ಉಳ್ಳಾಲ: 47 ಮನೆ ಅಪಾಯದಲ್ಲಿ, ಒಂದು ಸಂಪೂರ್ಣ ಹಾನಿ
Team Udayavani, Oct 13, 2018, 10:57 AM IST
ಉಳ್ಳಾಲ: ಚಂಡಮಾರುತ ಪ್ರಭಾವದಿಂದ ಮೂರು ದಿನಗಳಿಂದ ಸಮುದ್ರದಲ್ಲಿ ಕಾಣಿಸಿಕೊಂಡಿರುವ ಬಿರುಸು ಶುಕ್ರವಾರವೂ ಮುಂದುವರಿದಿತ್ತು. ಬೃಹತ್ ಅಲೆಗಳ ಅಬ್ಬರಕ್ಕೆ ಝೊಹರಾ ರಹೀಮ್ ಅವರ ಮನೆ ಸಂಪೂರ್ಣ ಹಾನಿಯಾಗಿದೆ. ಇನ್ನೂ 47 ಮನೆಗಳು ಅಪಾಯದಲ್ಲಿವೆ.
ಉಳ್ಳಾಲ ಕೈಕೋ, ಕಿಲೆರಿಯಾ ನಗರ, ಸುಭಾಷ್‌ನಗರದಲ್ಲಿ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿವೆ. ಕೈಕೋದಲ್ಲಿ ಝೋಹರಾ ರಹೀಮ್ ಮನೆ ಸಮುದ್ರ ಪಾಲಾಗಿದೆ. ಸೋಮೇಶ್ವರ ಉಚ್ಚಿಲದ ಪೆರಿಬೈಲು ಪ್ರದೇಶದಲ್ಲೂ ಅಲೆಗಳು ರಸ್ತೆ ಬದಿಗೆ ಅಪ್ಪಳಿಸುತ್ತಿದ್ದು, ಮೂರು ಮನೆಗಳಿಗೆ ಹಾನಿಯಾಗಿದೆ.
ಸಮುದ್ರ ಉಬ್ಬರ: ಜನರಿಗೆ ಆತಂಕ
ಉಳ್ಳಾಲ ಮತ್ತು ಸೋಮೇಶ್ವರದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿವೆ. ಶುಕ್ರವಾರ ಮುಂಜಾವ ಕೈಕೋ ಇಂದಿರಾನಗರದಲ್ಲಿ 16 ಮನೆಗಳಿಗೆ ಅಲೆಗಳು ಅಪ್ಪಳಿಸಿ ಜನರು ಆತಂಕ
ಗೊಂಡು ಹೊರಗೋಡಿ ಬಂದಿದ್ದರು.
ಅಪಾಯದ ಸೂಚನೆ ನೀಡಲಾಗಿತ್ತು
ಉಳ್ಳಾಲ ಕೈಕೋ, ಕಿಲೆರಿಯಾನಗರ, ಸುಭಾಷ್‌ನಗರದಲ್ಲಿ ಸಮುದ್ರ ತಟದ 167 ಮನೆಗಳಲ್ಲಿ 47 ಮನೆಗಳನ್ನು ಅತ್ಯಂತ ಅಪಾಯಕಾರಿ ಎಂದು ಗುರುತಿಸಿ, ಮನೆ ಖಾಲಿ ಮಾಡಿ ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿತ್ತು ಎಂದು ನಗರಸಭಾ ಪೌರಾಯುಕ್ತೆ ವಾಣಿ ಆಳ್ವ ಮಾಹಿತಿ ನೀಡಿದ್ದಾರೆ. ಈಗಾಗಲೇ ಹೆಚ್ಚಿನ ಮನೆಗಳ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕೌನ್ಸಿಲರ್ ಮಹಮ್ಮದ್ ಮುಕ್ಕಚ್ಚೇರಿ, ಬಶೀರ್ ಕೈಕೋ, ಪೌರಾಯುಕ್ತೆ ವಾಣಿ ಆಳ್ವ, ಗ್ರಾಮಕರಣಿಕ ಪ್ರಮೋದ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮುಖ್ಯಮಂತ್ರಿ ಬಳಿ ನಿಯೋಗ
ಕೈಕೋ, ಮುಕ್ಕಚ್ಚೇರಿ, ಕಿಲೆರಿಯಾ ನಗರದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ನೀಡುವಂತೆ ಜಾತ್ಯತೀತ ಜನತಾದಳದ ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ನಿಯೋಗದಲ್ಲಿ ಯು.ಎಚ್. ಫಾರೂಕ್, ನಝೀರ್ ಉಳ್ಳಾಲ, ಅಶ್ರಫ್ ಬಾವ ಕೋಡಿ, ಮಹಮ್ಮದ್ ಬಶೀರ್ ಕೈಕೋ, ಎವೆರಸ್ಟ್ ಮುಸ್ತಾಫ ಮತ್ತಿತರ ಜೆಡಿಎಸ್ ಮುಖಂಡರು ಇದ್ದರು.
ಸುರತ್ಕಲ್, ಮಲ್ಪೆ: ಕಡಲು ಶಾಂತ
ಸುರತ್ಕಲ್/ಮಲ್ಪೆ: ಮೂರ್‍ನಾಲ್ಕು ದಿನಗಳಿಂದ ಉಗ್ರ ಸ್ವರೂಪ ತಾಳಿದ್ದ ಇಲ್ಲಿನ ಸಮುದ್ರ ಶುಕ್ರವಾರ ಶಾಂತಗೊಂಡಿದೆ. ಬೆಳಗಿನಿಂದ ಸಹಜ ಸ್ಥಿತಿಗೆ ಮರಳಿದೆ. ನಾಲ್ಕು ದಿನಗಳಿಂದ ಸುರತ್ಕಲ್ ಮತ್ತು ಮಲ್ಪೆ ಸಮುದ್ರ ತೀರ ಮರಳು ಕೊರೆತದಿಂದ ಆಳವಾಗಿದ್ದು, ಬಂಡೆ ಕಲ್ಲುಗಳನ್ನು ಸಮುದ್ರ ಆವರಿಸಿದೆ.
ಶನಿವಾರದಿಂದ ಯಥಾಸ್ಥಿತಿಗೆ
ಚಂಡಮಾರುತ ಮತ್ತು ಸುಳಿಗಾಳಿಯಿಂದಾಗಿ ಅರಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿತ್ತು. ಶನಿವಾರದಿಂದ ಕಡಲಿನಬ್ಬರ ಇಳಿಮುಖವಾಗಲಿದೆ. ರವಿವಾರದಿಂದ ಸಮುದ್ರ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.