ಎರಡನೇ ಹಂತದ ವಾಣಿಜ್ಯ ದಕ್ಕೆಯವರೆಗೆ


Team Udayavani, Oct 31, 2017, 12:32 PM IST

31-Mng–9.jpg

ಮಹಾನಗರ: ಮೀನುಗಾರರಿಗೆ ಹಾಗೂ ವಾಣಿಜ್ಯ ವ್ಯವಹಾರ ನಡೆಸುವವರಿಗೆ ಅಡ್ಡಿಯಾಗುತ್ತಿರುವ ಅಳಿವೆ ಬಾಗಿಲು (ನೇತ್ರಾವತಿ ಹಾಗೂ ಗುರುಪುರ ನದಿ ಸಂಗಮಿಸಿ ಸಮುದ್ರ ಸೇರುವ ಸ್ಥಳ) ವ್ಯಾಪ್ತಿಯ ಹೂಳಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರಕಾರಗಳು ವಿಶೇಷ ಯೋಜನೆ ಸಿದ್ಧಪಡಿಸಿವೆ. ಅಳಿವೆ ಬಾಗಿಲಿನಿಂದ 2ನೇ ಹಂತದ ವಾಣಿಜ್ಯ ದಕ್ಕೆಯವರೆಗೆ 29 ಕೋ.ರೂ. ವೆಚ್ಚದಲ್ಲಿ ಆಳವಾಗಿ ಹೂಳೆತ್ತಲು ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದೆ.

ಮಂಗಳೂರಿನ ಬಂದರು ಇಲಾಖೆಯ ಈ ಪ್ರಸ್ತಾವನೆಯನ್ನು ರಾಜ್ಯ ಸರಕಾರವು ಕೇಂದ್ರಕ್ಕೆ ಸಲ್ಲಿಸಿದ್ದು, ಒಪ್ಪಿಗೆ ದೊರಕಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹ ಭಾಗಿತ್ವದಲ್ಲಿ ಈ ಯೋಜನೆ ಕೈಗೂಡಲಿದ್ದು, ಇದಕ್ಕಾಗಿ ಕೇಂದ್ರ ಸರಕಾರ 14.5 ಕೋಟಿ ರೂ. ನೆರವು ನೀಡಲಿದೆ. ರಾಜ್ಯವೂ ಇಷ್ಟೇ ಪಾಲನ್ನು ಭರಿಸಲಿದೆ. ಎರಡೂ ಸರಕಾರಗಳಿಂದ ಅನುದಾನಕ್ಕೆ ಒಪ್ಪಿಗೆ ದೊರೆತ ಬಳಿಕ ಟೆಂಡರ್‌ ಆಹ್ವಾನಿಸಿ, ಡ್ರೆಜ್ಜಿಂಗ್‌ ಸಂಬಂಧಿತ ಕಂಪೆನಿಯವರು ಹೂಳೆತ್ತುವ ಕಾಮಗಾರಿ ಕೈಗೊಳ್ಳಲಿದ್ದಾರೆ.

‘ಸಾಗರ ಮಾಲಾ’ ಯೋಜನೆಯ ‘ಕೋಸ್ಟಲ್‌ ಬರ್ತ್‌ ಸ್ಕೀಂ’ ಅಡಿಯಲ್ಲಿ ಈ ಯೋಜನೆಗೆ ಒಪ್ಪಿಗೆ ದೊರಕಿದೆ. ಅಳಿವೆ
ಬಾಗಿಲಿನಿಂದ 2ನೇ ಹಂತದ ವಾಣಿಜ್ಯ ದಕ್ಕೆ ಇರುವ 3.2 ಕಿ.ಮೀ. ವ್ಯಾಪ್ತಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಯಲಿದೆ.
ಇದು ನೆರವೇರಿದರೆ, ಮೀನುಗಾರಿಕೆ ದೋಣಿಗಳ ಸಂಚಾರ ಹಾಗೂ ಲಕ್ಷದ್ವೀಪಕ್ಕೆ ಮಿನಿ ಹಡಗುಗಳ (ಮಂಜಿ) ಸಂಚಾರಕ್ಕೆ ಯಾವುದೇ ಸಮಸ್ಯೆ ಆಗಲಾರದು.

