ಉಳಾಯಿಬೆಟ್ಟು: ತುಳುನಾಡ ಕೆಸರ್ದಗೊಬ್ಬುಲು ಉದ್ಘಾಟನೆ
Team Udayavani, Jul 5, 2018, 11:01 AM IST
ಉಳಾಯಿಬೆಟ್ಟು: ನಮ್ಮ ಪೂರ್ವಜರು ಮಣ್ಣಿನಲ್ಲೇ ದುಡಿಯುತ್ತಿದ್ದರು. ಮಣ್ಣಿನಲ್ಲಿ ಔಷಧೀಯ ಗುಣವಿದ್ದು, ಇದರಿಂದ ಅನೇಕ ಚರ್ಮರೋಗಗಳು ನಿವಾರಣೆಯಾಗುತ್ತವೆ ಎಂದು ಲಯನ್ಸ್ ಕ್ಲಬ್‌ನ ಡಾ| ಗೀತಾ ಪ್ರಕಾಶ್ ಅವರು ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ನೀರುಮಾರ್ಗ ವಲಯ, ಲಯನ್ಸ್ ಕ್ಲಬ್ ಮಂಗಳೂರು-ಕಾವೂರು, ಶ್ರೀ ಮಹಾಮ್ಮಾಯಿ ನ್ಪೋರ್ಟ್ಸ್ ಕ್ಲಬ್ ಉಳಾಯಿಬೆಟ್ಟು, ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ಭಜನ ಸೇವಾ ಸಮಿತಿ ಉಳಾಯಿಬೆಟ್ಟು ಇವರ ಜಂಟಿ ಆಶ್ರಯದಲ್ಲಿ ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಇತ್ತೀ ಚೆಗೆ ತುಳುವೆರೆ ಕೂಟ ಕೆಸರ್ದಗೊಬ್ಬುಲು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂ. ಅಧ್ಯಕ್ಷ ವಸಂತ್ ಕುಮಾರ್ ಪೆರ್ಮಂಕಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಕಾವೂರು ಅಧ್ಯಕ್ಷ ಸತೀಶ್ ಶೆಟ್ಟಿ ಕಡಂಬಿಲ, ಮೊಕ್ತೇಸರ ಶ್ರೀನಿವಾಸ ಮಾಣೈಮಾಂಜ, ಸತೀಶ್ ಶೆಟ್ಟಿ ಮೂಡು ಜಪ್ಪುಗುತ್ತು, ಪಂಚಾಯತ್ ಉಪಾಧ್ಯಕ್ಷೆ ಸೌಮ್ಯಾ ಪಂಡಿತ್, ವಲಯ ಅಧ್ಯಕ್ಷ ಶ್ರೀಧರ್ ತಲ್ಲಿಮಾರ್, ಭಾಗೇಶ್ವರಿ ಸತೀಶ್ ಶೆಟ್ಟಿ, ದಿವಾಕರ ತಲ್ಲಿಮಾರು, ಮೇಲ್ವಿಚಾರಕ ಸಂಪತ್ ಕುಮಾರ್ ಸೇವಾಪ್ರತಿನಿಧಿ ಸುರೇಶ್ ಅರಂತಕೋಡಿ ಉಪಸ್ಥಿತರಿದ್ದರು. ರಾಜೀವ ಶೆಟ್ಟಿ ಸಲ್ಲಾಜೆ ಸ್ವಾಗತಿಸಿ, ಸಂಧ್ಯಾ ಭಂಡಾರಿ ನಿರೂಪಿಸಿದರು. ಅಶೋಕ್ ಕೊಟ್ಟಾರಿ ಅಡ್ಯಾರ್ ವಂದಿಸಿದರು.
ವಿವಿಧ ಸ್ಪರ್ಧೆಗಳು
ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆಯನ್ನು ಕೆಸರಿನಲ್ಲಿ ನಡೆಸಲಾಯಿತು. ಕೆಸರಿನಲ್ಲಿ ಓಟ, ಎತ್ತಿನ ಬಂಡಿ, ಹಗ್ಗ ಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆ, ತ್ರೋಬಾಲ್, ವಾಲಿಬಾಲ್, ನಿಧಿ ಹುಡುಕುವ ಸ್ಪರ್ಧೆ ನಡೆಸಲಾಯಿತು. ತುಳುನಾಡಿನ ಖಾದ್ಯಗಳಾದ ಪತ್ರೊಡೆ, ಹಲಸಿನ ಗಟ್ಟಿ ಹಾಗೂ ಇತರ ತಿಂಡಿ ತಿನಿಸುಗಳನ್ನು ನೀಡಲಾಯಿತು.
ವಿದೇಶದಲ್ಲಿನ ಅಧ್ಯಯನ ಹೆಮ್ಮೆಯ ಸಂಗತಿ
ತುಳು ಭಾಷೆ, ಸಂಸ್ಕೃತಿ ಬಹಳ ಪುರಾತನವಾಗಿದ್ದು, ತುಳು ಭಾಷೆ, ಸಂಸ್ಕೃತಿ ಹಾಗೂ ಪಾಡ್ಡನಗಳನ್ನು ಇಂಗ್ಲಿಷ್‌ನಲ್ಲಿ ಭಾಷಾಂತರಿಸಿ, ಈ ಬಗ್ಗೆ ವಿದೇಶಗಳಲ್ಲಿ ಅಧ್ಯಯನ ನಡೆಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.
-ಉಮರಬ್ಬ ಯೋಜನಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.