ನವರಸರಾಜನಿಂದ ಅಷ್ಟರಸಾಭಿನಯ!
Team Udayavani, Jun 21, 2018, 4:47 PM IST
ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಸುದ್ದಿ ಮಾಡಿದ ‘ಉಮಿಲ್’ ಚಿತ್ರದ ಇನ್ನೊಂದು ವಿಶೇಷ ಸುದ್ದಿಯೊಂದು ಹೊರಬಿದ್ದಿದೆ.
ಚಿತ್ರರಂಗದಲ್ಲೇ ಮೊದಲ ಬಾರಿಗೆ ಎಂಬಂತೆ ತುಳು ರಂಗಭೂಮಿಯಲ್ಲಿ ನವರಸರಾಜೆ ಎಂದೇ ಖ್ಯಾತಿಗಳಿಸಿರುವ ಭೋಜರಾಜ ವಾಮಂಜೂರು ಈ ಚಿತ್ರ ನವರಸಗಳಲ್ಲಿ ಎಂಟನ್ನು ಅಭಿನಯಿಸಿ ಮಿಂಚಿದ್ದಾರೆ. ಸಾಮಾನ್ಯವಾಗಿ ಕಲಾವಿದರು ಒಂದು ಚಿತ್ರದಲ್ಲಿ, ದ್ವಿಪಾತ್ರ, ತ್ರಿಪಾತ್ರಗಳ ಮೂಲಕ ಅಭಿನಯಿಸುವುದನ್ನು ಕಂಡಿದ್ದೇವೆ. ದಶಾವತಾರಂ ಚಿತ್ರದಲ್ಲಿ ಕಮಲಹಾಸನ್ 10 ಪಾತ್ರಗಳಲ್ಲಿ ಮಿಂಚಿದ್ದಾರೆ. ಆದರೆ ಈ ಚಿತ್ರದಲ್ಲಿ ವಾಮಂಜೂರು ಅವರು ಪ್ರತಿ ರಸಕ್ಕೊಂದರಂತೆ ಎಂಟು ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಚಿತ್ರರಂಗದಲ್ಲಿ ಇಂತಹ ಪ್ರಯತ್ನ ಇದೇ ಮೊದಲ ಬಾರಿಗೆ ನಡೆದಿದ್ದು, ತುಳು ಚಿತ್ರಪ್ರೇಮಿಗಳಿಗೆ ವಿಭಿನ್ನ ಮನೋರಂಜನೆಯನ್ನು ನೀಡಲಿದೆ. ಜತೆಗೆ ಅರವಿಂದ ಬೋಳಾರ್ ಅವರು ದ್ವಿಪಾತ್ರದಲ್ಲಿ ಮಿಂಚಿದ್ದು, ನವೀನ್ ಡಿ. ಪಡೀಲ್ ಮುಸ್ಲಿಂ ಸಮಾಜಸೇವಕರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಆ್ಯನಿಮೇಶನ್ ವರ್ಕ್ ಕೆನಡಾದಲ್ಲಿ ನಡೆದಿದ್ದು, ನೊಣದ ಮಾಡೆಲಿಂಗ್, ರಿಗ್ಗಿಂಗ್ ಕೆಲಸ ಹೈದರಾಬಾದ್, ಮುಂಬಯಿನಲ್ಲಿ ನಡೆದಿದೆ. ಈ ಚಿತ್ರದಿಂದಾಗಿ ತುಳು ಚಿತ್ರವನ್ನು ಇತರ ಭಾಷಿಗರೂ ನೋಡಲಿದ್ದು, ಮಾರುಕಟ್ಟೆಯೂ ವೃದ್ಧಿಯಾಗಲಿದೆ ಎಂದು ಚಿತ್ರದ ನಿರ್ದೇಶಕ ರಂಜಿತ್ ಸುವರ್ಣ ಅಭಿಪ್ರಾಯಿಸುತ್ತಾರೆ.
ಈ ತಿಂಗಳ ಅಂತ್ಯಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ಜುಲೈನಲ್ಲಿ ಆಡಿಯೋ ರಿಲೀಸ್ ಆಗಲಿದೆ. ಚಿತ್ರದ ಗ್ರಾಫಿಕ್ಸ್ ವರ್ಕ್ ಈಗ ಮುಗಿದಿದ್ದು, ರಿರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ. ಆಗಸ್ಟ್ ಅಂತ್ಯದ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಭವಾನಿ ಫಿಲ್ಮ್ ಮೇಕರ್ಬ್ಯಾ ನರ್‌ನಡಿ ಚಿತ್ರ ಸಿದ್ಧಗೊಳ್ಳುತ್ತಿದ್ದು, ಕರುಣಾಕರ ಶೆಟ್ಟಿ, ಪ್ರಜ್ಞೆಶ್ ಶೆಟ್ಟಿ ಹಾಗೂ ಪ್ರಜ್ವಲ್ ಶೆಟ್ಟಿ ನಿರ್ಮಾಪಕರಾಗಿದ್ದು, ರವಿ ಬಸ್ರೂರು ಅವರು ಸಂಗೀತ ನೀಡಿದ್ದಾರೆ ಎಂದು ನಿರ್ದೇಶಕ ರಂಜಿತ್ ವಿವರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.