ಅಗ್ನಿಶಾಮಕ ಠಾಣಾ ಕಟ್ಟಡಕ್ಕೆ ಅನಧಿಕೃತ ಭೀತಿ!

ನದಿ ಪರಂಬೋಕು ಸರ್ವೆ: ನಗರ ಪಂಚಾಯತ್‌ನಿಂದ ನೋಟಿಸ್‌ ಜಾರಿ

Team Udayavani, Feb 3, 2020, 5:45 AM IST

0202SLKP2

ಸುಳ್ಯ: ಪರವಾನಿಗೆ ರಹಿತವಾಗಿ ನಿರ್ಮಿಸಿರುವ ಕಟ್ಟಡಗಳ ಪಟ್ಟಿಯಲ್ಲಿ ಅಗ್ನಿಶಾಮಕ ಠಾಣೆಯೂ ಸೇರಿದ್ದು, ಅನಧಿಕೃತ ಕಟ್ಟಡ ಎಂದು ಗುರುತಿಸಿ ನ.ಪಂ. ನೋಟಿಸ್‌ ನೀಡಿದ ವಿಚಾರ ಬೆಳಕಿಗೆ ಬಂದಿದೆ.

ಈ ಮೂಲಕ ಸ್ವತಃ ಸರಕಾರಿ ಇಲಾಖೆಯೇ ನಿಯಮ ಪಾಲನೆ ಮಾಡದೆ ನದಿ ಪರಂಬೋಕು ಪ್ರದೇಶದಲ್ಲಿ ಕಟ್ಟಡ ನಿರ್ಮಿಸಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಈಡಾಗಿದೆ.

ಏನಿದು ಸರ್ವೆ?
ನಗರಕ್ಕೆ ಹೊಂದಿಕೊಂಡೇ ಹರಿಯುವ ಪಯಸ್ವಿನಿ ನದಿ ಇಕ್ಕೆಲಗಳಲ್ಲಿ ನದಿ ಪರಂಬೋಕು ಪ್ರದೇಶ ಒತ್ತುವರಿ ಮಾಡಿ ಅನಧಿಕೃತವಾಗಿ ಕಟ್ಟಡ ಕಟ್ಟಲಾಗಿದೆ ಎಂಬ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ತಾ.ಪಂ., ನ.ಪಂ. ಸಭೆಗಳಲ್ಲಿ ಸುದೀರ್ಘ‌ ಚರ್ಚೆ ನಡೆದಿತ್ತು. ಶಾಸಕ ಅಂಗಾರ ಮುತುವರ್ಜಿವಹಿಸಿ ನ.ಪಂ., ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ಜಂಟಿ ಸರ್ವೆ ನಡೆಸುವಂತೆ ಸೂಚಿಸಿದ್ದರು. ಆದರೆ ರಾಜ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಒಳಪಟ್ಟ ಕಾರಣ ಅವರನ್ನೊಳಗೊಂಡು ಸರ್ವೆ ನಡೆಸುವಂತೆ ಸೂಚಿಸಲಾಯಿತು. ಹಲವು ತಿಂಗಳ ಬಳಿಕ ಕಂದಾಯ ಹಾಗೂ ನ.ಪಂ. ಇಲಾಖೆ ಜಂಟಿಯಾಗಿ ಪ್ರಾಥಮಿಕ ಸರ್ವೆ ನಡೆಸಿ ನೋಟಿಸ್‌ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಜತೆಗೂಡಿ ಮುಂದಿನ ಹಂತದ ಸರ್ವೆ ನಡೆಸಲು ಉದ್ದೇಶಿಸಲಾಗಿದೆ.

