Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ನಿರಂತರ 21 ದಿನ ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯ ಶಿಕ್ಷಕ ಸಂತೋಷ್
Team Udayavani, Jan 2, 2025, 1:06 AM IST
ಉಳ್ಳಾಲ: ತಾಯಿ ಮತ್ತು ಇಬ್ಬರು ಮಕ್ಕಳ ಸಾವಿಗೆ ಕಾರಣವಾದ ಮಂಜನಾಡಿ ಗ್ರಾಮದ ಖಂಡಿಕದಲ್ಲಿ ನಡೆದಿದ್ದ ಗ್ಯಾಸ್ ಸೋರಿಕೆ ಘಟನೆ ಬಳಿಕ 21 ದಿನಗಳ ಕಾಲ ಪ್ರತಿದಿನವೂ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದ ಶಾಲಾ ಮುಖ್ಯ ಶಿಕ್ಷಕನ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ನರಿಂಗಾನದ ಮೊಂಟೆಪದವು ಸರಕಾರಿ ಪ್ರೌಢ ಶಾಲೆಯ (ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ) ಶಿಕ್ಷಕ ಸಂತೋಷ್ ಕುಮಾರ್ ಅವರು 21 ದಿನವೂ ಶಾಲೆ ಮುಗಿಸಿ ಸಂಜೆಯಿಂದ ರಾತ್ರಿವರೆಗೆ ಆಸ್ಪತ್ರೆಯಲ್ಲಿದ್ದು ಕೊಂಡು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದ್ದರು.
ಡಿ. 8ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ಸಂದರ್ಭ ಗ್ಯಾಸ್ ಸೋರಿಕೆಯಾಗಿದ್ದು, ಇದರ ಅರಿವಿಲ್ಲದೆ ತಾಯಿ ಖುಬ್ರಾ ಶೌಚಾಲಯಕ್ಕೆ ತೆರಳಲು ಲೈಟ್ ಸ್ವಿಚ್ ಹಾಕಿದಾಗ ಮನೆಯ ತುಂಬಾ ಬೆಂಕಿ ಆವರಿಸಿ ತಾಯಿ, ಮೂವರು ಮಕ್ಕಳಾದ ಝುಲೇಖಾ ಮಹದಿಯಾ, ಮಝಿಯಾ ಮತ್ತು ಮಾಯಿಝ ಗಂಭೀರ ಸುಟ್ಟ ಗಾಯಕ್ಕೊಳಗಾಗಿದ್ದರು. ಅವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೊನೆಯ ಕ್ಷಣದವರೆಗೂ
ಸಾಂತ್ವನ ಹೇಳುತ್ತಿದ್ದರು
ತಾಯಿ ಗಂಭೀರ ಸ್ಥಿತಿಯಲ್ಲಿ ಬೇರೆ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂವರು ಸಹೋದರಿಯರನ್ನು ಒಂದೇ ಐಸಿಯುವಿ ನಲ್ಲಿ ಇರಿಸಲಾಗಿತ್ತು. ಅವರು ಪರಸ್ಪರ ಸಾಂತ್ವನ ಹೇಳಿಕೊಳ್ಳುತ್ತಿದ್ದರು. ಡಿ.13ಕ್ಕೆ ತಾಯಿ ಸಾವನ್ನಪ್ಪಿದ್ದು, ಈವಿಷಯವನ್ನು ಪುತ್ರಿಯರಿಗೆ ತಿಳಿಸಿರಲಿಲ್ಲ. ಹಿರಿಯ ಸಹೋದರಿ ಝುಲೇಖಾ ಮೆಹದಿಯಾ ಡಿ. 26ರಂದು ಮೃತಪಟ್ಟ ವಿಚಾರವನ್ನು ಮತ್ತಿಬ್ಬರು ಸಹೋದರಿಯರಿಗೆ ತಿಳಿಸಿರಲಿಲ್ಲ. ಡಿ. 28ರಂದು ಮೂರನೇ ಪುತ್ರಿ ಫಾತಿಮತ್ ಮಾಯಿಝ ಸಾವಿನ ಸಂದರ್ಭದಲ್ಲಿ ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದ ಮಝೀಹಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮಾವನ ಮನೆಗೆ ಕಳುಹಿಸಿದ್ದು,ತಾಯಿ ಮತ್ತು ಇಬ್ಬರು ಸಹೋದರಿಯರು ಮೃತಪಟ್ಟ ವಿಚಾರ ಈಕೆಗೆ ತಿಳಿದಿಲ್ಲ. ಎಲ್ಲರೂ ಗುಣಮುಖರಾಗುವ ವಿಶ್ವಾಸ ಅವರಲ್ಲಿತ್ತು ಎನ್ನುತ್ತಾರೆ ಶಿಕ್ಷಕ ಸಂತೋಷ್ ಸಾವಿನ ಅಂಚಿನಲ್ಲಿದ್ದರೂ ಕಲಿಕೆಯ ವಿಚಾರದಲ್ಲಿ ಚಿಂತೆಪ್ರತಿದಿನ ಸಂಜೆ ನಾನು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನೋಟ್ಸ್ ಮತ್ತು ಪರೀಕ್ಷೆ ಬಗ್ಗೆ ಚಿಂತಿಸುತ್ತಿದ್ದರು. ಪರೀಕ್ಷೆ ಬರೆಯದೇ ನಿಮ್ಮನ್ನು ತೇರ್ಗಡೆ ಮಾಡುತ್ತೇವೆ ಎಂದು ಧೈರ್ಯ ನೀಡುತ್ತಿದ್ದೆ. ಆಗ ವಿದ್ಯಾರ್ಥಿನಿಯರು ಮುಖದಲ್ಲಿ ಸ್ವಲ್ಪ ಸಮಾಧಾನ ಕಾಣುತ್ತಿದ್ದೆ ಎನ್ನುತ್ತಾರೆ ಸಂತೋಷ್.
ವಿದ್ಯಾರ್ಥಿಗಳ ಆಪ್ತ ಶಿಕ್ಷಕ
ಮೊಂಟೆಪದವು ಸರಕಾರಿ ಪ್ರೌಢಶಾಲೆಯಲ್ಲಿ 20 ವರ್ಷ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದ ಆಂಗ್ಲ ಭಾಷಾ ಶಿಕ್ಷಕ ಸಂತೋಷ್ ಅವರು ವಿದ್ಯಾರ್ಥಿಗಳಿಗೆ ತುಂಬಾ ಆಪ್ತರಾಗಿದ್ದಾರೆ. ಆರಂಭದಲ್ಲಿ 300ರಷ್ಟು ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಈಗ 1,300ರಷ್ಟು ಮಕ್ಕಳು ಓದುತ್ತಿದ್ದಾರೆ. ಸಂತೋಷ್ ಅವರು ಜಿಲ್ಲಾ ಉತ್ತಮ ಶಿಕ್ಷಕ, ಯೇನೆಪೊಯ ವಿವಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದರು. ಈ ಮೂವರು ವಿದ್ಯಾರ್ಥಿನಿಯರನ್ನು ಎಲ್‌ಕೆಜಿಯಿಂದಲೂ ಇದೇ ಶಾಲೆಯಲ್ಲಿ ಓದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.