
ಏಕರೂಪದ ರೇಷನ್ ಕಾರ್ಡ್; ದ.ಕ. ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಸಕಲ ತಯಾರಿ
ದರ ನಿಗದಿಯಾಗದ ಹಿನ್ನೆಲೆ ಗೊಂದಲ
Team Udayavani, Jan 10, 2020, 7:41 AM IST

ಮಂಗಳೂರು: ದೇಶಾದ್ಯಂತ ಏಕರೂಪದ ರೇಷನ್ ಕಾರ್ಡ್ ಮೂಲಕ ಪಡಿತರ ಪಡೆಯುವ ಯೋಜನೆಗೆ ಕೇಂದ್ರ ಸರಕಾರ ಚಾಲನೆ ನೀಡಿದ್ದರೂ ರಾಜ್ಯದಲ್ಲಿ ಜಾರಿಯಲ್ಲಿರುವ “ಉಚಿತ ಅಕ್ಕಿ’ಯಿಂದಾಗಿ ಬೇರೆ ರಾಜ್ಯದವರಿಗೆ ಪಡಿತರ ವಿತರಣೆ ಯಾವ ಮಾನದಂಡ ದಲ್ಲಿ ಮಾಡಬೇಕು ಎಂಬ ಗೊಂದಲ ಇದೀಗ ಆರಂಭವಾಗಿದೆ.
ಹೀಗಾಗಿ ರಾಜ್ಯದಲ್ಲಿ ಬೇರೆ ರಾಜ್ಯದವರ ಪಡಿತರ ಜೋಡಣೆ ಆಗಿ ಪ್ರಾಯೋಗಿಕ ನಡೆಸಿ ಯಶಸ್ಸಾಗಿದ್ದರೂ ಪಡಿತರ ವಿತರಣೆಯನ್ನು ಮಾತ್ರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಅಕ್ಕಿ ನೀಡಲಾಗುತ್ತಿದ್ದರೆ ಕೇರಳದಲ್ಲಿ ಕಿಲೋಗೆ 2 ರೂ. ಪಡೆಯಲಾಗುತ್ತದೆ. ಒಂದುವೇಳೆ ಕೇರಳದ ಕಾರ್ಡ್‌ದಾರರಿಗೆ ಕರ್ನಾಟಕದಲ್ಲಿ ಉಚಿತ ಅಕ್ಕಿ ನೀಡಿದರೆ ಕೇರಳ-ಕರ್ನಾಟಕ ಗಡಿ ಭಾಗದ ಜನತೆ ಕರ್ನಾಟಕದಲ್ಲಿಯೇ ಪಡಿತರ ಪಡೆಯುವ ಸಾಧ್ಯತೆಯಿದ್ದು, ರಾಜ್ಯಕ್ಕೆ ಹೊರೆಯಾಗಬಹುದು ಎಂಬ ಕಾರಣದಿಂದ ಕರ್ನಾಟಕದಲ್ಲಿ ಯಾವ ಕ್ರಮವನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಆಹಾರ ಇಲಾಖೆ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಹೀಗಾಗಿ ಬೇರೆ ರಾಜ್ಯದವರಿಗೆ ಪಡಿತರ ವಿತರಣೆ ಕರ್ನಾಟಕದಲ್ಲಿ ಇನ್ನೂ ಆರಂಭವಾಗಿಲ್ಲ. ಕೆಲವೇ ದಿನದಲ್ಲಿ ಸರಕಾರದಿಂದ ಅಧಿಕೃತ ಮಾಹಿತಿ ಪಡೆದು ಜಾರಿಗೊಳಿಸಲಾಗುವುದು ಎನ್ನುತ್ತಾರೆ ಆಹಾರ ಇಲಾಖೆಯ ದ.ಕ. ಜಿಲ್ಲಾ ಜಂಟಿ ನಿರ್ದೇಶಕ ಡಾ| ಮಂಜುನಾಥನ್.
ಏನಿದು ಯೋಜನೆ?
ಕೇಂದ್ರ ಸರಕಾರ “ಒಂದು ರಾಷ್ಟ್ರ-ಒಂದು ಕಾರ್ಡ್’ ವಿಶಿಷ್ಟ ಯೋಜನೆ ಜಾರಿಗೊಳಿಸಿದ್ದು, ಯಾವುದೇ ರಾಜ್ಯಕ್ಕೆ ಹೋದರೂ ಅಲ್ಲಿ ಸುಲಭವಾಗಿ ಪಡಿತರ ಪಡೆಯುವ ಅನುಕೂಲ ಕಲ್ಪಿಸಲಾಗಿದೆ. ಈ ಯೋಜನೆ ಪ್ರಕಾರ ಯಾವುದೇ ರೇಷನ್ ಕಾರ್ಡ್‌ದಾರನು ಆತ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ದೇಶದ ಯಾವುದೇ ಪಡಿತರ ಅಂಗಡಿಯಲ್ಲಿ ತನ್ನ ಬಳಿ ಇರುವ ಪಡಿತರ ಕಾರ್ಡ್ ಬಳಸಿ ರೇಷನ್ ಪಡೆಯಬಹುದು. ಅಂದರೆ ಕರ್ನಾಟಕದ ಕಾರ್ಡ್‌ದಾರರು ಕೇರಳದಲ್ಲಿ ಕೂಡ ಪಡಿತರ ಪಡೆಯಬಹುದು.
ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ತ್ರಿಪುರದಲ್ಲಿ ಜಾರಿಗೆ ಬಂದಿದೆ.
ಕೇರಳದಲ್ಲಿ ಅನುಷ್ಠಾನ
ಇಂಟರ್ ಸ್ಟೇಟ್ ಪೋರ್ಟಿಬಿಲಿಟಿ ಜಾರಿಗೆ ತಂದ ಹಿನ್ನೆಲೆಯಲ್ಲಿ ಕೇರಳದ ಎಲ್ಲ ಪಡಿತರ ಅಂಗಡಿಗಳಲ್ಲಿ ಕರ್ನಾಟಕದ ಬಿಪಿಎಲ್ ಹಾಗೂ ಎಎವೈ ರೇಶನ್ ಕಾರ್ಡ್‌ಗಳಿಗೂ ರೇಶನ್ ವಿತರಣೆ ಆರಂಭಿಸಲಾಗಿದೆ. ಗಡಿ ಪ್ರದೇಶದಲ್ಲಿ ವಾಸಿಸುವ ಅಥವಾ ಕೇರಳದಲ್ಲಿ ವಾಸವಿರುವ ಕರ್ನಾಟಕದ ಬಿಪಿಎಲ್, ಎಎವೈ ರೇಶನ್ ಕಾರ್ಡುದಾರರು ಕೇರಳ ದಲ್ಲಿ ರೇಶನ್ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.