ಆರಂಭವಾಗದ ಮೂಲರಪಟ್ಣ ಸೇತುವೆ ಕಾಮಗಾರಿ

ಮಳೆಗಾಲದಲ್ಲಿ ಸಂಚಾರಕ್ಕೆ ಸಂಕಷ್ಟ

Team Udayavani, May 11, 2019, 6:10 AM IST

1005MALALI1

ಎಡಪದವು: ಮೂಲರಪಟ್ಣ ಸೇತುವೆ ಕುಸಿದು ವರ್ಷ ಕಳೆದಿದ್ದು, ನೂತನ ಸೇತುವೆ ಕಾಮಗಾರಿ ಇನ್ನೂ ಆರಂಭವಾಗದ ಕಾರಣ ಸಂಕಷ್ಟ ಮುಂದುವರಿದಿದೆ. ಮಳೆಗಾಲ ಹತ್ತಿರ ಇರುವುದರಿಂದ ಜನರೇ ನಿರ್ಮಿಸಿದ ತಾತ್ಕಾಲಿಕ ಮಣ್ಣಿನ ಸೇತುವೆ ಕೊಚ್ಚಿ ಹೋಗುವ ಭೀತಿಯಲ್ಲಿ ದೆ.

ಕಳೆದ ವರ್ಷ ಮಳೆಗಾಲದಲ್ಲಿ ಮೂಲರಪಟ್ಣದಲ್ಲಿ ಹಾದುಹೋಗಿರುವ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ದಿಢೀರ್‌ ಆಗಿ ಕುಸಿತಗೊಂಡು ಎಡಪದವು – ಬಂಟ್ವಾಳ ಸಂಪರ್ಕ ಕಡಿತ ಗೊಂಡಿತ್ತು. ಇದರಿಂದ ಕುಪ್ಪೆಪದವು, ಮುತ್ತೂರು, ನೋಣಲ್‌, ಎಡಪದವು, ಗಂಜಿಮಠದಿಂದ ಮೂಲರಪಟ್ಣ ಮುಖಾಂತರ ಬಂಟ್ವಾಳ ಬಿ.ಸಿ. ರೋಡ್‌ಗೆ ಸಂಪರ್ಕಿಸುವ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.

ಮುತ್ತೂರು ಶಾಲಾ ಸಮೀಪ ಇರುವ ತೂಗು ಸೇತುವೆಯ ಮುಖಾಂತರ ಮೂಲರಪಟ್ಣದಿಂದ ಬಂಟ್ವಾಳಕ್ಕೆ ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ. ಮೂಲರಪಟ್ಣದಿಂದ ಮುತ್ತೂರು ಶಾಲೆಯ ಮುಖಾಂತರ ತೂಗು ಸೇತು ವೆಯವರೆಗೆ ರಸ್ತೆ ನಿರ್ಮಿಸಿ ಅಲ್ಲಿ ಬಸ್‌ ನಿಲ್ಲಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಬಂಟ್ವಾಳ ಭಾಗದಿಂದ ಬರುವ ವಾಹನಗಳಿಗೆ ಮೂಲರಪಟ್ಣ ಮಸೀದಿ ಸಮೀಪ ತಂಗುದಾಣ ನಿರ್ಮಿಸಿ ಅಲ್ಲಿಯೇ ಬಸ್‌ಸಂಚಾ ರಕ್ಕೆ ಅವಕಾಶ ಕಲ್ಪಿಸ ಲಾಗಿತ್ತು. ಎರಡೂ ಭಾಗದಿಂದ ಇಳಿದ ಕಾರ್ಮಿಕರು ತೂಗುಸೇತುವೆಯ ಮುಖಾಂತರ ನಡೆದುಕೊಂಡು ಬಂದು ತಮ್ಮ ಸ್ಥಳಕ್ಕೆ ತಲುಪಬೇಕಾಗಿತ್ತು.

ಈ ಹಿನ್ನೆಲೆಯಲ್ಲಿ ಮೂಲರಪಟ್ಣದ ಸ್ಥಳೀ ಯರೇ ಸೇರಿಕೊಂಡು ಫಲ್ಗುಣಿ ನದಿಯ ಮುರಿದು ಬಿದ್ದ ಸೇತುವೆ ಸಮೀಪ ಮಣ್ಣಿನಿಂದಲೇ ತಾತ್ಕಾಲಿಕ ಸೇತುವೆ ಕಲ್ಪಿಸಿ ಅದರಲ್ಲೇ ವಾಹನಗಳಿಗೆ ಸಂಚರಿಸಲು ಅವಕಾಶ ಕಲ್ಪಿಸಿದ್ದರು. ಈ ತಾತ್ಕಾಲಿಕ ಉಪಕ್ರಮದಿಂದಾಗಿ ವಾಹನಗಳ ಮುಖಾಂ ತರ ಸಂಚರಿಸುವ ಪ್ರಯಾಣಿಕರಿಗೆ ಅನು ಕೂಲವಾಗಿತ್ತು. ಆದರೆ ಇದೀಗ ಮಳೆಗಾಲ ಹತ್ತಿರ ಬರುತ್ತಿದ್ದು, ನದಿಯಲ್ಲಿ ನೀರಿನ ಪ್ರಮಾಣ ಮಿತಿಮೀರುವುದರಿಂದ ತಾತ್ಕಾಲಿಕ ಮಣ್ಣಿನ ಸೇತುವೆ ನದಿಯ ಪ್ರವಾಹದಲ್ಲಿ ಕೊಚ್ಚಿಹೋಗುವ ಭೀತಿ ಎದುರಾಗಲಿ ದೆ. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡು ಮತ್ತೆ ಜನರು ಸಂಕಷ್ಟಕ್ಕೊಳ ಗಾಲಿದ್ದಾರೆ.

