ಸಾಂಸ್ಕೃತಿಕ ಸಮನ್ವಯದ ಎಚ್ಚರ ತುರ್ತು ಅಗತ್ಯ: ಭುವನೇಶ್ವರಿ ಹೆಗಡೆ

ದ.ಕ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ

Team Udayavani, Mar 23, 2024, 7:31 AM IST

ಸಾಂಸ್ಕೃತಿಕ ಸಮನ್ವಯದ ಎಚ್ಚರ ತುರ್ತು ಅಗತ್ಯ: ಭುವನೇಶ್ವರಿ ಹೆಗಡೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಅದರದ್ದೇ ಆದ ಸಾಂಸ್ಕೃತಿಕ ‘ಬನಿ’ ಇದೆ. ಸಾಮರಸ್ಯದ ಜೀವನ ಕ್ರಮವಿದೆ. ಹಾಗಾಗಿ ಸಾಂಸ್ಕೃತಿಕ ಸಮನ್ವ ಯದ ಎಚ್ಚರವನ್ನು ಸ್ಥಾಪಿಸಿಕೊಳ್ಳಬೇಕಾದತುರ್ತಿದೆ’ ಎಂದು ಜಿಲ್ಲಾ 26 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವ ಸಾಹಿತಿ ಭುವನೇಶ್ವರಿ ಹೆಗಡೆ ಹೇಳಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕುದ್ಮಲ್ ರಂಗರಾವ್‌ ಪುರ ಭವನದಲ್ಲಿ ಮಾ. 23 ಮತ್ತು 24ರಂದು ಸಾಹಿತ್ಯ ಸಮ್ಮೇಳನ ನಡೆ ಯಲಿದೆ. ಈ ಸಂದರ್ಭ ಉದಯವಾಣಿಯೊಂದಿಗಿನ ಮಾತುಕತೆ ಇಲ್ಲಿದೆ.

ಸಾಹಿತ್ಯದಲ್ಲಿ “ನಗು’ವಿನ ಮಜಲನ್ನು ಪರಿಚಯಿಸಿದ್ದರ ಆಶಯ ಬರೀ ನಗುವೇ?
ಎಲ್ಲವನ್ನು ತೀರಾ ಗಂಭೀರವಾಗಿ ತೆಗೆದುಕೊ ಳ್ಳುವ ವರಿಗೆ ಬದುಕು ಬಹಳ ಬೇಗ “ಬೋರ್‌’ ಅನ್ನಿಸು ತ್ತದೆ. “ಹಾಸ್ಯ’ ಬದುಕನ್ನು ಹೆಚ್ಚು ಲವಲವಿಕೆ ಯಿಂದ ನೋಡಲು ಪ್ರೇರೇಪಿಸುತ್ತದೆ. ಇನ್ನೊಂದು, “ನಗು’ವಿನ ಗುರಿ ಕೇವಲ ನಗು ಮಾತ್ರವಲ್ಲ; ಎಂಥ ಕಠಿನ ಪರಿಸ್ಥಿತಿಯನ್ನೂ ಎದುರಿಸಿ ನಕ್ಕು ಹಗು ರಾಗುವುದು, ಸರಿ ತಪ್ಪುಗಳ ವಿವೇಕದ ಎಚ್ಚರ ಮೂಡಿಸಿಕೊಳ್ಳುವುದು.

ಸಾಹಿತ್ಯ ಸಮ್ಮೇಳನದ ಮೂಲಕ ಕನ್ನಡದ ಕಾರ್ಯ ನಡೆಯುತ್ತದೆ ಎಂಬುದನ್ನು ಒಪ್ಪುತ್ತೀರಾ?
ದಿನವೂ ದೇವರ ಪೂಜೆ ಮಾಡಿದರೂ, ಹಬ್ಬದಂದು ಮತ್ತೂ ಸಂಭ್ರಮದಿಂದ ಪೂಜೆ ಮಾಡಲಾಗುತ್ತದೆ. ಆಗ ಹಬ್ಬ ಯಾಕೆ ಎಂದು ಕೇಳುವುದಿಲ್ಲ. ಕನ್ನಡದ ಕಾರ್ಯ ಬೇರೆ ಬೇರೆ ಮಜಲುಗಳಲ್ಲಿ ಕೌಟುಂ ಬಿಕವಾಗಿ, ಸಾಮಾಜಿಕವಾಗಿ ಆಗ ಬೇಕು. ಸಾಹಿತ್ಯ ಸಮ್ಮೇಳನಗಳು ಅದರ ಸಾಂಕೇತಿಕ ಸಂಭ್ರಮಗಳಷ್ಟೇ! ಕನ್ನಡದ ಕಾರ್ಯವನ್ನು ಕೇವಲ ಈ ಸಮ್ಮೇಳನಗಳು ಮಾಡುತ್ತವೆ ಎಂದಲ್ಲ; ಆದರೆ ಆ ಕಾರ್ಯಕ್ಕೆ ಹೆಚ್ಚು ಕಸುವನ್ನೂ ಸ್ಫೂರ್ತಿಯನ್ನೂ ತುಂಬುತ್ತವೆ.

