ಉಳ್ಳಾಲ: ಶೇ. 60ರಷ್ಟು ಮುಳುಗಿದ ಬಾರ್ಜ್
Team Udayavani, Jun 7, 2017, 1:07 PM IST
ಉಳ್ಳಾಲ: ಉಳ್ಳಾಲ ಮೊಗವೀರ ಪಟ್ಣದ ಬಳಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿರುವ ಕಡಲ್ಕೊರೆತ ತಡೆ ಕಾಮಗಾರಿಯ ಬಾರ್ಜ್ ನಿಧಾನಕ್ಕೆ ಮುಳುಗುತ್ತಿದ್ದು, ಮಂಗಳವಾರ ಸಮುದ್ರದ ಅಲೆಗಳ ಅಬ್ಬರಕ್ಕೆ ಶೇ. 60ರಷ್ಟು ಮುಳುಗಡೆಯಾಗಿದೆ.
ಆಂಧ್ರಪ್ರದೇಶ ಮೂಲದ “ಧರ್ತಿ’ ಕಂಪೆನಿಗೆ ಸೇರಿದ ಬಾರ್ಜ್ ಜೂ. 3ರಂದು ಮೊಗವೀರಪಟ್ಣದ ಸಮುದ್ರ ದಡದಿಂದ ಸುಮಾರು 700 ಮೀ. ದೂರದಲ್ಲಿ ಶಾಶ್ವತ ಕಾಮಗಾರಿಯ ರೀಫ್ ಕಾಮಗಾರಿಗೆ ಸಿಲುಕಿ ಮುಳುಗತೊಡಗಿತ್ತು. ಅದೇ ದಿನ ಸಂಜೆ ವೇಳೆಗೆ ಬಾರ್ಜ್‌ನ ಒಂದು ಕಂಪಾರ್ಟ್‌ಮೆಂಟ್ ಹೋಳಾಗಿ ನೀರು ಒಳ ಬರಲು ಪ್ರಾರಂಭವಾಗಿತ್ತು. ಬಳಿಕ ನಿಧಾನಕ್ಕೆ ಬಾರ್ಜ್ ಸಮುದ್ರದ ಆಳಕ್ಕೆ ಇಳಿಯುತ್ತಿದೆ.
ಸೋಮವಾರ ಬಾರ್ಜ್‌ನ ಹಿಂಭಾಗದ ಬಲಬದಿ ಮುಳುಗಿದ್ದು ಮಂಗಳವಾರ ಎದುರು ಭಾಗವೂ ಮುಳುಗಿದೆ. ಬಾರ್ಜ್‌ನ ಮಧ್ಯಭಾಗಕ್ಕೆ ಅಲೆಗಳು ಅಪ್ಪಳಿಸಿ ನೀರು ಮೇಲಿನಿಂದ ಹರಿದು ಹೋಗುತ್ತಿದೆ.
ತೇಲಿ ಬರುತ್ತಿವೆ ಬಾರ್ಜ್‌ನ ಭಾಗಗಳು
ಸೋಮವಾರ ಸಂಜೆಯಿಂದ ಬಾರ್ಜ್ ನೊಳ ಗಿದ್ದ ಸಾಮಗ್ರಿಗಳು ಸಮುದ್ರ ತೀರಕ್ಕೆ ಬರ ಲಾರಂಭಿಸಿವೆ. ದೊಡ್ಡ ದೊಡ್ಡ ಟ್ಯಾಂಕ್‌ಗಳು, ಲೈಫ್ ಜಾಕೆಟ್, ಪಾತ್ರೆಗಳು ಮೊಗವೀರಪಟ್ಣ, ಕೋಟೆಪುರ, ಕಿಲೇರಿಯಾನಗರ, ಬೆಂಗ್ರೆ ಮತ್ತು ಕೇರಳದ ಕಡೆಗೆ ಸಮುದ್ರದಲ್ಲಿ ತೇಲಿ ಹೋಗುತ್ತಿವೆ. ಮೊಗವೀರಪಟ್ಣ ಬಳಿ ಭಾರೀ ಗಾತ್ರದ ನೀರಿನ ಟ್ಯಾಂಕ್ ಸಹಿತ ದೊಡ್ಡ ಕಬ್ಬಿಣದ ಬಾಕ್ಸ್ ದಡಕ್ಕೆ ಬಂದಿದೆ. ಬಾರ್ಜ್‌ನಲ್ಲಿದ್ದ ಸಣ್ಣ ಲೈಫ್ ಬೋಟ್ ಮೊಗವೀರಪಟ್ಣ ಬಳಿ ಕಲ್ಲಿಗೆ ಅಪ್ಪಳಿಸಿ ಛಿದ್ರಗೊಂಡಿದೆ.
