ಅನಧಿಕೃತ ಮೀನು ಕಾರ್ಖಾನೆ : ಕುಡಿಯುವ ನೀರಿಗೆ ತತ್ವಾರ
Team Udayavani, Mar 28, 2018, 4:46 PM IST
ಹೊಸಂಗಡಿ: ಮಂಜೇಶ್ವರ ಕಣ್ವತೀರ್ಥ ಪರಿಸರದಲ್ಲಿ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ನಿರ್ಮಾಣಗೊಂಡಿರುವ ಯುನೈಟೆಡ್ ಸೀ ಫುಡ್ ಮೀನು ಸಂಸ್ಕರಣ ಕಾರ್ಖಾನೆಯಿಂದ ಹೊರ ಬರುವ ರಕ್ತ ಮಿಶ್ರಿತ ತ್ಯಾಜ್ಯವನ್ನು ಅದೇ ಪರಿಸರದಲ್ಲಿ ಬಿಡುತ್ತಿರುವ ಪರಿಣಾಮವಾಗಿ ಸಮೀಪದ ಆರು ಮನೆಗಳ ಬಾವಿಯ ನೀರು ಮಲಿನಗೊಂಡಿದೆ. ಮಾತ್ರವಲ್ಲದೆ ದುರ್ಗಂಧ ಬೀರುತ್ತಿದೆ ಮತ್ತು ಸ್ಥಳೀಯ ಮಕ್ಕಳಲ್ಲಿ ತುರಿಕೆ, ಚರ್ಮರೋಗದಂತ ವಿಚಿತ್ರ ರೋಗ ಲಕ್ಷಣಗಳು ಕಂಡು ಬಂದಿವೆ ಎಂದು ಕಣ್ವತೀರ್ಥ ನಾಗರಿಕರ ಹಿತರಕ್ಷಣಾ ಸಮಿತಿ ಆರೋಪಿಸಿದೆ.
ಈ ವಿಚಾರವಾಗಿ ಈಗಾಗಲೇ ಕಾರ್ಖಾನೆಗೆ ನಾಗರಿಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿ, ಪಂಚಾಯತ್ ಕಾರ್ಯದರ್ಶಿ, ಆರೋಗ್ಯ ಇಲಾಖೆ ಹಾಗು ಪರಿಸರ ಇಲಾಖೆಗಳಿಗೆ ದೂರು ನೀಡಿದ್ದಾರೆ. ಆದರೆ ಈ ವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ವಿಚಾರವಾಗಿ ನೇತೃತ್ವ ವಹಿಸಿದ್ದ ಕಣ್ವತೀರ್ಥ ವಾರ್ಡ್‌ನ ಸದಸ್ಯರ ಮೇಲೆ ಈ ಹಿಂದೆ ಪಂಚಾಯತ್ ಆವರಣದಲ್ಲೇ ಹಲ್ಲೆ ನಡೆದಿತ್ತು.
ಈ ಬಗ್ಗೆ ಸಭೆ ಸೇರಿದ ಹಿತರಕ್ಷಣಾ ಸಮಿತಿ ನೂತನ ಸಮಿತಿಗೆ ಚಾಲನೆ ನೀಡಿದ್ದು ಅಧ್ಯಕ್ಷರಾಗಿ ವಿಜಯ್ ಕುಮಾರ್,
ಉಪಾಧ್ಯಕ್ಷರಾಗಿ ಮಧು ಸೂದನ್ ಆಚಾರ್ಯ, ವಿನಯ ಭಾಸ್ಕರ್, ವೀಣಾ ದಯಾನಂದ, ಕಾರ್ಯದರ್ಶಿಯಾಗಿ
ಪ್ರವೀಣ್ ಕೆ., ಪ್ರವಿತ್ ಮಂತೆರೋ, ಕೋಶಾಧಿಕಾರಿಯಾಗಿ ಸೋಮಪ್ಪ ದೇವಾಡಿಗ ಹಾಗೂ 39 ಜನರ ಕಾರ್ಯ
ಕಾರಿಣಿ ಸಮಿತಿಯನ್ನು ರಚಿಸಲಾಯಿತು. ಮುಖಂಡರಾದ ತಾರಾನಾಥ, ರಾಜೇಶ್, ಭಗವಾನ್‌ದಾಸ್, ಬಾಲಕೃಷ್ಣ,
ಬಾಬು ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.ಪಂಚಾಯತ್ ಆಡಳಿತಕ್ಕೆ ಮತ್ತೆ ದೂರು ನೀಡಿ ಸ್ಪಂದನೆ ಇಲ್ಲದಿದ್ದಲ್ಲಿ ಪಂಚಾಯತ್ ಕಚೇರಿಗೆ ಮುತ್ತಿಗೆ ನಡೆಸಲು ತೀರ್ಮಾನಿಸಲಾಯಿತು.
ಗೂಂಡಾಗಳಿಂದ ಬೆದರಿಕೆ
ಪಂಚಾಯತ್ ಆಡಳಿತ ಸಮಿತಿ ಅನಧಿಕೃತವಾಗಿ ಮೀನು ಕಾರ್ಖಾನೆಗೆ ಕಾನೂನು ಮೀರಿ ಬಹಿರಂಗ ಬೆಂಬಲ ನೀಡುತ್ತಿದ್ದು, ಕಾರ್ಖಾನೆ ಮಾಲಕರು ಗೂಂಡಾಗಳನ್ನು ಬಳಸಿ ಪ್ರತಿಭಟನಕಾರರಿಗೆ ಬೆದರಿಕೆ ನೀಡುತ್ತಿದ್ದಾರೆ. ಕೈಗಾರಿಕಾ ಅನುಮತಿ ಪತ್ರ ಇಲ್ಲ, ಆರೋಗ್ಯ ಇಲಾಖೆ, ವಿದ್ಯುತ್ ಇಲಾಖೆಯ ಅನುಮತಿ ಪತ್ರ ಇಲ್ಲದ ಕಾರ್ಖಾನೆ
ಪಂಚಾಯತ್ ವ್ಯಾಪ್ತಿಯಲ್ಲೂ ಇರುವಾಗ ಪಂಚಾಯತ್ ಆಡಳಿತ ಹಾಗು ರಾಜ್ಯ ಸರಕಾರ ಜನತೆಯನ್ನು ವಂಚಿಸುತ್ತಿದೆ ಎಂದು ಹಿತರಕ್ಷಣಾ ಸಮಿತಿ ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.