ಅವೈಜ್ಞಾನಿಕ ಕೆರೆ ಕಾಮಗಾರಿ: ಅನಾರು-ಕತ್ತರಿಗುಡ್ಡೆ ರಸ್ತೆ ಕುಸಿತ


Team Udayavani, Jul 24, 2017, 6:20 AM IST

kusita.jpg

– ವಿಶೇಷ ವರದಿ

ಬೆಳ್ತಂಗಡಿ: ಮಂಗಳೂರು -ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಗೆ ತಾಗಿ ಕೊಂಡಿರುವ ಚಾರ್ಮಾಡಿ ಗ್ರಾ. ಪಂ.ನ ಚಿಬಿದ್ರೆ ಗ್ರಾಮದ ಹಾಲಾಜೆ ಎಂಬಲ್ಲಿ ಕೆರೆಯೊಂದರ ಹೂಳೆತ್ತುವ ಅವೈಜ್ಞಾನಿಕ ಕಾಮಗಾರಿಯಿಂದ ಅನಾರು ಮಲೆಕುಡಿಯ ಕಾಲನಿ, ಕತ್ತರಿಗುಡ್ಡೆ ಕಾಲನಿ ಸಂಪರ್ಕ ರಸ್ತೆ ಕುಸಿತಗೊಂಡು ಈ ಭಾಗದ ಜನರು ಸಂಪರ್ಕ ಕಡಿದುಕೊಳ್ಳುವ ಭೀತಿಯಲ್ಲಿದ್ದರೆ, ಹೆದ್ದಾರಿಯ ಪಕ್ಕದಲ್ಲೇ ಇರುವ ಕೆರೆ ಇನ್ನಷ್ಟು ಕುಸಿತಗೊಂಡರೆ ರಾಷ್ಟ್ರೀಯ ಹೆದ್ದಾರಿಗೂ ಕುತ್ತು ಬರಲಿದೆ.

ಈ ಆತಂಕದ ಕುರಿತು ಕೆಲ ದಿನಗಳ ಹಿಂದೆ ಉದಯವಾಣಿ ಸುದಿನದ ಮುಖಪುಟದಲ್ಲಿ ವರದಿ ಪ್ರಕಟಿಸಿತ್ತು. ಆಗ ಸಂಬಂಧಪಟ್ಟ ಪಂಚಾಯತ್‌ನವರು ಅದರಲ್ಲಿ ನಮೂದಿಸಿದ ಮೊತ್ತ ವ್ಯತ್ಯಾಸ ಆಗಿದೆ ಎಂದು ತಗಾದೆ ತೆಗೆದಿದ್ದರೇ ವಿನಾ ಕಾಮಗಾರಿ ಸರಿಪಡಿಸುವತ್ತ ಗಮನಹರಿಸಿರಲಿಲ್ಲ.

ಮತ್ತಷ್ಟು ದುಃಸ್ಥಿತಿ
ಒಂದೆಡೆ ರಾಷ್ಟ್ರೀಯ ಹೆದ್ದಾರಿ, ಇನ್ನೊಂದೆಡೆ ಅನಾರು ಮಲೆಕುಡಿಯರ ಕಾಲನಿ ಹಾಗೂ ಕತ್ತರಿಗುಡ್ಡೆಗೆ ಸಂಪರ್ಕ ರಸ್ತೆ. ಇದಕ್ಕೆ ತಾಗಿಕೊಂಡಿರುವ ಸರಕಾರಿ ಜಮೀನಿನಲ್ಲಿದ್ದ ಕೆರೆ ಕಳೆದ ಕೆಲವು ವರ್ಷಗಳಿಂದ ಪಾಳುಬಿದ್ದ ಸ್ಥಿತಿಯಲ್ಲಿತ್ತು. ಇಲ್ಲಿನ ಗ್ರಾ.ಪಂ. ಉದ್ಯೋಗ‌ ಖಾತರಿ ಯೋಜನೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿ ಕೆರೆಯ ಸುತ್ತ ಪೊದರುಗಳನ್ನು ತೆಗೆದು ಶುಚಿಗೊಳಿಸಿದ್ದರು. ಬಳಿಕ ಈ ಕಾಮಗಾರಿ ಕೈಬಿಟ್ಟಿದ್ದರು. ಇದಾದ ಅನಂತರ ಜಿಲ್ಲಾ ಪಂಚಾಯತ್‌ನಿಂದ ಕೆರೆಯ ಹೂಳೆತ್ತಲು  2 ಲಕ್ಷ  ರೂ. ಅನುದಾನ ಮಂಜೂರಾಗಿ, ಹೂಳೆತ್ತುವ ಕಾರ್ಯದೊಂದಿಗೆ ಕೆರೆಯನ್ನು ಇನ್ನಷ್ಟು ಅಗಲ ಮಾಡಲಾಯಿತು.