ಅಂದಾಜುಪಟ್ಟಿ ತಯಾರಿಕೆ
ಕುಸಿದು ಬಿದ್ದ ಸೇತುವೆಯ ಭಾಗ ದಲ್ಲಿಯೇ ಮತ್ತೂಂದು ಸೇತುವೆ ನಿರ್ಮಿ ಸಲು ಸುಮಾರು 14 ಕೋಟಿ ರೂ. ಮೊತ್ತದ ಅಂದಾಜುಪಟ್ಟಿ ತಯಾರಿ ಸಲಾಗಿದ್ದು, ಈ ಪ್ರಕ್ರಿಯೆ ಕಡತದಲ್ಲಿಯೇ ಬಾಕಿಯಾಗಿದೆ. ಮೂಲರಪಟ್ಣ ಸೇತುವೆ ಕುಸಿದು ವರ್ಷವಾಗುತ್ತಾ ಬಂದಿ ದೆ. ಇಷ್ಟು ದಿನಗಳ ಅಂತರದಲ್ಲಿ ಕಾಮಗಾರಿ ಆರಂಭವಾಗಬೇಕಿತ್ತು.

ಸೇತುವೆ ಕಾಮಗಾರಿ ಆರಂಭ ಗೊಂಡು ಪೂರ್ಣವಾಗ ಬೇಕಾದರೆ ಕನಿಷ್ಠ ಎರಡು ವರ್ಷ ವಾದರೂ ಬೇಕು. ಆದರೆ ಸದ್ಯ ಮಳೆಗಾಲ ಆರಂಭವಾಗುವುದರಿಂದ ಇನ್ನು ಆರು ತಿಂಗಳ ಕಾಲ ಕೆಲಸ ಆರಂಭಿಸಲು ಸಾಧ್ಯವಿಲ್ಲ. ಇದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕಾಮಗಾರಿ ಇನ್ನೂ ಆರಂಭವಾಗಿ ಸೇತುವೆ ಪೂರ್ಣ ವಾಗುವವರೆಗೆ ಇಲ್ಲಿನ ಜನರ ವನವಾಸ ತಪ್ಪುವು ದಿಲ್ಲ ಜನರ ಆವಶ್ಯಕತೆಗನುಗುಣ ವಾಗಿ ಕಡಿಮೆ ಅವ ಧಿಯಲ್ಲಿ ಪೂರ್ಣವಾಗುವಂತೆ ನವೀನ ಮಾದರಿಯಲ್ಲಿ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ.

 ಟೆಂಡರ್‌ ಕರೆದು ಕಾಮಗಾರಿ ಆರಂಭ
ಮೂಲರಪಟ್ಣ ನೂತನ ಸೇತುವೆ ಕಾಮಗಾರಿಗೆ ಒಟ್ಟು 14.2 ಕೋಟಿ ರೂ. ಅಗತ್ಯವಿದ್ದು, ಟೆಂಡರ್‌ ಕರೆ ಯಲು ಸಭೆ ಯಲ್ಲಿ ಚರ್ಚಿ ಸಲಾಗುವುದು. ನೂತನ ಸೇತುವೆ ನಿರ್ಮಾಣಕ್ಕೆ ಬೆಂಗಳೂರಿನ ತಂತ್ರಜ್ಞರೊಬ್ಬರು ಆಗಮಿಸಿ ಪರಿಶೀಲಿಸಿದ್ದಾರೆ. ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ಮೇಲ್ಗಡೆ ದುಂಡಗಿನ ಕಮಾನುಗಳ ಮಾದರಿಯಲ್ಲಿ ಕೂಳೂರು ಮಾದರಿಯ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ.
 - ರವಿಕುಮಾರ್‌, ಪಿಡಬ್ಲ್ಯುಡಿ,ಎಂಜಿನಿಯರ್‌

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

sand 1

Padubidri: ಮರಳು ಅಕ್ರಮ ಸಾಗಾಟ; ವಶ

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.