ಉಪ್ಪಿನಂಗಡಿ: ಜ್ಯೋತಿರ್ಲಿಂಗ ರಥ ಯಾತ್ರೆಗೆ ಚಾಲನೆ
Team Udayavani, Feb 25, 2017, 2:26 PM IST
ಉಪ್ಪಿನಂಗಡಿ: ಶಿವರಾತ್ರಿ ಹಾಗೂ ಉಪವಾಸ ಜಾಗರಣೆಯ ಮಹತ್ವವನ್ನು ಜನತೆಗೆ ಸಾರಿ ಹೇಳುವ ಸಲುವಾಗಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಲಾದ ಜ್ಯೋತಿರ್ಲಿಂಗ ರಥ ಯಾತ್ರೆಯು ಶಿವರಾತ್ರಿಯ ಶುಭ ದಿನವಾದ ಶುಕ್ರವಾರದಂದು ಉಪ್ಪಿನಂಗಡಿಯಲ್ಲಿ ಚಾಲನೆ ಪಡೆಯಿತು.
ಶಿವಲಿಂಗಕ್ಕೆ ಹೂ ಹಾರ ಹಾಕಿ ಧ್ವಜವನ್ನಿತ್ತು ಚಾಲನೆ ನೀಡಿದ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಲಿಮಾರ ರಘುನಾಥ ರೈ ಮಾತನಾಡಿ, ಶಿವ ತಣ್ತೀದ ಅರಿವಿನೊಂದಿಗೆ ಬದುಕಿನಲ್ಲಿ ಅಪರಿಮಿತ ಆನಂದವನ್ನು ಕಂಡುಕೊಳ್ಳಲು ಸಾಧ್ಯ. ಇದನ್ನು ಋಷಿ ಮುನಿಗಳು ಸಾದರ ಪಡಿಸಿದ್ದಾರೆ. ಅಂತಹ ಆಧ್ಯಾತ್ಮದ ದಿವ್ಯಾನುಭವವನ್ನು ನಾಡಿನೆಲ್ಲೆಡೆ ಪ್ರಸಹರಿಸಲು ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಕಾರ್ಯಕರ್ತರು ಮುಂದಾಗಿರುವುದು ಸಂತಸದಾಯಕ ನಡೆ ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಯು. ಎಲ್. ಉದಯ ಕುಮಾರ್, ನಡ³ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶಿವಣ್ಣ ಗೌಡ, ರತ್ನಾ ಜೀ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಕೃಷ್ಣ ರಾವ್ ಅರ್ತಿಲ, ಸುಂದರ ಗೌಡ ಸಚಿನ್, ಕೈಲಾರ್ ರಾಜ್ ಗೋಪಾಲ ಭಟ್, ಕೆ. ಜಗದೀಶ್ ಶೆಟ್ಟಿ ಸಹಿತ ಹಲವಾರು ಪ್ರಮುಖರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.