ಉಪ್ಪಿನಂಗಡಿ: ಆಶ್ರಮಕ್ಕೆಂದು ಹಳೆಯ ಬಟ್ಟೆ-ಬರೆ ಸಂಗ್ರಹಿಸಿ ವಂಚನೆ
Team Udayavani, Feb 22, 2023, 6:13 AM IST
ಉಪ್ಪಿನಂಗಡಿ: ತಾವು ಆಶ್ರಮಕ್ಕೆ ಹಣ, ಹಳೆಯ ಬಟ್ಟೆ-ಬರೆಗಳನ್ನು ಸಂಗ್ರಹಿಸು ತ್ತಿದ್ದೇವೆಂದು ನಕಲಿ ಐಡಿ ಕಾರ್ಡ್ ತೋರಿಸಿ ಭಿಕ್ಷಾಟನೆ ನಡೆಸುತ್ತಿರುವ ತಂಡವೊಂದು ಉಪ್ಪಿನಂಗಡಿಯಲ್ಲಿದ್ದು, ಕೊçಲದ ಮನೆಯೊಂದಕ್ಕೆ ಈ ತಂಡದ ಸದಸ್ಯರು ಹೋದಾಗ ಅಲ್ಲಿ ಅವರ ನಿಜ ಬಣ್ಣ ಬಯಲಾಗಿದೆ.
ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಕೊçಲ ಅವರ ಮನೆಗೆ ಸೋಮವಾರ ಬಂದ ಇಬ್ಬರು ಹೆಂಗಸರು ತಾವು ಮೈಸೂರಿನ ಇಲವಾಲದ ಬಳಿಯಿರುವ ಅಂಗವಿಕಲ ಮತ್ತು ವೃದ್ಧಾಶ್ರಮದ ಪರವಾಗಿ ಬಂದಿದ್ದು, ಅಲ್ಲಿಗೆ ಬಟ್ಟೆ- ಬರೆ, ಹಣವನ್ನು ಸಹಾಯ ನೀಡಿ ಎಂದು ಕೇಳಿದ್ದರು. ಆಗ ಅನುಮಾನ ಬಂದು ಸಂಸ್ಥೆಯ ಐಡಿ ಕಾರ್ಡ್ ತೋರಿಸುವಂತೆ ಕೇಳಿದಾಗ ಅವರು ಸಮರ್ಪಕ ಉತ್ತರ ನೀಡಿರಲಿಲ್ಲ. ಬಳಿಕ ಆಶ್ರಮದ ಅಧ್ಯಕ್ಷರು ನೆರವು ನೀಡುವಂತೆ ಮನವಿ ಮಾಡಿರುವ ಕರಪತ್ರವೊಂದನ್ನು ಅವರು ತೋರಿಸಿದ್ದು, ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದಾಗ ಮಾತನಾಡಿದ ಆಶ್ರಮದ ಅಧ್ಯಕ್ಷ ಎಸ್. ಕೆ. ರಮೇಶ್ ಅವರು ನಾವು ಯಾರಿಗೂ ಆಶ್ರಮದ ಹೆಸರು ಹೇಳಿ ಹಣ ಹಾಗೂ ಬಟ್ಟೆ ಬರೆ ಸಂಗ್ರಹ ಮಾಡಲು ಹೇಳಿಲ್ಲ. ಆ ಮಹಿಳೆಯರು ನಮ್ಮ ಸಂಸ್ಥೆಯವರು ಅಲ್ಲ. ಆದ್ದರಿಂದ ಅವರಿಗೆ ಸಹಾಯ ಮಾಡಬೇಡಿ ಎಂದು ತಿಳಿಸಿದ್ದಾರಲ್ಲದೆ, ಆಶ್ರಮದ ಹೆಸರಿನಲ್ಲಿರುವ ಕರಪತ್ರವನ್ನು ಅವರಿಂದ ವಶಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಬಳಿಕ ಆ ಮಹಿಳೆಯರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿರುವ ಪ್ರದೀಪ್, ಇವರ ತಂಡ ಉಪ್ಪಿನಂಗಡಿ ಹಳೆಗೇಟಿನ ನೇತ್ರಾವತಿ ನದಿ ಕಿನಾರೆಯಲ್ಲಿ ಬೀಡು ಬಿಟ್ಟಿದ್ದು ಅವರು ಸಂಗ್ರಹಿಸಿದ ಹಳೆಯ ಬಟ್ಟೆ ಬರೆಗಳನ್ನು ಒಗೆದು ಸಂತೆಗೆ ತೆಗೆದುಕೊಂಡು ಹೋಗಿ ಹೊಸ ಬಟ್ಟೆ ಎಂದು ಜನರನ್ನು ಮೋಸಗೊಳಿಸುತ್ತಿದ್ದಾರೆ. ಆದ್ದರಿಂದ ಜನರು ಇಂತಹವರ ಮೋಸಕ್ಕೆ ಒಳಗಾಗಬಾರದು. ಪೊಲೀಸರು ಕೂಡ ಇಂತಹ ವಂಚನೆ ಎಸಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.