ಕಲಿಕೆಯಲ್ಲಿ “ಮಾಧ್ಯಮ’ ಎಂಬ ವಿಷಯ ಬಹು ಚರ್ಚಿತ. ತಾವೇನು ಹೇಳುವಿರಿ?
ಮಾಧ್ಯಮವನ್ನು ಸಶಕ್ತವಾಗಿ ಬಳಸಿದರೆ ಮಾತ್ರ ವ್ಯಕ್ತಿಯೂ ಸಮಾಜವೂ ತನ್ನ ಒಟ್ಟಂದದ ಪ್ರಗತಿಯಲ್ಲಿ ಗಣನೀಯ ಸಾಧನೆ ಮಾಡೀತು. ಒಂದು ಸಮಾಜದ “ಆತ್ಮ’ವೇ ಅದರ ಮಾತೃಭಾಷೆಯಲ್ಲಿದೆ. ಮಗುವಿನ ದೇಸಿಯ ಜ್ಞಾನ ಪರಂಪರೆಯ ಉಚ್ಛಾಂಕವೆಲ್ಲವೂ ದಾಖಲಾ ಗುವುದು ತಾಯಿ ಭಾಷೆಯಲ್ಲಿ. ಇದೇ ಸರಿಯಾಗಿ ಗೊತ್ತಿಲ್ಲದ ವ್ಯಕ್ತಿ ಅಲ್ಲಿಯೂ ಸಲ್ಲದ, ಇಲ್ಲಿಯೂ ಸಲ್ಲದ ಎಡಬಿಡಂಗಿಯಾಗುತ್ತಾನೆ.

ಕನ್ನಡ ನಾಮಫಲಕದ ಬಗೆಗಿನ ಹೋರಾಟ?
ನಾನಿದನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಇಲ್ಲಿಯ ತನಕ ಹೊರಗಿನಿಂದ ಬಂದವರಿಗೆ ಅನು ಕೂಲಕರವಾಗಿ ಯೋಚಿಸಿದ್ದೇವೆ, ವರ್ತಿಸಿದ್ದೇವೆ. ಇದರಿಂದ ಕನ್ನಡಕ್ಕೆ, ಕರ್ನಾಟಕದ ಸಾಂಸ್ಕƒತಿಕ ಪರಿಸರಕ್ಕೆ ಧಕ್ಕೆ ಆಯಿತೇ ವಿನಃ ಬೇರೇನೂ ಅಲ್ಲ. ವಿದೇಶಿಗರು, ಹೊರರಾಜ್ಯದವರು ಕನ್ನಡ ಕಲಿಯಲಿಲ್ಲ. ಜರ್ಮನ್‌ ದೇಶದಲ್ಲಿ ಎಲ್ಲವೂ ಜರ್ಮನ್‌ನಲ್ಲಿ ಇರುತ್ತದೆಯೇ ಹೊರತು ಇಂಗ್ಲಿಷ್‌ನಲ್ಲಲ್ಲ. ಒಂದು ಸಲ ಸಂತೆಗೆ ಹೋದ ಯಾವುದೇ ವಿದೇಶಿ ವ್ಯಕ್ತಿ ಕನಿಷ್ಠ ಐದೋ ಹತ್ತೋ ಜರ್ಮನ್‌ ಪದ ಕಲಿತು ಮನೆಗೆ ಮರಳುತ್ತಾನೆ. ಕನ್ನಡದಲ್ಲಿ ಯಾಕೆ ಹೀಗಾಗಬಾರದು!?

ಇತ್ತೀಚೆಗೆ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಎಂಬ ಬಗ್ಗೆ ತಮ್ಮ ಅಭಿಪಾಯ?
ಡಿಜಿಟಲ್‌ ಮಾಧ್ಯಮ ಹೆಚ್ಚು ಸಶಕ್ತವಾಗಿರುವುದ ರಿಂದ ಓದಿನ ರೀತಿಯಲ್ಲಿ ಹಲವು ಪಲ್ಲಟಗಳಾಗಿವೆ. ಟ್ಯಾಬ್‌, ಕಿಂಡಲ್‌ನಲ್ಲಿ ಪುಸ್ತಕ ಪಡೆದು ಓದುವ ಹೊಸ ಪೀಳಿಗೆಯ ಮಕ್ಕಳ ಸಂಖ್ಯೆ ಕಡಿಮೆಯೇನಲ್ಲ. ಆದರೆ ಮೊಬೈಲ್‌ ಕೈಗೆ ಬಂದಿದ್ದರಿಂದ ರೀಲ್ಸ್‌, ಮೀಮ್ಸ್‌ ಎಂದು ಶಾರ್ಟ್‌ ವೀಡಿಯೋಗಳನ್ನು ನೋಡುವವರ ಸಂಖ್ಯೆ ಏರಿಕೆಯಾಗಿದೆ. ಮೊದಲೆಲ್ಲ ಗೃಹಿಣಿಯರು ತಮ್ಮ ವಿರಾಮ ವೇಳೆಯಲ್ಲಿ ಪುಸ್ತಕದಲ್ಲಿ ಮುಖ ಹುದುಗಿಸಿದರೆ ಈಗ ಮೊಬೈಲ್‌ನತ್ತ ಮುಖ ಮಾಡಿದ್ದಾರೆ. ಪುಸ್ತಕದ ಓದು ಹಲವು ಸಾಧ್ಯತೆಗಳತ್ತ ನಮ್ಮನ್ನು ಪ್ರೇರೇಪಿಸುತ್ತದೆ ಎಂದೇ ಯುವ ಜನತೆ ಶ್ರದ್ಧಾಪೂರ್ವಕ ತೊಡಗಿಕೊಳ್ಳಬೇಕು.