ಎರಡು ಕಟ್ಟಡಗಳಿಗೆ ನೋಟಿಸ್‌
ಮೊದಲ ಹಂತದ ಸರ್ವೆಯಲ್ಲಿ ಎರಡು ಕಟ್ಟಡಗಳು ಪರವಾನಿಗೆ ಪಡೆಯದೆ ಕಟ್ಟಡ ಕಟ್ಟಿದೆ ಎಂದು ನ.ಪಂ.ನೋಟಿಸ್‌ ಕಳಿಸಿದೆ. ಇದರಲ್ಲಿ ಓಡಬಾಯಿ ಬಳಿ ಇರುವ ಅಗ್ನಿಶಾಮಕ ದಳದ ಠಾಣೆಯೂ ಸೇರಿದೆ. ಕಟ್ಟಡ ಕಟ್ಟಲು ಪರವಾನಿಗೆ ಪಡೆದಿರುವ ಬಗ್ಗೆ ಸೂಕ್ತ ದಾಖಲಾತಿ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ನ.ಪಂ. ಪ್ರಕಾರ ಈ ಕಟ್ಟಡವನ್ನು ಪರವಾನಿಗೆ ರಹಿತವಾಗಿ ಕಟ್ಟಿದ್ದು, ಅನಧಿಕೃತ ಕಟ್ಟಡ ಎಂದು ಗುರುತಿಸಿದೆ. ಈಗಾಗಿ ಸ್ವತಃ ಸರಕಾರಿ ಕಟ್ಟಡವೊಂದು ಅನಧಿಕೃತ ಪಟ್ಟಿಯ ಭೀತಿಯಲ್ಲಿ ಸಿಲುಕಿದೆ.

ಅಗ್ನಿಶಾಮಕ ಠಾಣೆ
2009ರಲ್ಲಿ ಸುಳ್ಯಕ್ಕೆ ಅಗ್ನಿಶಾಮಕ ಠಾಣೆ ಮಂಜೂರಾಗಿತ್ತು. ಸಣ್ಣ ಶೆಡ್‌ನ‌ಲ್ಲಿದ್ದ ಈ ಠಾಣೆಗೆ ನಾಲ್ಕು ವರ್ಷಗಳ ಹಿಂದೆ ಓಡಬಾೖ ಬಳಿ ತೂಗುಸೇತುವೆ ಸನಿಹ ಪಯಸ್ವಿನಿ ನದಿಗೆ ಹೊಂದಿಕೊಂಡಂತೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಎರಡು ಅಂತಸ್ತಿನ ಈ ಕಟ್ಟಡ ತಾಲೂಕಿನ ಕಾರ್ಯಕ್ಷೇತ್ರ ವ್ಯಾಪ್ತಿ ಹೊಂದಿದೆ.

45 ಮೀ. ದೂರ
ನದಿ ಪರಂಬೋಕು ಪ್ರದೇಶದಿಂದ 45 ಮೀ. ಬಿಟ್ಟು ಕಟ್ಟಡ ಕಟ್ಟಬೇಕು ಎನ್ನುವುದು ನಿಯಮ ಎನ್ನುತ್ತಾರೆ ನ.ಪಂ. ಅಧಿಕಾರಿಗಳು. ಕಟ್ಟಡ ಕಟ್ಟುವ ಮೊದಲು ಸ್ಥಳೀಯಾಡಳಿತ ಅದಕ್ಕೆ ಒಪ್ಪಿಗೆ ನೀಡಿರಬೇಕು. ಇಲ್ಲಿ ಅಗ್ನಿಶಾಮಕ ಕಚೇರಿಯ ಕಟ್ಟಡ ಜಾಗದ ಬಗ್ಗೆ ತಕರಾರು ಇರದಿದ್ದರೂ ಒಪ್ಪಿಗೆ ಪಡೆಯದೆ ಕಟ್ಟಿದ್ದಾರೆ. ಪರವಾನಿಗೆ ಅರ್ಜಿ ಸಲ್ಲಿಸಿದ್ದರೆ, ಪರಂಬೋಕು ಪ್ರದೇಶದಲ್ಲಿ ನಿಯಮಾನುಸಾರ ಕಟ್ಟಡ ಕಟ್ಟಲು ಅನುಮತಿ ನೀಡಬಹುದಿತ್ತು. ಆದರೆ ಅದನ್ನು ಪಾಲಿಸಿಲ್ಲ ಎನ್ನುವುದು ನ.ಪಂ. ಅಧಿಕಾರಿಗಳ ವಾದ.