ಮುಂಬಯಿ ಅಥವಾ ಗುಜರಾತ್‌ ಭಾಗದ ಡ್ರೆಜ್ಜಿಂಗ್‌ ಯಂತ್ರೋಪಕರಣ ಗಳನ್ನು ಹೂಳೆತ್ತಲು ಬಳಸುವ ಸಾಧ್ಯತೆ ಇದೆ. ಪ್ರಸ್ತುತ ಮಂಗಳೂರಿನಲ್ಲಿ ಗ್ರ್ಯಾ ಬ್‌ ಡ್ರೆಜ್ಜರ್‌ಗಳಿದ್ದು, ಮುಂದೆ ಬೃಹತ್‌ ಪ್ರಮಾಣದ ಕಟ್ಟರ್‌ ಸಕ್ಷನ್‌ ಮಾದರಿಯ ಡ್ರೆಜ್ಜಿಂಗ್‌ ಯಂತ್ರೋಪಕರಣಗಳು ಬರಬೇಕಿವೆ. ಲಕ್ಷದ್ವೀಪ ಹಾಗೂ ಮಂಗಳೂರು ಮಧ್ಯೆ ಪ್ರಸ್ತುತ ವಾರ್ಷಿಕವಾಗಿ 1.2 ಲಕ್ಷ ಮೆಟ್ರಿಕ್‌ ಟನ್‌ ವಹಿವಾಟನ್ನು ರಪ್ತು  ಹಾಗೂ ಆಮದು ಮೂಲಕ ನಿರ್ವಹಿಸುತ್ತಿದೆ. 

ಹೂಳು ತುಂಬಿರುವುದರಿಂದ ಅವಘಡಗಳ ಸರಮಾಲೆ
ಮೀನುಗಾರಿಕೆ ದೋಣಿಗಳು ಹಾಗೂ ಲಕ್ಷದ್ವೀಪಕ್ಕೆ ಮಿನಿ ಹಡಗುಗಳ ಸಂಚಾರಕ್ಕೆ ಮಂಗಳೂರು ಬಂದರಿನ ಅಳಿವೆ ಬಾಗಿಲಿನಲ್ಲಿ ತುಂಬಿರುವ ಬೃಹತ್‌ ಪ್ರಮಾಣದ ಹೂಳು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಇಲ್ಲಿ ಹಲವು ಅವಘಡಗಳು ಸಂಭವಿಸಿದ್ದುಂಟು. ಮೇ 25ರಂದು ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಗಿಲ್ನೆಟ್‌  ಟೊಂದು ಅಳಿವೆ ಬಾಗಿಲು ಸಮೀಪ ಅವಘಡಕ್ಕೀಡಾಗಿದ್ದು, ಅದರ ತೆರವು ಕಾರ್ಯ ಇನ್ನೂ ನಡೆಯದ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯುತ್ತಿರುವ ಮೀನುಗಾರಿಕೆ ದೋಣಿಗಳು ನಿತ್ಯ ಅಪಾಯ ಎದುರಿಸುತ್ತಿದೆ. ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಬೋಟುಗಳ ಸುಗಮ ಸಂಚಾರಕ್ಕೆ ಸಮಸ್ಯೆ ಆಗುತ್ತಿತ್ತು. ಮುಳುಗಡೆಯಾದ ಗಿಲ್ನೆಟ್‌ ಬೋಟ್‌ ಕೂಡ ಮೀನುಗಾರ ದೋಣಿಗಳಿಗೆ ಇನ್ನಷ್ಟು ಸಂಚಕಾರ ಸೃಷ್ಟಿಸುತ್ತಿವೆ. ಬೋಟು ಪಲ್ಟಿಯಾದ ಪ್ರದೇಶದಲ್ಲಿ ನಾಡದೋಣಿ ಮೀನುಗಾರರು ಮೀನುಗಾರಿಕೆಗೆ ತೆರಳುವಂತಿಲ್ಲ. ಗೊತ್ತಾಗದೆ ತೆರಳಿದರೆ ಮತ್ತೂಂದು ಅವಘಡವಾಗುವ ಸಾಧ್ಯತೆ ಇದೆ!