ಜಿಲ್ಲೆ ತುಳು, ಬ್ಯಾರಿ ಕೊಂಕಣಿ ಆದ್ಯತೆಯ ಜಾಗ. ಇಲ್ಲಿ ಕನ್ನಡತನವೂ ಅಷ್ಟೇ ಪ್ರಬುದ್ಧ. ಮುಂದೆಯೂ ಈ ಕೊಂಡಿಯನ್ನು ಗಟ್ಟಿಗೊಳಿಸುವುದು ಹೇಗೆ?
ಈ ಜಿಲ್ಲೆಗೆ ಅದರದ್ದೇ ಆದ ಒಂದು ಸಾಂಸ್ಕೃತಿಕ “ಬನಿ’ ಇದೆ. ಸಾಮರಸ್ಯದ ಜೀವನ ಕ್ರಮವಿದೆ. ಮಾತೃಭಾಷೆ ಕೊಂಕಣಿಯಾದ ಎಂ.ಗೋವಿಂದ ಪೈ ಅವರು ತಮ್ಮನ್ನು ತಾವು “ಇಬ್ಬರು ತಾಯಿಯರ ಕೂಸು’ ಎಂಬರ್ಥದ ಮಾತುಗಳನ್ನಾಡಿದ್ದರು. ಹಲವರಿಗೆ ಕೊಂಕಣಿ, ಕನ್ನಡ, ಬ್ಯಾರಿ, ತುಳು ಭಾಷೆಗಳ ಪರಿಚಯವಿದೆ. ಎಂದಿಗಿಂತ ಹೆಚ್ಚಾಗಿ ಇಂದು ಜಿಲ್ಲೆಯವರಿಗೆ ಒಂದು ಸಾಂಸ್ಕƒತಿಕ ಸಮನ್ವಯದ ಎಚ್ಚರವನ್ನು ಸಾಮಾಜಿಕವಾಗಿ ಸ್ಥಾಪಿಸಿಕೊಳ್ಳಬೇಕಾದ ತುರ್ತಿದೆ. ಇದು ಜನರೇ ಪ್ರಜ್ಞಾಪೂರ್ವಕವಾಗಿ ಜರುಗಿಸಿಕೊಳ್ಳಬೇಕಾದ ಜವಾಬ್ದಾರಿ.

ಪುಸ್ತಕ ಪ್ರೀತಿ ಮೂಡಿಸುವ ಬಗೆ?
ಶಾಲಾ – ಕಾಲೇಜುಗಳ ನೆಲೆಯಲ್ಲಿ ಇದು ಸಾಧ್ಯವಾಗಬೇಕು. ದಿನದ ಒಂದಿಷ್ಟು ಹೊತ್ತಾ ದರೂ ಮಕ್ಕಳು ಪುಸ್ತಕ ಓದುವಂತೆ ಪಾಲಕರು ಕಾಳಜಿ ವಹಿಸಬೇಕು. ಶಾಲಾ-ಕಾಲೇಜುಗಳಲ್ಲಿ ಬಹುಮಾನವಾಗಿ ಪುಸ್ತಕಗ ಳನ್ನೇ ನೀಡಬೇಕು.ಮಾತೃ ಭಾಷಾ ಶಿಕ್ಷಣ, ದೇಸಿಯತೆ, ಪಾರಂಪರಿಕ ಜ್ಞಾನ ಎಲ್ಲವೂ ಒಂದಕ್ಕೊಂದು ಕೊಂಡಿ. ಇದರ ಬಗೆಗಿನ ಪ್ರೀತಿ ವಿಶ್ವಾ ತ್ಮಕವಾಗು ವಂತೆ ಮಾಡುವಲ್ಲಿ ಪುಸ್ತಕಗಳು ಮಹತ್ವದ್ದು.

– ಭರತ್‌ ಶೆಟ್ಟಿಗಾರ್‌

ಟಾಪ್ ನ್ಯೂಸ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.