ಉಪ್ಪಿನಂಗಡಿ ಗ್ರಾ.ಪಂ. ವಿಶೇಷ ಸಾಮಾನ್ಯ ಸಭೆ
Team Udayavani, Nov 13, 2017, 3:12 PM IST
ಉಪ್ಪಿನಂಗಡಿ: ನೂತನ ಪಂಚಾಯತ್ ಕಟ್ಟಡ ಉದ್ಘಾಟನೆಗೆ ಮುಖ್ಯಮಂತ್ರಿಗಳು, ಸಂಸದರು ಹಾಗೂ ಎಲ್ಲ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗವನ್ನು ಪಕ್ಷಭೇದ ಮರೆತು ಆಮಂತ್ರಿಸಲು ಉಪ್ಪಿನಂಗಡಿ ಗ್ರಾ.ಪಂ.ನ ವಿಶೇಷ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.ಸಭೆಯು ಪಂಚಾಯತ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಈ ಹಿಂದೆ ಇದ್ದ ಕಟ್ಟಡ ಕುಸಿಯುವ ಭೀತಿಯಲ್ಲಿದ್ದು , ಪಂಚಾಯತ್ ಆಡಳಿತ ಸುಸಜ್ಜಿತ ಕಟ್ಟಡ ರಚನೆಗೆ ಪಣ ತೊಟ್ಟಿತ್ತು. ಅದರಂತೆ ಒಂದು ವರ್ಷದ ಹಿಂದೆ ನೂತನ ಕಟ್ಟಡ ಶಿಲನ್ಯಾಸ ನಡೆದು, 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು.
ಈಗ ಕಟ್ಟಡ ನಿರ್ಮಾಣದ ಕಾರ್ಯ ಕೊನೆಯ ಹಂತ ತಲುಪಿದ್ದು, ಡಿಸೆಂಬರ್ ಕೊನೆಯ ವಾರ ಅಥವಾ ಜನವರಿಯಲ್ಲಿ ಕಟ್ಟಡ ಉದ್ಘಾಟಿಸಲು ದಿನಾಂಕವನ್ನು ನಿಗದಿ ಮಾಡುವ ಸಲುವಾಗಿ ಈ ಸಭೆಯನ್ನು ಕರೆಯಲಾಗಿತ್ತು.
ಅನುದಾನ ಬಳಕೆಗೆ ಅವಕಾಶವಿಲ್ಲ
ಪಿಡಿಒ ಅಬ್ದುಲ್ ಅಸಾಫ್ ಸಭೆಯಲ್ಲಿ ಮಾತನಾಡಿ, ನೂತನ ಕಟ್ಟಡದ ಉದ್ಘಾಟನೆಗೆ ಪಂಚಾಯತ್‌ನ ಯಾವುದೇ ಅನುದಾನವನ್ನು ಬಳಸಿಕೊಳ್ಳಲು ಅವಕಾಶವಿಲ್ಲ. ಸಾರ್ವಜನಿಕ ದೇಣಿಗೆ ಸಂಗ್ರಹಿಸಿ ಕಾರ್ಯಕ್ರಮಕ್ಕೆ ಆರ್ಥಿಕ ಕ್ರೋಡೀಕರಣ ಮಾಡಬೇಕೆಂದರು.
ಇಂದರಿಂದ ಕೊಂಚ ಆಕ್ರೋಶಕ್ಕೆ ಒಳಗಾದ ಸದಸ್ಯರು, ಎರಡು ಕೋಟಿ ರೂ.ಗೂ ಅಧಿಕ ಅನುದಾನದ ಸುಸಜ್ಜಿತ ಕಟ್ಟಡದ ಉದ್ಘಾಟನೆಗೆ ಅನುದಾನ ಒದಗಿಸಲು ಯಾಕೆ ಸಾಧ್ಯವಿಲ್ಲವೆಂದು ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷರು ಸಮಜಾಯಿಷಿ ನೀಡಿ, ಆರ್ಥಿಕ ಕ್ರೋಡೀಕರಣಕ್ಕೆ ಗ್ರಾಮಸ್ಥರು ಸಂಪೂರ್ಣ ಬೆಂಬಲ ನೀಡುವ ಭರವಸೆ ತನಗೆ ಇದೆ ಎಂದು ಪಿಡಿಒ ಮಾತಿಗೆ ತೆರೆ ಎಳೆದರು.
ಕಾರ್ಯಕ್ರಮಕ್ಕೆ ಎಲ್ಲ ಸದಸ್ಯರೂ ಸಹಕಾರ ನೀಡುವಂತೆ ಅಧ್ಯಕ್ಷರು ಸಭೆಯಲ್ಲಿ ವಿನಂತಿಸಿದರು. ಬಳಿಕ ವಿವಿಧ ಸಮಿತಿಗಳನ್ನು ರಚಿಸಲಾಯಿತು. ತಾ.ಪಂ ಸದಸ್ಯೆ ಸುಜಾತಾ ಕೃಷ್ಣ, ಪಂಚಾಯತ್ ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಸದಸ್ಯರಾದ ರಾಜ್‌ಗೋಪಾಲ ಹೆಗ್ಡೆ, ರಮೇಶ್ ಭಂಡಾರಿ, ಯು.ಕೆ. ಇಬ್ರಾಹಿಂ, ಯು.ಟಿ. ಮಹಮ್ಮದ್ ತೌಸಿಫ್, ಚಂದ್ರಶೇಖರ ಮಡಿವಾಳ, ಜಮೀಲಾ ಸುಂದರಿ, ಭಾರತಿ ಪುಷ್ಪಾ ಕುಂಜ, ಚಂದ್ರಾವತಿ, ಉಮೇಶ್ ಗೌಡ, ಸುರೇಶ್ ಅತ್ರಮಜಲು ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.