ಉಳ್ಳಾಲ: ಕುಸಿದ ಮನೆ; 5 ಮಂದಿ ಪಾರು
Team Udayavani, Aug 24, 2017, 7:10 AM IST
ಉಳ್ಳಾಲ: ಮಳೆಯಿಂದಾಗಿ ಗೋಡೆ ಕುಸಿಯುತ್ತಿರುವ ಶಬ್ದ ಕೇಳಿ ಹೊರಗೆ ಧಾವಿಸಿದ್ದರಿಂದ ಮನೆಯಲ್ಲಿದ್ದ ಐವರು ಪವಾಡಸದೃಶವಾಗಿ ಪಾರಾದ ಘಟನೆ ಇಲ್ಲಿನ ಕಿನ್ಯ ಗ್ರಾಮ ಪಂಚಾಯತ್ನ ಮಿನಾದಿಯಲ್ಲಿ ಸಂಭವಿಸಿದ್ದು, ಸುಮಾರು ಒಂದು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಪರಿಶಿಷ್ಟ ಸಮುದಾಯಕ್ಕೆ ಸೇರಿದ ಶ್ರೀನಿವಾಸ ಮತ್ತು ಭಾಗ್ಯಶ್ರೀ ದಂಪತಿಗೆ ಸೇರಿದ ಮನೆ ಇದಾಗಿದ್ದು, ನಸುಕಿನ ಜಾವ ಶಬ್ದ ಕೇಳಿ ಎಚ್ಚೆತ್ತಾಗ ಮನೆಯ ಪಾರ್ಶ್ವ ಕುಸಿಯುತ್ತಿರುವುದು ಕಂಡು ಬಂದಿದ್ದು, ಮನೆಯಲ್ಲಿದ್ದ ಶ್ರೀನಿವಾಸ ಮತ್ತು ಭಾಗ್ಯಶ್ರೀ ಹಾಗೂ ಮಕ್ಕಳಾದ ಸುಶಾಂತ್, ನಿಶಾಂತ್, ಶುಭಶ್ರೀ ಕೂಡಲೇ ಹೊರಗೆ ಓಡಿದ್ದರಿಂದ ಅಪಾಯದಿಂದ ಪಾರಾದರು. ಮನೆಯ ಮೇಲ್ಛಾವಣಿ ಕುಸಿದು, ಗೋಡೆಗಳಲ್ಲಿ ಬಿರುಕುಂಟಾಗಿದೆ.
ಸಹಾಯ ಬೇಕಾಗಿದೆ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಶ್ರೀನಿವಾಸ್ ಕೂಲಿ ಕಾರ್ಮಿಕರಾಗಿದ್ದು, ಮೂರು ತಿಂಗಳ ಹಿಂದೆಯಷ್ಟೇ ಅವರ ತಾಯಿಯೂ ತೀರಿ ಕೊಂಡಿದ್ದರು. ಶ್ರೀನಿವಾಸ್ ಅವರಿಂದಲೇ ಕುಟುಂಬ ನಿರ್ವಹಣೆಯಾಗ ಬೇಕಾಗಿದೆ. ಓರ್ವ ಪುತ್ರ ಅಂಗವಿಕಲ ನಾಗಿದ್ದು, ಇಬ್ಬರು ಮಕ್ಕಳು ಶಾಲೆ ಕಲಿಯು ತ್ತಿದ್ದಾರೆ. ಪ್ರಸ್ತುತ ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ.
ವಿಚಾರ ತಿಳಿದ ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಮತ್ತು ಉಪಾಧ್ಯಕ್ಷ ಸಿರಾಜ್ ಕಿನ್ಯ ಭೇಟಿ ನೀಡಿ ಮನೆ ದುರಸ್ತಿಯಾಗುವವರೆಗೆ ಸ್ಥಳೀಯವಾಗಿ ಬೇರೆ ಮನೆಗೆ ಕುಟುಂಬವನ್ನು ಸ್ಥಳಾಂತರಿಸಿದರು. ಪಂಚಾಯತ್ ಮತ್ತು ಸ್ಥಳೀಯ ದಾನಿಗಳ ನೆರವಿ ನಿಂದ ಹಣ ಸಂಗ್ರಹಿಸಿ ದುರಸ್ತಿಗೆ ಯತ್ನಿಸಲಾಗುವುದು ಎಂದು ಸಿರಾಜ್ ಕಿನ್ಯಾ ತಿಳಿಸಿದ್ದಾರೆ.ಸ್ಥಳಕ್ಕೆ ಸಮಾಜ ಸೇವಕ ನಾರಾಯಣ ಕಜೆ, ಪಿಡಿಒ ಪೂರ್ಣಿಮಾ ಮತ್ತು ಕಂದಾಯ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.