ಕೆರೆಯ ಸುತ್ತ ಬƒಹದಾಕಾರದ ಮರಗಳಿದ್ದು  ಇದರ  ವಿಸ್ತರಣೆಯಿಂದ  ಮರಗಳು ಕುಸಿಯುವ ಹಂತದಲ್ಲಿತ್ತು. ಇದರ ರೆಂಬೆಕತ್ತರಿಸಿದರೂ ಎರಡು ಮರಗಳು ಕುಸಿದು ಕೆರೆಯ ನಾಲ್ಕು ಕಡೆಗಳಲ್ಲಿ,  ರಸ್ತೆಯೂ ಕುಸಿದಿದೆ. ಕೆರೆಯ ನಾಲ್ಕು ಕಡೆಗಳಲ್ಲೂ ಕುಸಿತವಾಗುತ್ತಿದೆ. ಅನಾರು ಮಲೆಕುಡಿಯರ ಕಾಲನಿ ಹಾಗೂ ಕತ್ರಿಗುಡ್ಡೆಗೆ ಹೋಗುವ ರಸ್ತೆಯೂ ಕುಸಿದಿದೆ.

ಕೊಳವೆ ಬಾವಿ ಕುಸಿತದ ಭೀತಿ
ಜೆಸಿಬಿ ಯಂತ್ರಗಳನ್ನು ಉಪಯೋಗಿಸಿ ಕೆರೆಯ ಕಾಮಗಾರಿ ನಡೆಸಲಾಗಿದ್ದು ಕೆರೆಯ ಸುತ್ತಲೂ ಮಣ್ಣು ಕುಸಿಯುತ್ತಿದೆ. ಗ್ರಾ.ಪಂ.ನ ಕೊಳವೆ ಬಾವಿ ಇದರ ದಡದಲ್ಲಿಯೇ ಇದ್ದು ಕುಸಿತದ ಭೀತಿಯಲ್ಲಿದೆ. ಚಾಲನೆಯಲ್ಲಿರುವ ಕುಡಿಯುವ ನೀರಿನ ಕೊಳವೆ ಬಾವಿಯನ್ನು ಉಳಿಸದಿದ್ದರೆ ನೀರಿನ ಸಮಸ್ಯೆಯೂ ಉದ್ಭವಿಸಬಹುದು.

ಕಾಲನಿ ರಸ್ತೆ
ಅನಾರು ಹಾಗೂ ಕತ್ತರಿಗುಡ್ಡೆ ಕಾಲನಿ ಸಹಿತ ಈ ಭಾಗದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿವೆ. ಕುಸಿತದಿಂದ ಈ ಭಾಗದ ಜನರು ರಸ್ತೆ ಸಂಪರ್ಕ ಕಡಿದುಕೊಳ್ಳುವ ಭಯದಲ್ಲಿದ್ದಾರೆ. ಸುಮಾರು 20 ಅಡಿಗಳಷ್ಟು ಅಗಲವಿದ್ದ ಡಾಮರು ರಸ್ತೆ ಇದೀಗ  ಕೇವಲ 8 ಅಡಿ ರಸ್ತೆಯಾಗಿ ಮಾರ್ಪಟ್ಟಿದೆ. ರಿûಾ ಹಾಗೂ ಜೀಪುಗಳು ಮಾತ್ರ ಇದರಲ್ಲಿ ಸಂಚರಿಸಲು ಸಾಧ್ಯವಾಗಿದೆ. 

