‘ನೆಲ ಜಲದ ರಕ್ಷಣೆಗೆ ಒಗ್ಗಟ್ಟಾಗಿ’
Team Udayavani, Nov 2, 2017, 10:45 AM IST
ಬೆಳ್ತಂಗಡಿ: ಏಕೀಕರಣದ ಬಳಿಕ ನಾಡಹಬ್ಬವಾಗಿ ಆಚರಿಸಲ್ಪಡುತ್ತಿರುವ ರಾಜ್ಯೋತ್ಸವ ಆಚರಣೆಗಷ್ಟೇ
ಸೀಮಿತವಾಗಬಾರದು. ಕನ್ನಡ ನಾಡಿನ ನೆಲ ಜಲದ ವಿಷಯ ಬಂದಾಗ ನಮ್ಮ ಒಗ್ಗಟ್ಟನ್ನು ನಾವು ಪ್ರದರ್ಶಿಸಿ ಅದನ್ನು
ಒಟ್ಟಾಗಿ ಕಾಪಾಡಬೇಕು ಎಂದು ತಹಶೀಲ್ದಾರ್ ಮಹಮ್ಮದ್ ಇಸಾಕ್ ಹೇಳಿದರು.
ಅವರು ಬುಧವಾರ ವಾಣಿ ಶಿಕ್ಷಣ ಸಂಸ್ಥೆಗಳ ಪ್ರಾಂಗಣದಲ್ಲಿ ತಾಲೂಕಿನ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣಗೈದು ಮಾತನಾಡಿದರು.
ನಿಡ್ಲೆ ಸರಕಾರಿ ಪ್ರೌಢಶಾಲೆ ಸಹಶಿಕ್ಷಕ ವಿನಾಯಕ ಜೋಷಿ, ರಾಜ್ಯೋತ್ಸವಕ್ಕೆ ಮುಖ್ಯ ಕಾರಣ ಸರ್ದಾರ್ ವಲ್ಲಭ ಬಾಯಿ ಪಟೇಲರು. ಅವರು ಸಂಸ್ಥಾನಗಳ ಆಡಳಿತ ಕೊನೆಗಾಣಿಸಿ ರಾಜ್ಯಾಡಳಿತ ಬರುವಂತೆ ಮಾಡದೇ ಇದ್ದರೆ ಇಂತಹ
ಏಕೀಕರಣ ಚಳವಳಿ ಮೂಲಕ ಪಡೆದ ರಾಜ್ಯ ದೊರೆಯುತ್ತಿರಲಿಲ್ಲ. ಭಾಷಾವಾರು ವಿಂಗಡನೆಯಾಗದೇ ರಾಜಾಡಳಿತವಿದ್ದರೆ ಸ್ವಾತಂತ್ರ್ಯದ ಸುಖ ದೊರೆಯುತ್ತಿರಲಿಲ್ಲ . ನಮ್ಮ ನಾಡಿನ ಭಾಷೆ ಬೆಳೆಸುವುದು ಹೇಗೆ ಎಂಬ ಪ್ರಶ್ನೆ ಇಂದಿಗೂ ಇದೆ ಎಂದರು.
ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಕೃಷ್ಣಯ್ಯ ಆಚಾರ್ಯ, ನಿವೃತ್ತ ಸೈನ್ಯಾಧಿಕಾರಿ ಎಂ.ಆರ್. ಜೈನ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಅಯ್ಯಣ್ಣನವರ್, ವಾಣಿ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ನಾರಾಯಣ ಗೌಡ, ಶಿಕ್ಷಣಾಧಿಕಾರಿ ಗುರುಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾ ಮಧು, ತಾಲೂಕು ಮಹಿಳಾ ಒಕ್ಕೂಟ ಅಧ್ಯಕ್ಷೆ ಶಾಂತಾ ಜೆ.ಬಂಗೇರ, ಹೋಮ್ ಗಾರ್ಡ್ ಮುಖ್ಯಸ್ಥ ಜಯಾನಂದ್ ಲಾೖಲ, ದೈಹಿಕ ಶಿಕ್ಷಣ ನಿರೀಕ್ಷಕ ಯಶೋಧರ ಸುವರ್ಣ ಉಪಸ್ಥಿತರಿದ್ದರು.
ಕೃಷಿ ಸಹಾಯಕ ನಿರ್ದೇಶಕ ತಿಲಕ್ ಪ್ರಸಾದ್ ಜಿ. ಸ್ವಾಗತಿಸಿದರು. ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.