ಈ ಬಾರಿ ಮಹಿಳೆಯರದ್ದೇ ಕಾರುಬಾರು
Team Udayavani, Aug 27, 2018, 12:15 PM IST
ಉಳ್ಳಾಲ: ಉಳ್ಳಾಲ ನಗರಸಭೆ ಚುನಾವಣೆ ಕಾವೇರುತ್ತಿದ್ದಂತೆ ಮತದಾರರರನ್ನು ಓಲೈಸಲು ಅಭ್ಯರ್ಥಿಗಳ ಮನೆ ಮನೆ ಭೇಟಿ ಆರಂಭಗೊಂಡಿದೆ. ಈ ಬಾರಿ ಚುನಾವಣೆಯ103 ಅಭ್ಯರ್ಥಿಗಳಲ್ಲಿ 47 ಮಹಿಳಾ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು 56 ಪುರುಷ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಉಳ್ಳಾಲ ನಗರಸಭೆಯಲ್ಲಿ ಒಟ್ಟು 44273 ಮತದಾರರಿರುವ 22491 ಮಹಿಳಾ ಮತದಾರರನ್ನು, 21782 ಪುರುಷ ಮತದಾರರು ಇದ್ದಾರೆ. ನಗರಸಭೆಯ 31 ಸ್ಥಾನಗಳಲ್ಲಿ 14 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದು ಇದರಲ್ಲಿ ಎಲ್ಲ ಮಹಿಳಾ ಸ್ಪರ್ಧಿಗಳಿದ್ದಾರೆ. 13 ಸ್ಥಾನಗಳಲ್ಲಿ ಸಂಪೂರ್ಣ ಪುರುಷರೇ ಸ್ಪರ್ಧೆಯಲ್ಲಿದ್ದರೆ, ನಾಲ್ಕು ಸ್ಥಾನಗಳಾದ 17ನೇ ಪಟ್ಲ ಗಂಡಿ 1ರಲ್ಲಿ ಸಿಪಿಐಎಂನ ಮಹಿಳಾ ಸ್ಪರ್ಧಿಯಿದ್ದು, 21ನೇ ಚೆಂಬುಗುಡ್ಡೆವಾರ್ಡ್‌ನಲ್ಲಿ ಕಾಂಗ್ರೆಸ್‌ನ ಮಹಿಳಾ ಅಭ್ಯರ್ಥಿ ಸ್ಪರ್ಧೆಯಲ್ಲಿದ್ದಾರೆ. 24ನೇ ಅಬ್ಬಕ್ಕನಗರ 1ರಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆಯಲ್ಲಿದ್ದರೆ, 29ನೇ ಧರ್ಮನಗರ ವಾರ್ಡ್ ನಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಸ್ಪರ್ಧೆಯಲ್ಲಿದ್ದಾರೆ. ಈ ನಾಲ್ಕು ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಮಹಿಳೆಯರಲ್ಲಿ ಇಬ್ಬರು ಹಾಲಿ ಸದಸ್ಯರಾಗಿದ್ದರೆ ಒಬ್ಬರು ಮಂಡಲ ಪಂಚಾಯತ್ ಸದಸ್ಯರಾಗಿದ್ದವರು. ಇನ್ನೊಂದು ಹೊಸಮುಖವಾಗಿದೆ.
ಬಿಜೆಪಿ ಪ್ರಬಲ ವಾರ್ಡ್‌ಗಳು ಮಹಿಳೆಯರಿಗೆ ಸೀಮಿತ
ಉಳ್ಳಾಲದಲ್ಲಿ ಬಿಜೆಪಿ ಪ್ರಬಲ ಕ್ಷೇತ್ರವಾಗಿರುವ ಭಟ್ನಗರ, ಮೊಗವೀರಪಟ್ಣ ಉಳ್ಳಾಲ ಬೈಲು ವಾರ್ಡ್‌ಗಳು ಮಹಿಳೆರ ಮೀಸಲಾತಿ ಬಂದಿದೆ. ಮುಸ್ಲಿಂ ಮತದಾರರನ್ನು ಹೊಂದಿರುವ 1ನೇ ವಾರ್ಡ್ ಕೋಟೆಪುರದಲ್ಲಿ ಕಳೆದ ಪುರಭೆಯಲ್ಲಿ ಬಿಜೆಪಿ ಅಭ್ಯರ್ಥಿಯಿದ್ದರೂ ಈ ಬಾರಿ ಅಭ್ಯರ್ಥಿಗಳ ಕೊರತೆಯಿಂದ ಬಿಜೆಪಿ ಕಣಕ್ಕಿಳಿದಿಲ್ಲ. ಕಳೆದ ಎರಡು ಅವಧಿಗೆ ಪಕ್ಷೇತರ ಅಭ್ಯರ್ಥಿಗಳಿಗೆ ವರವಾಗಿದ್ದ ಉಳಿಯ ಹೊಗೆ ವಾರ್ಡ್ ಈ ಬಾರಿ ಮಹಿಳಾ ಮೀಸಲಾತಿ ಇದ್ದು, ಈ ಬಾರಿಯೂ ಕಾಂಗ್ರೆಸ್‌ಗೆ ಪಕ್ಷೇತರ ಅಭ್ಯರ್ಥಿಯೇ ಪ್ರತಿಸ್ಪರ್ಧಿಯಾಗಿದ್ದಾರೆ.
ಕಾಂಗ್ರೆಸ್‌ನಿಂದ ಅತೀ ಹೆಚ್ಚು ಮಹಿಳೆಯರು
31 ಸ್ಥಾನಗಳಲ್ಲಿ 31ರಲ್ಲೂ ಸ್ಪರ್ಧೆಯಲ್ಲಿರುವ ಕಾಂಗ್ರೆಸ್ 16 ಮಹಿಳಾ ಸ್ಪರ್ಧಿಗಳನ್ನು ಕಣಕ್ಕಿಳಿಸಿದ್ದು, 24 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ 13 ಮಹಿಳೆಯರನ್ನು ಸ್ಪರ್ಧೆಗಿಳಿಸಿದೆ. 22 ಸ್ಥಾನಗಳಲ್ಲಿ ಸ್ಪಧಿಸುತ್ತಿರವ ಜೆಡಿಎಸ್ 9 ಮಹಿಳೆಯರನ್ನು ಕಣಕ್ಕಿಳಿಸಿದರೆ, 9 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಎಸ್‌ಡಿಪಿಐ 4 ಮಹಿಳೆಯರನ್ನು ಕಣಕ್ಕಿಳಿಸಿದ್ದು, 5ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಸಿಪಿಐಎಂ ಇಬ್ಬರು ಮಹಿಳೆಯರನ್ನು ಕಣಕ್ಕಿಳಿಸಿದೆ. 12 ಪಕ್ಷೇತರ ಅಭ್ಯರ್ಥಿಗಳಲ್ಲಿ 5 ಮಹಿಳೆಯರು ಸ್ಪರ್ಧೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.