬೆಲೆ ಕೇಳಲು ಆರಂಭಿಸಿದರು. ಬಳಿಕ ಬೇಡಿಕೆ ಮೇರೆಗೆ ನಿರ್ಮಾಣಕ್ಕೆ ತೊಡಗಿಕೊಂಡೆ ಎನ್ನುತ್ತಾರೆ ಜ್ಯೇಷ್ಠ.
-ವಸಂತ ಎನ್. ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.