ಪೈಚಾರ್‌ನಿಂದ ಕಾಂತಮಂಗಲ ತನಕವು ನದಿ ಇಕ್ಕೆಲಗಳಲ್ಲಿ ಹಲವು ಖಾಸಗಿ ಕಟ್ಟಡಗಳಿವೆ. ಹಲವು ವರ್ಷಗಳ ಹಿಂದೆ ಅಳತೆ ಮಾಡಿ ಕಟ್ಟಿರುವ ಕಟ್ಟಡಗಳಿವೆ. ಭೂ ಸವೆತ ಪರಿಣಾಮ ನದಿ ವ್ಯಾಪ್ತಿ ಅಗಲಗೊಂಡು ಈಗಿನ ಅಳತೆಗೆ ತಾಳೆ ಬಾರದಿರಬಹುದು. ಹಿಂದಿನ ಅಳತೆ ಆಧಾರವನ್ನೇ ಪರಿಗಣಿಸಿದರೆ ಪರಂಬೋಕು ಪ್ರದೇಶದಿಂದ ಹೆಚ್ಚಿನ ಕಟ್ಟಡಗಳು ಹೊರಗಿವೆ ಎನ್ನುವುದು ಹಲ ವರ ವಾದ. ಹೀಗಾಗಿ ಎರಡನೇ ಹಂತದ ಸರ್ವೆ ಕಾರ್ಯದಲ್ಲಿ ಇನ್ನಷ್ಟು ಗುರುತು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.

ಪರವಾನಿಗೆ ಪಡೆದಿಲ್ಲ
ನ.ಪಂ. ವ್ಯಾಪ್ತಿಯೊಳಗೆ ಖಾಸಗಿ ಅಥವಾ ಸರಕಾರಿ ಕಟ್ಟಡ ಕಟ್ಟುವ ಮೊದಲು ನ.ಪಂ.ನಿಂದ ಪರವಾನಿಗೆ ಪಡೆದುಕೊಳ್ಳುವುದು ನಿಯಮ. ಪಡೆಯದೆ ಕಟ್ಟಿದ್ದರೆ ಅದು ಅನಧಿಕೃತ. ಈ ಹಿಂದೆ ಅಗ್ನಿಶಾಮಕ ದಳ ಠಾಣೆಗೆ ನ.ಪಂ. ವ್ಯಾಪ್ತಿಯ ಓಡಬಾೖ ಬಳಿ ಸರಕಾರಿ ಜಾಗ ಕಾದಿರಿಸಿ ಸಾಮಾನ್ಯ ಸಭೆ ನಿರ್ಣಯಿಸಿ ಆ ಇಲಾಖೆಗೆ ನೀಡಿತ್ತು. ಕಟ್ಟಡ ಕಟ್ಟುವ ಸಂದರ್ಭ ಪರವಾನಿಗೆ ಪಡೆಯಬೇಕಿತ್ತು. ಆದರೆ ಅವರು ಪಡೆದಿಲ್ಲ. ಹಾಗಾಗಿ ನೋಟಿಸ್‌ ನೀಡಲಾಗಿದೆ.
– ಮತ್ತಡಿ, ಮುಖ್ಯಾಧಿಕಾರಿ, ನ.ಪಂ., ಸುಳ್ಯ

ಸರ್ವೆಗೆ ಸೂಚನೆ
ಅಗ್ನಿಶಾಮಕ ಕಟ್ಟಡ ಕಾರ್ಯಾರಂಭಕ್ಕೆ ಮೊದಲು ನ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಸ್ಥಳ ನೀಡಲಾಗಿತ್ತು. ಹಾಗಾಗಿ ನ.ಪಂ. ಇದನ್ನು ಅನಧಿಕೃತ ಕಟ್ಟಡ ಎಂದು ಗುರುತಿಸಲು ಸಾಧ್ಯವಿಲ್ಲ. ಮರು ಸರ್ವೆಗೆ ಸೂಚನೆ ನೀಡಲಾಗಿದೆ.
– ಎಸ್‌. ಅಂಗಾರ, ಶಾಸಕ, ಸುಳ್ಯ

ನೋಟಿಸ್‌ ಬಂದಿದೆ
ಕಟ್ಟಡ ಕಟ್ಟಿದ್ದಕ್ಕೆ ಪರವಾನಿಗೆ ಪಡೆದಿರುವ ಬಗ್ಗೆ ದಾಖಲೆ ಕೇಳಿ ನ.ಪಂ.ನಿಂದ ನೋಟಿಸ್‌ ಬಂದಿದೆ. ಈ ನೋಟಿಸ್‌ ಅನ್ನು ನಾವು ವಿಭಾಗೀಯ ಕಚೇರಿಗೆ ಕಳಿಸಿದ್ದು, ಅಲ್ಲಿಂದ ನಿರ್ದೇಶಕರ ಕಚೇರಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಉತ್ತರ ನೀಡುತ್ತಾರೆ.
– ವಿಶ್ವನಾಥ ಪೂಜಾರಿ, ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ, ಸುಳ್ಯ

-ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.