ಜಿಎಸ್‌ಬಿ ದೇಗುಲಗಳ ಒಕ್ಕೂಟ: ಮಾಹಿತಿ ಶಿಬಿರ
Team Udayavani, May 31, 2017, 12:49 PM IST
ಮಂಗಳೂರು: ಜಿ.ಎಸ್.ಬಿ. ದೇವಾಲಯಗಳ ಒಕ್ಕೂಟದ ವತಿಯಿಂದ ಎಲ್ಲ ದೇವಾಲಯ ಮತ್ತು ಮಂದಿರಗಳಿಗೆ ಅನ್ವಯವಾಗುವ ತೆರಿಗೆ ಹಾಗೂ ಇತರ ಕಾನೂನು ಸಂಬಂಧ ವಿಚಾರಗಳ ಮಾಹಿತಿ ನೀಡಲು ವಿಶೇಷ ಶಿಬಿರವನ್ನು ಮೇ 28ರಂದು ಏರ್ಪಡಿಸಲಾಯಿತು.
ಮಂಗಳೂರು ವಲಯದ ದೇವಾಲಯಗಳ ಶಿಬಿರ ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಾಲಯದಲ್ಲಿ ನಡೆಯಿತು.
ಶ್ರೀ ವೆಂಕಟರಮಣ ದೇವಾಲಯದ ಮೊಕ್ತೇಸರ ಎಂ. ಪದ್ಮನಾಭ ಪೈ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಟಿ. ಗಣಪತಿ ಪೈ ಶಿಬಿರದ ಉದ್ದೇಶ ಹಾಗೂ ಎಲ್ಲ ದೇವಾಲಯಗಳು ಮುಂದೆ ಪಾಲಿಸಬೇಕಾದ ಕೆಲವು ನಿಯಮಗಳ ಬಗ್ಗೆ ವಿವರ ನೀಡಿದರು.
ಗೌತಮ್ ಪೈ ದೇವಾಲಯಕ್ಕೆ ಅನ್ವಯವಾಗುವ ಲೆಕ್ಕದ ಬಗ್ಗೆ ಹಾಗೂ ಜುಲೈಯಿಂದ ಅನ್ವಯವಾಗುವ ಜಿ.ಎಸ್.ಟಿ. ಬಗ್ಗೆ ವಿವರಿಸಿದರು. ನ್ಯಾಯವಾದಿ ಅಮೃತ್ ಕಿಣಿ ದೇವಾಲಯಕ್ಕೆ ಅನ್ವಯವಾಗುವ ಕಾನೂನು, ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ಅಧ್ಯಕ್ಷ ಯು. ಸುದರ್ಶನ್ ಮಲ್ಯ ಮಾತನಾಡಿ, ಎಲ್ಲ ದೇವಾಲಯಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಿದರು.
ರತ್ನಾಕರ ಕಾಮತ್ ವಂದಿಸಿದರು. ಸಿಎ ರಾಮಕೃಷ್ಣ ಪ್ರಭು, ಸಿಎ ಗಿರಿಧರ್ ಪ್ರಭು ಹಾಗೂ ವಿವಿಧ ದೇವಾಲಯಗಳ ಸುಮಾರು 45 ಪ್ರತಿನಿಧಿಗಳು ಈ ಶಿಬಿರದಲ್ಲಿ ಭಾಗವಹಿಸಿದರು.
ಪುತ್ತೂರು ವಲಯ
ಪುತ್ತೂರು ವಲಯದ ದೇವಾಲಯಗಳ ಶಿಬಿರ ಸಂಜೆ 4.30ಕ್ಕೆ ಬೆಳ್ತಂಗಡಿಯ ಲಾೖಲ ಶ್ರೀ ವೆಂಕಟರಮಣ ದೇವಾಲಯದಲ್ಲಿ ನಡೆಯಿತು. ದೇಗುಲದ ಮೊಕ್ತೇಸರ ಎಂ. ವಿವೇಕಾನಂದ ಪ್ರಭು ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಟಿ. ಗಣಪತಿಪೈ ಶಿಬಿರದ ಉದ್ದೇಶ ಹಾಗೂ ಎಲ್ಲ ದೇವಾಲಯಗಳು ಮುಂದೆ ಪಾಲಿಸ ಬೇಕಾದ ಹಾಗೂ ದೇವಾಲಯಗಳ ಮುಂಜಾಗರೂಕತೆ ಬಗ್ಗೆ ವಹಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ಲೆಕ್ಕಪರಿಶೋಧಕ ಎಂ. ಜಗನ್ನಾಥ್ ಕಾಮತ್ ದೇವಾಲಯಕ್ಕೆ ಅನ್ವಯವಾಗುವ ಲೆಕ್ಕದ ಬಗ್ಗೆ ಹಾಗೂ ಜುಲೈಯಿಂದ ಅನ್ವಯವಾಗುವ ಜಿ.ಎಸ್.ಟಿ. ಬಗ್ಗೆ ವಿವರ ನೀಡಿದರು. ನ್ಯಾಯವಾದಿ ಅಮೃತ್ ಕಿಣಿ ದೇವಾಲಯಕ್ಕೆ ಅನ್ವಯವಾಗುವ ಕಾನೂನು ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಖಜಾಂಚಿ ರಾಧಾಕೃಷ್ಣ ಭಕ್ತ ವಂದಿಸಿದರು. ದೇವಾಲಯಗಳ ಹಾಗೂ ಮಂದಿರಗಳ ಸುಮಾರು 42 ಪ್ರತಿನಿಧಿಗಳು ಶಿಬಿರದಲ್ಲಿ ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.