ಉಪ್ಪಿನಂಗಡಿ: ರಥೋತ್ಸವ
Team Udayavani, Feb 26, 2017, 12:45 PM IST
ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದಲ್ಲಿ 2ನೇ ಮಹಾಶಿವರಾತ್ರಿ ಮಖೆಕೂಟ ಶುಕ್ರವಾರ ಆರಂಭವಾಗಿದ್ದು, ಶನಿವಾರ ಪ್ರಾತಃಕಾಲ ತೀರ್ಥಸ್ನಾನ ನಡೆದು, ಬೆಳಗ್ಗೆ ಬಲಿ ಹೊರಟು ಉತ್ಸವ, ಶ್ರೀ ದೇವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಶುಕ್ರವಾರ ಬೆಳಗ್ಗೆ 8.30ರಿಂದ ನೇತ್ರಾವತಿ ನದಿ ಗರ್ಭದಲ್ಲಿರುವ ಉದ್ಭವಲಿಂಗಕ್ಕೆ ಭಕ್ತರು ಅಭಿಷೇಕ ಮಾಡಿದರು. ರಾತ್ರಿ ದೇವಾಲಯದಲ್ಲಿ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆಯಾಯಿತು. ಶನಿವಾರ ಪ್ರಾತಃಕಾಲ ರಥೋತ್ಸವ, ಉತ್ಸವ, ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ ಸಮರ್ಪಿಸಲಾಯಿತು. ಬಳಿಕ ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ನೀಡಿ, ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಿತು. ಜೇಸಿಐ ಉಪ್ಪಿನಂಗಡಿ ಘಟಕ ಶುಕ್ರವಾರ ಭಕ್ತರಿಗೆ ಪಾನಕ ವಿತರಿಸಿದರೆ, ಜೇಸಿಐ ಘಟಕದ ವತಿಯಿಂದ ಶನಿವಾರ ಮಜ್ಜಿಗೆ ವಿತರಿಸಲಾಯಿತು.
ಸಚಿವ ಬಿ. ರಮಾನಾಥ ರೈ, ಕಾ.ನಿ. ಅಧಿಕಾರಿ ಹರೀಶ್ಚಂದ್ರ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಲಿಮಾರ್ ರಘುನಾಥ ರೈ, ಸೋಮನಾಥ, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಸವಿತಾ ಕೆ., ಕೆ. ರಾಧಾಕೃಷ್ಣ ನಾೖಕ್, ಅನಿತಾ ಕೆ., ಡಾ| ಕೆ.ಬಿ. ರಾಜಾರಾಮ್, ಜಿ. ಕೃಷ್ಣರಾವ್ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.