ತೈಲ ಸೋರಿಕೆ ಆತಂಕ
ಮೊಗವೀರಪಟ್ಣ ಸೇರಿದಂತೆ ಉಳ್ಳಾಲದ ಸಮುದ್ರ ತಟದಲ್ಲಿ ಮೀನಿನ ಸಂತತಿ ಜಾಸ್ತಿ ಇರು ತ್ತದೆ. ಜೂನ್ ತಿಂಗಳು ಮೀನು ಮರಿ ಹಾಕುವ ಅವಧಿಯಾಗಿರುವುದರಿಂದ ಬಾರ್ಜ್ ನಲ್ಲಿರುವ ತೈಲ ಸೋರಿಕೆಯಿಂದ ಮೀನು ವಲಸೆ ಹೋಗುವ ಸಾಧ್ಯತೆಯಿದ್ದು , ಬಾರ್ಜ್ ಶಾಶ್ವತವಾಗಿ ಸಮುದ್ರ ದಲ್ಲಿ ಮುಳುಗಿದರೆ 3 ತಿಂಗಳ ಬಳಿಕ ನಾಡದೋಣಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ತೊಂದರೆಯಾಗಲಿದೆ ಎಂದು ಸ್ಥಳೀಯ ಮೀನುಗಾರ ಶರತ್ ಮೊಗವೀರಪಟ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ನಾಳೆ ತಜ್ಞರ ತಂಡ – ಜಿಲ್ಲಾಧಿಕಾರಿ ಭೇಟಿ
ಬಾರ್ಜ್‌ನ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ವನ್ನು ಸಂಬಂಧಿತ ಸಂಸ್ಥೆಯಾಗಲಿ, ಜಿಲ್ಲಾಡ ಳಿತ ವಾಗಲಿ ಕೈಗೊಂಡಿಲ್ಲ. ತೆರವಿಗೆ ಸಂಬಂಧಿಸಿ ದಂತೆ ಮುಂಬಯಿಯ ತಂಡವೊಂದು 2 ದಿನಗಳಿಂದ ಸುರತ್ಕಲ್‌ನಲ್ಲಿ ಬೀಡು ಬಿಟ್ಟಿದೆ. ಸಂಸ್ಥೆಯ ಮುಖ್ಯಸ್ಥರೊಂದಿಗೆ ಬಂದರು ಇಲಾಖೆ ಯೊಂದಿಗೆ ಚರ್ಚೆ ನಡೆಸುತ್ತಿದ್ದು, ಮಂಗಳವಾರ ರಾತ್ರಿಯೊಳಗೆ ಸ್ಪಷ್ಟ ನಿರ್ಧಾರ ಕೈಗೊಂಡ ಬಳಿಕ ಬುಧವಾರ ಡಿಸಿ ಭೇಟಿ ಮಾಡಿ ಬಳಿಕ ಬಾರ್ಜ್ ತೆರವಿನ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ತಡೆಗೋಡೆಯೇ ಆಧಾರ !
ಬಾರ್ಜ್‌ನ ಎಡಭಾಗದ ಹಿಂಬದಿ ಇನ್ನೂ ತಡೆಗೋಡೆ(ರೀಫ್)ಯ ಬಂಡೆಗಳಿಗೆ ಸಿಲುಕಿ ಕೊಂಡಿದ್ದು, ದಕ್ಷಿಣದಿಂದ ಅಥವಾ ಪಶ್ಚಿಮದಿಂದ ಬಲವಾದ ಗಾಳಿ ಬೀಸಿದರೆ ಬಾರ್ಜ್ ತಡೆಗೋಡೆ ಕಾಮಗಾರಿಯಿಂದ ಬೇರ್ಪಟ್ಟು ಮುಳುಗಲಿದೆ. ಕಳೆದ ನಾಲ್ಕು ದಿನಗಳಿಂದ ಬಾರ್ಜ್ ರೀಫ್‌ನ ಬಂಡೆಗಳಿಗೆ ಸಿಲುಕಿಕೊಂಡಿದ್ದು ಈವರೆಗೂ ಬೇರ್ಪಟ್ಟಿಲ್ಲ. ಪಶ್ಚಿಮದಿಂದ ಬರುವ ಅಲೆಗಳನ್ನು ರೀಫ್‌ನ ಬಂಡೆಗಳು ತಡೆಯುವುದರಿಂದ ಬಾರ್ಜ್‌ಗೆ ದೊಡ್ಡ ಅಲೆಗಳು ಅಪ್ಪಳಿಸುತ್ತಿಲ್ಲ ಎಂದು ಸ್ಥಳೀಯ ಮೀನುಗಾರರೋರ್ವರು ತಿಳಿಸಿದ್ದಾರೆ.
ಬೆಳದಿಂಗಳ ಸಂದರ್ಭದಲ್ಲಿ ಸಮುದ್ರ ಹೆಚ್ಚು ರೌದ್ರಾವತಾರ ತೋರುವುದರಿಂದ ಈ ಸಂದರ್ಭದಲ್ಲಿ ರೀಫ್‌ನಿಂದ ಬೇರ್ಪಡೆಯಾಗುವ ಸಂಭವವಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.