ಸಿಗದ ಪಡಿತರ ಚೀಟಿ, ವಿಲೇವಾರಿಯಾಗದ 94 ಸಿ ಅರ್ಜಿ: ಗ್ರಾಮಸ್ಥರ ಆಕ್ರೋಶ
Team Udayavani, Aug 3, 2017, 7:10 AM IST
ಬಂಟ್ವಾಳ : ಅರ್ಜಿ ಹಾಕಿ ವರ್ಷಗಳು ಕಳೆದರೂ ಪಡಿತರ ಚೀಟಿ ಸಿಗುತ್ತಿಲ್ಲ, 94ಸಿ ಅರ್ಜಿಗಳು ಕೂಡ ವಿಲೇವಾರಿ ಆಗುತ್ತಿಲ್ಲ. ಇದಕ್ಕೆ ಕಾರಣವೇನು? ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಯಾಕೆ? ಎಂಬಿತ್ಯಾದಿಯಾಗಿ ಪ್ರಶ್ನಿಸಿರುವ ತುಂಬೆ ಗ್ರಾಮಸ್ಥರು ಆಡಳಿತ ವರ್ಗದ ನಿಷ್ಕ್ರಿಯತೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮಲ್‌ಕಟ್ಟೆ ಶ್ರೀ ಶಾರದಾ ಸಭಾಂಗಣದಲ್ಲಿ ಅಧ್ಯಕ್ಷೆ ಹೇಮಲತಾ ಜಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಗ್ರಾಮಸಭೆಯಲ್ಲಿ ಅರ್ಜಿ ವಿಲೇವಾರಿಗೆ ಸತಾಯಿಸುತ್ತಿರುವ ಅಧಿಕಾರಿಗಳ ಬಗ್ಗೆ ಗ್ರಾಮಸ್ಥರು ದೂರಿದರು.
ಸನಿಹದ ಕಳ್ಳಿಗೆ ಗ್ರಾ.ಪಂ. ವ್ಯಾಪ್ತಿಯ 94 ಸಿಗೆ ಸಂಬಂಧಿಸಿದ ಎಲ್ಲ 270 ಅರ್ಜಿವಿಲೇವಾರಿ ಆಗಿವೆ. ಆದರೆ ತುಂಬೆ ಗ್ರಾ.ಪಂ.ವ್ಯಾಪ್ತಿಯ ಯಾವೊಂದು ಅರ್ಜಿಯೂ ವಿಲೇವಾರಿ ಆಗಿಲ್ಲ. ಇದಕ್ಕೆ ಕಾರಣವೇನು ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ವಶೀಲಿಬಾಜಿ ಬೇಡ
ಗ್ರಾಮ ಸಭೆ ಇರುವುದು ಜನರ ಸಮಸ್ಯೆ ಪರಿಹಾರಕ್ಕಾಗಿ ಜನರು ಅಧಿಕಾರಿಗಳ ಗಮನಕ್ಕೆ ತರುವ ಅಹವಾಲುಗಳಿಗೆ ಪರಿಹಾರ ದೊರೆಯಬೇಕು. ಅಧಿಕಾರಿಗಳು ಇರುವುದು ಜನರ ಸಮಸ್ಯೆ ಪರಿಹಾರಕ್ಕಾಗಿಯೇ ಹೊರತು ಯಾವುದೇ ವಶೀಲಿಬಾಜಿಗಾಗಿ ಅಲ್ಲ. ಜನತೆಯ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್ ಹೇಳಿದರು.
ಆಹಾರ ನಿರೀಕ್ಷಕರ ಗೈರು
“ಆಹಾರ ಇಲಾಖೆಗೆ ಸಂಬಂಧಪಟ್ಟ ಮಾಹಿತಿ ನೀಡಲು ಗ್ರಾಮಸಭೆಗೆ ಆಹಾರ ಇಲಾಖೆ ನಿರೀಕ್ಷಕರೇ ಬರ
ಬೇಕು. ಗ್ರಾಮಕರಣಿಕರಲ್ಲಿ ದೂರನ್ನು ಹೇಳಿಕೊಂಡರೆ ನಮ್ಮ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ’ ಎಂದು ಗ್ರಾಮಸ್ಥ ರೋರ್ವರು ಅಸಮಾಧಾನ ವ್ಯಕ್ತಪಡಿಸಿ ದರು. ಇದಕ್ಕೆ ಪ್ರತಿಕ್ರಿಯಿಸಿದ ನೋಡಲ್ ಅಧಿಕಾರಿಯವರು “ಆಹಾರ ನಿರೀಕ್ಷಕರು ಜಿಲ್ಲಾಧಿಕಾರಿ ಕಚೇರಿ ಸಭೆಯಲ್ಲಿ ಭಾಗವಹಿಸಿರುವ ಕಾರಣದಿಂದ ಗ್ರಾಮಸಭೆಗೆ ಹಾಜರಾಗಿಲ್ಲ. ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗುವುದು’ಎಂದರು.
ಸಣ್ಣ ಕೆಲಸ ಮಾಡಿದರೂ ಕೂಡ ಮೆಸ್ಕಾಂ ಸಿಬಂದಿ ಹಣ ಕೇಳುತ್ತಾರೆ ಎಂಬ ಆರೋಪಗಳು ಸಭೆಯಲ್ಲಿ ಕೇಳಿಬಂದವು.
ತಾ.ಪಂ. ಉಪಾಧ್ಯಕ್ಷ ಗಣೇಶ್ ಸುವರ್ಣ, ಪಿಡಿಒ ಚಂದ್ರಾವತಿ ಉಪಸ್ಥಿತರಿದ್ದರು.
ಆಧಾರ್ ಜೋಡಣೆಗೂ ವಸೂಲಿ
ಪಡಿತರ ಚೀಟಿಯೊಂದಿಗೆ ಆಧಾರ್
ಸಂಖ್ಯೆ ಜೋಡಣೆಗೆ ಸೈಬರ್‌ನಲ್ಲಿ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಾರೆ. ಇದರಿಂದಾಗಿ ಬಡಜನರಿಗೆ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿ ಬಂತು. ಸರಕಾರ ಹಾಗೂ ಸೈಬರ್ ಸಂಸ್ಥೆಗಳು ಒಳ ಒಪ್ಪಂದ ಮಾಡಿಕೊಂಡು ಜನರಿಂದ ಹಣ ಲೂಟಿ ಮಾಡುತ್ತಿವೆ. ಹಣ ನೀಡಿದರೂ ಕೂಡ ಆಧಾರ್ ಸಂಖ್ಯೆ ಸರಿಯಾಗಿ ಲಿಂಕ್ ಆಗದೆ ಯಾರಧ್ದೋ ಸಂಖ್ಯೆ ಇನ್ಯಾರಧ್ದೋ ಖಾತೆಗೆ ಜೋಡಣೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಆಧಾರ್ ಸಂಖ್ಯೆ ಜೋಡಣೆ ದೋಷದಿಂದ ತುಂಬೆ ಗ್ರಾ.ಪಂ. ವ್ಯಾಪ್ತಿಯ ಅನೇಕ ವಿದ್ಯಾರ್ಥಿಗಳು ಆರ್‌ಟಿಇ ಅವಕಾಶ ವಂಚಿತರಾಗಿದ್ದಾರೆ ಎನ್ನುವ ದೂರು ಕೂಡ ಸಭೆಯಲ್ಲಿ ಕೇಳಿಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.