ಉಪ್ಪಿನಂಗಡಿ: ನೇತ್ರಾವತಿ ಸಮುದಾಯ ಭವನ ಉದ್ಘಾಟನೆ
Team Udayavani, Feb 9, 2018, 12:27 PM IST
ಉಪ್ಪಿನಂಗಡಿ: ಸೌಹಾರ್ದ ಯುತ ಸಮಾಜವನ್ನು ರೂಪಿಸುವ ಮೂಲಕ ಪರಸ್ಪರ ಮನಸ್ಸುಗಳನ್ನು ಬೆಸೆಯುವ ಕೆಲಸ ಧಾರ್ಮಿಕ ಕೇಂದ್ರಗಳಿಂದಾಗಬೇಕು ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು. ಅವರು ಉಪ್ಪಿನಂಗಡಿಯ ಶ್ರೀ ಸಹಸ್ರ ಲಿಂಗೇಶ್ವರ – ಮಹಾಕಾಳಿ ದೇವಾಲಯ ದಲ್ಲಿ 75 ಲ.ರೂ. ವೆಚ್ಚದಲ್ಲಿ ನಿರ್ಮಿಸಿರುವ “ನೇತ್ರಾವತಿ ಸಮುದಾಯ ಭವನ’ವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ಶಾಸಕ ವಸಂತ ಬಂಗೇರ ಮಾತನಾಡಿ, ದೇವಾಲಯಗಳು ಸಂಸ್ಕಾರ, ಮಾನಸಿಕ
ನೆಮ್ಮದಿಯನ್ನು ನೀಡುವ ಕೇಂದ್ರ ಗಳಾಗುವುದರೊಂದಿಗೆ ಮದುವೆ, ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ವೇದಿಕೆಯೊದಗಿಸಿದಾಗ ಅಲ್ಲಿ ಪುಣ್ಯ ಸಂಪಾದನೆಯೊಂದಿಗೆ ಪರಸ್ಪರ ಸಂಬಂಧಗಳನ್ನು ಬೆಸೆಯುವ ಕಾರ್ಯವಾಗುತ್ತದೆ ಎಂದು ಹೇಳಿದರು. ಸಮ್ಮಾನ: “ನಮ್ಮೂರು -ನೆಕ್ಕಿಲಾಡಿ’ ಸಂಸ್ಥೆಯ ಅಧ್ಯಕ್ಷ ಜತೀಂದ್ರ ಶೆಟ್ಟಿ, ಗುತ್ತಿಗೆದಾರ ಆನಂದ ಬಿ.ಕೆ., ಎಂಜಿನಿ ಯರ್ ಸೀತಾರಾಮ ಆಚಾರ್ಯ, ವಿದ್ಯುತ್ ಗುತ್ತಿಗೆದಾರ ಗುಣಕರ ಅಗ್ನಾಡಿ ಅವರನ್ನು ಸಮ್ಮಾನಿಸಲಾಯಿತು.
ಉಪ್ಪಿನಂಗಡಿ ಲಕ್ಷ್ಮೀವೆಂಕಟ್ರಮಣ ದೇಗುಲದ ಆಡಳಿತ ಮೊಕ್ತೇಸರ ಬಿ. ಗಣೇಶ್ ಶೆಣೈ, ಮಾಜಿ ಆಡಳಿತ ಮೊಕ್ತೇಸರರಾದ ಸಂಜೀವ ಗಾಣಿಗ, ಸುಂದರೇಶ್ ಅತ್ತಾಜೆ, ಕರುಣಾಕರ ಸುವರ್ಣ, ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೋಮನಾಥ, ಸವಿತಾ ಕೆ., ಅನಿತಾ ಕೆ., ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಕೆ. ರಾಧಾಕೃಷ್ಣ ನಾಯಕ್, ಕಾರ್ಯ ನಿರ್ವಹಣಾಧಿಕಾರಿ ಹರೀಶ್ಚಂದ್ರ, ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ರಾಮಚಂದ್ರ ಮಣಿಯಾಣಿ, ಸದಸ್ಯ ತೌಸೀಫ್ ಯು.ಟಿ., ಹಿರಿಯರಾದ ವೈದ್ಯ ಶೀನ ಶೆಟ್ಟಿ, ಕಜೆ ಈಶ್ವರ ಭಟ್, ತಣ್ಣೀರುಪಂಥ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ್, ಶ್ರೀ ಕಾಳಿಕಾಂಬಾ ಭಜನ ಮಂಡಳಿ ಅಧ್ಯಕ್ಷ ಸುಧಾಕರ ಶೆಟ್ಟಿ, ಶ್ರೀ ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಪ್ರಮುಖರಾದ ಜಗದೀಶ್ ಶೆಟ್ಟಿ,
ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ, ಮಹೇಂದ್ರವರ್ಮ, ಗೋಪಾಲ ಹೆಗ್ಡೆ, ಮುರಳೀಧರ ರೈ ಮಠಂತಬೆಟ್ಟು, ಕೈಲಾರು ರಾಜಗೋಪಾಲ್ ಭಟ್, ಲೊಕೇಶ್ ಬೆತ್ತೋಡಿ, ಚಂದ್ರಹಾಸ ಶೆಟ್ಟಿ, ಅರುಣ್ ಕುಮಾರ್ ಬಿ.ಕೆ., ಅಶ್ರಫ್ ಬಸ್ತಿಕ್ಕಾರ್, ಉಪಸ್ಥಿತರಿದ್ದರು.
ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘುನಾಥ್ ರೈ ಅಲಿಮಾರ್ ಸ್ವಾಗತಿಸಿ ದರು. ಕೃಷ್ಣರಾವ್ ಜಿ. ವಂದಿಸಿದರು. ಡಾ| ರಾಜಾರಾಮ್ ಕೆ.ಬಿ. ಕಾರ್ಯಕ್ರಮ ನಿರ್ವಹಿಸಿದರು.
ಕೂಡಲಸಂಗಮ ಮಾದರಿಯಲ್ಲಿ ಉಪ್ಪಿನಂಗಡಿ ಅಭಿವೃದ್ಧಿ
ಅಧ್ಯಕ್ಷತೆ ವಹಿಸಿದ್ದ ಶಾಸಕಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಉಪ್ಪಿನಂಗಡಿಯು ಕಾಶಿ ಸಮಾನ ಕ್ಷೇತ್ರ. ಕುಮಾರಧಾರಾ – ನೇತ್ರಾವತಿ ಸಂಗಮ ತಾಣವಾದ ಈ ಕ್ಷೇತ್ರವನ್ನು ಪ್ರವಾಸಿ ಕೇಂದ್ರವನ್ನಾಗಿಯೂ ರೂಪಿಸಬೇಕು ಎನ್ನುವುದು ನನ್ನ ಕನಸು. ಕೂಡಲ ಸಂಗಮ ಶೈಲಿಯಲ್ಲಿ ಅಭಿವೃದ್ಧಿ ಪಡಿಸಲು ಪ್ರಯತ್ನಿಸುವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.