ಉಪ್ಪಿನಂಗಡಿ: ಅಂತಾರಾಜ್ಯ ದರೋಡೆಕೋರರ ಬಂಧನ
Team Udayavani, Apr 11, 2018, 8:10 AM IST
ಉಪ್ಪಿನಂಗಡಿ: ದ.ಕ ಜಿಲ್ಲೆಯ ಧರ್ಮಸ್ಥಳ, ಕೆದಿಲ, ಇಚ್ಲಂಪಾಡಿಯಲ್ಲಿ ಪಿಸ್ತೂಲ್ ತೋರಿಸಿ ಮನೆ ಮಂದಿಯನ್ನು ಬೆದರಿಸಿ ನಗ ನಗದನ್ನು ದರೋಡೆ ಮಾಡುತಿದ್ದ ಅಂತಾರಾಜ್ಯ ದರೋಡೆಕೋರರ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಅವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸ್ ತಂಡ ಉಪ್ಪಿನಂಗಡಿ ಸಮೀಪದ ಪೆರಿಯಶಾಂತಿಯಲ್ಲಿ ಮಂಗಳವಾರ ಬಂಧಿಸುವ ಮೂಲಕ ಮಹತ್ವದ ಸಾಧನೆ ತೋರಿದೆ.
ಕೇರಳ ತೃಶೂರ್ ನ ಇಲ್ಯಾಸ್ ( 34) ಬಿನ್ ಅಬ್ದುಲ್ ರಜಾಕ್ ಹಾಗೂ ನೆಲ್ಸನ್ ಸಿ ವಿ (30) ಬಿನ್ ವಿಲ್ಸನ್ ಕಿಲ್ಲನೂರು ಬಂಧಿತರು.
ಮಾರ್ಚ್ 21ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಚ್ಲಂಪಾಡಿಯಲ್ಲಿ ನಿವೃತ್ತ ಯೋಧ ನಾರಾಯಣ ಪಿಳ್ಳೆ ಅವರ ಮನೆಗೆ ನುಗ್ಗಿದ ದರೋಡೆಕೋರರು ಪಿಸ್ತೂಲ್ ಹಾಗೂ ಮಾರಕಾಯುಧಗಳನ್ನು ತೋರಿಸಿ ಹಣ ಹಾಗೂ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದರು.
ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ತನಿಖೆ ನಡೆಸಿದರು. ಈ ಹಿಂದೆ 2017ರ ನವೆಂಬರ್‌ನಲ್ಲಿ ಧರ್ಮಸ್ಥಳದಲ್ಲಿ ನಡೆದ ನಾಗೇಶ್ ಪ್ರಸಾದ್ ಅವರ ಮನೆಗೆ ನುಗ್ಗಿ ನಡೆದ ದರೋಡೆ , ಹಾಗೂ 2017ರ ಡಿಸೆಂಬರ್‌ನಲ್ಲಿ ಪುತ್ತೂರಿನ ಕೆದಿಲದಲ್ಲಿ ಶಿವಶಂಕರ್ ಪುತ್ತೂರಾಯ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಮೂರು ದರೋಡೆಗಳು ಏಕ ರೀತಿಯನ್ನು ಹೊಂದಿರುವುದನ್ನು ಖಚಿತ ಪಡಿಸಿಕೊಂಡರು.,
ಮೊಬೈಲ್ ಬಳಸದಿರುವ ರಕ್ಷಣಾ ತಂತ್ರ
ದರೋಡೆಕೋರರು ಪೊಲೀಸ್ ಕಣ್ಣಿನ ಬೀಳದಂತೆ ಕೃತ್ಯ ನಡೆಸುವಾಗ ಮೊಬೈಲ್ ಬಳಸದಿರುವ ರಕ್ಷಣಾ ತಂತ್ರವನ್ನು ಅನುಸರಿಸುತ್ತಿದ್ದ ಹಿನ್ನೆಲೆಯಲ್ಲಿ ದರೋಡೆಕೋರರ ಪತ್ತೆ ಕಾರ್ಯ ಜಟಿಲವಾಗಿತ್ತು.
ಆದಾಗ್ಯೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ , ಡಿವೈ ಎಸ್ಪಿ ಅವರ ಸೂಕ್ತ ಮಾರ್ಗದರ್ಶನದಿಂದ ತನಿಖಾ ವ್ಯೂಹವನ್ನು ಹೆಣೆಯಲಾಯಿತು.
ಉಪ್ಪಿನಂಗಡಿ ವೃತ್ತ ನಿರೀಕ್ಷಕ ಗೋಪಾಲ ನಾಯ್ಕ, ಎಸ್ ಐ ನಂದ ಕುಮಾರ್ ಮತ್ತವರ ಅಪರಾಧ ಪತ್ತೆ ದಳದ ಸಿಬಂದಿ ಅವಿರತ ಶ್ರಮಿಸಿ ಪತ್ತೆ ಮಾಡಿದರು. ದರೋಡೆಕೋರರು ಕೇರಳ ಮೂಲದವರೆನ್ನುವುದನ್ನು ಖಚಿತಪಡಿಸಿ ಕೊಂಡರು.
ದರೋಡೆಕೋರರ ಮೇಲೆ ನಿಗಾವಿರಿಸಿದ್ದ ಪೊಲೀಸ್ ವಿಶೇಷ ತಂಡಕ್ಕೆ ಸೋಮವಾರ ರಾತ್ರಿ ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಯಲ್ಲಿ ಮತ್ತೆ ಯಾವುದೋ ಅಪರಾಧ ಕೃತ್ಯವೆಸಗಲು ಆಗಮಿಸಿದ್ದ ಇಲ್ಯಾಸ್ ಹಾಗೂ ನೆಲ್ಸನ್ ಸಿ ವಿ ಸೆರೆ ಸಿಕ್ಕಿದರು. ಪೊಲೀಸರು ವಿಚಾರಣೆ ವೇಶೆ ಇಬ್ಬರೂ ತಮ್ಮ ಕೃತ್ಯವನ್ನು ಒಪ್ಪಿಕೊಂಡರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ದರೋಡೆ ನಡೆಸಿ ಕಬಳಿಸಿದ್ದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಯನ್ನು ಕೇಳಿ ಪಡೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಉಪ್ಪಿನಂಗಡಿ ಎಸ್ ಐ ನಂದ ಕುಮಾರ್ ಅವರ ನೇತೃತ್ವದ ಅಪರಾಧ ಪತ್ತೆ ತಂಡ ಯೋಜಿತ ಹಾಗೂ ಯಶಸ್ವೀ ಕಾರ್ಯಾಚರಣೆ ನಡೆಸಿ ಜಾಣ್ಮೆಯ ಅಪರಾಧಿಗಳನ್ನು ಬಂಧಿಸುತ್ತಿರುವುದು ನಾಗರಿಕ ವಲಯದಲ್ಲಿ ಶ್ಲಾಘನೆಗೆ ತುತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharastra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.