ಈ ಭಾಗದಲ್ಲಿ ಶಾಲಾ ವಾಹನಗಳು ಸಂಚಾರ ಸ್ಥಗಿತಗೊಳಿಸಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲೂ ಜನರು ಪರದಾಡು
ವಂತಾಗಿದೆ. ಮನೆ, ಕಟ್ಟಡ ಕಟ್ಟಲು ಯಾವುದೇ ಸಾಮಗ್ರಿಗಳನ್ನು, ಸಲಕರಣೆಗಳನ್ನು ಘನ ವಾಹನಗಳಲ್ಲಿ ಕೊಂಡೊಯ್ಯು
ವಂತಿಲ್ಲ. ಕಾಮಗಾರಿಗಳನ್ನು ನಿಲ್ಲಿಸಬೇಕಾದ ಅನಿವಾರ್ಯ ಎದುರಾಗಿದೆ. ಈ ರಸ್ತೆ ಕುಸಿದರೆ ಪರ್ಯಾಯ ರಸ್ತೆಗಳೇ ಇಲ್ಲವಾಗಿದ್ದು, ಕೂಡಲೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿಯ ಜನರ ಒತ್ತಾಯವಾಗಿದೆ.

ತಾತ್ಕಾಲಿಕ ಮರಳಿನ ಚೀಲದ ತಡೆಗೋಡೆ
ಕಾಮಗಾರಿ ನಡೆಸಿ ಕೆರೆ ಕುಸಿತದಿಂದ  ಉಳಿದ ರಸ್ತೆಯ ಸಂಪರ್ಕ ಕಡಿತವಾಗದಂತೆ ಕುಸಿದ ಭಾಗದಲ್ಲಿ ಮರಳಿನ ಚೀಲ ಹಾಕಲಾಗಿದೆ. ಆದರೆ ಅದು ಸಾಕಷ್ಟು ಸಂಖ್ಯೆಯಲ್ಲಿಲ್ಲದ ಕಾರಣ ಈ ಚೀಲಗಳಿಂದ ರಸ್ತೆ ಉಳಿಸಲು ಸಾಧ್ಯವಾಗಲಾರದು.

ಹೆದ್ದಾರಿಗೂ ಅಪಾಯ
ಇದ್ದಷ್ಟೇ ಅಗಲದಲ್ಲಿ ಕೆರೆಯ ಹೂಳೆತ್ತುವ ಕೆಲಸ ಮಾಡಿದ್ದರೆ ಇಂತಹ ಕುಸಿತ ಉಂಟಾಗುತ್ತಿರಲಿಲ್ಲ. 4 ಸುತ್ತಲೂ ಕೆರೆಯು ಕುಸಿಯದಂತೆ ತಡೆಗೋಡೆಯ ನಿರ್ಮಾಣ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಹೆದ್ದಾರಿ ಹಾದು ಹೋಗುವ ಭಾಗದ ಕಡೆ ಗಮನ ಹರಿಸಬೇಕಾಗಿದೆ.

ಟಾಪ್ ನ್ಯೂಸ್

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ

1(1

Sullia: ವಿಎಒ ಹೊಸ ಕಟ್ಟಡಕ್ಕೆ ಅನುದಾನವಿಲ್ಲ !

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

4-train

Train; ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

International Conference ಅತ Buntakal Technical College: Student Symposium

Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.