2000 ಬೋಟುಗಳ ಸಂಚಾರ
ಮಂಗಳೂರು ಮೀನುಗಾರಿಕೆ ಬಂದರು ವ್ಯಾಪ್ತಿಯಲ್ಲಿ ಸುಮಾರು 2000 ಬೋಟುಗಳಿವೆ. 35,875 ಮಂದಿ ನೇರವಾಗಿ ಮತ್ತು 70,000 ಕ್ಕಿಂತಲೂ ಅಧಿಕ ಮಂದಿ ಪರೋಕ್ಷವಾಗಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. 2016-17ರ ಸಾಲಿನಲ್ಲಿ 16,603 ಮೆಟ್ರಿಕ್‌ ಟನ್‌ಗಳಷ್ಟು ಮೀನುಗಳು ದೊರೆತಿವೆ.

ಆಳದ ಹೂಳು ಸಮಸ್ಯೆ
ಮೀನುಗಾರಿಕೆ ಬೋಟ್‌ಗಳಿಗೆ ಅಳಿವೆ ಬಾಗಿಲಿನಲ್ಲಿ -3 ಮೀಟರ್‌ ಆಳಕ್ಕೆ ಡ್ರೆಜ್ಜಿಂಗ್‌ ಮಾಡಿದರೆ ಸಾಕಾಗುತ್ತದೆ.
ಆದರೆ, ಲಕ್ಷದ್ವೀಪಕ್ಕೆ ತೆರಳುವ (ಗೂಡ್ಸ್‌) ವಾಣಿಜ್ಯ ಬೋಟು, ಮಂಜಿಗಳಿಗೆ -4 ಮೀಟರ್‌ ಆಳ ಡ್ರೆಜ್ಜಿಂಗ್‌ ಮಾಡಬೇಕು.
ಇಲ್ಲವಾದರೆ, ಬೋಟ್‌ ಸಂಚಾರಕ್ಕೆ ಅಪಾಯ ಎದುರಾಗುತ್ತದೆ. ಹೀಗಾಗಿ ಪ್ರತಿ ವರ್ಷ -4 ಮೀಟರ್‌ನಷ್ಟು ಡ್ರೆಜ್ಜಿಂಗ್‌ ಮಾಡಲಾಗುತ್ತದೆ. ಆದರೆ, ನೀರು ಹರಿಯುವ ವೇಗಕ್ಕೆ ಮರಳು ತುಂಬುವುದರಿಂದ ಪ್ರತಿ ವರ್ಷ ಮೀನುಗಾರಿಕೆ ಹಾಗೂ ವಾಣಿಜ್ಯ ಬೋಟುಗಳ ಸಂಚಾರಕ್ಕೆ ಅಪಾಯ ಆಗುತ್ತಿತ್ತು. ಹೀಗಾಗಿ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಉದ್ದೇಶದಿಂದ ಇನ್ನಷ್ಟು ಆಳದಿಂದ ಹೂಳೆತ್ತುವ ಕೆಲಸವನ್ನು ಈ ಬಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. 7 ಮೀಟರ್‌ನಷ್ಟು  ಆಳದಿಂದ ಹೂಳೆತ್ತುವ ಕಾಮಗಾರಿ ಈ ಮೂಲಕ ನಡೆಯಲಿವೆ.

ದಿನೇಶ್‌ ಇರಾ

ಟಾಪ್ ನ್ಯೂಸ್

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mang

Mangaluru ಧರ್ಮಪ್ರಾಂತ;ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ

arrest-woman

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

4

Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!

2(1

Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್‌

1(1

Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

1-idpp

Actor; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಟಿ ಡಿಂಪಲ್‌ ಕಪಾಡಿಯಾ

1-kukke

Kukke Subrahmanya: ಕಿರುಷಷ್ಠಿ ರಥೋತ್ಸವ

1-mang

Mangaluru ಧರ್ಮಪ್ರಾಂತ;ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ

arrest-woman

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.