ವಿ.ವಿ. ಪದವಿ ಫಲಿತಾಂಶ
Team Udayavani, Jun 20, 2019, 5:47 AM IST
ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳ ಫಲಿತಾಂಶ ಪ್ರಕಟವಾಗಿದ್ದು ವಿ.ವಿ.ಯ ಅಧಿಕೃತ ವೆಬ್‌ಸೈಟ್ www.mangaloreuniversity.ac.inನಲ್ಲಿ ಪ್ರಕಟಿಸಲಾಗಿದೆ. ಮರು ಮೌಲ್ಯಮಾಪನಕ್ಕೆ ಉತ್ತರ ಪತ್ರಿಕೆಗಳ ವೈಯಕ್ತಿಕ ವೀಕ್ಷಣೆಗೆ ಜೂ. 29ರೊಳಗೆ ಅರ್ಜಿ ಸಲ್ಲಿಸಬಹುದು.
2019ರ 2, 3 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾದ 83,196 ವಿದ್ಯಾರ್ಥಿಗಳಲ್ಲಿ 66,062 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇವರಲ್ಲಿ 26,448 ವಿದ್ಯಾರ್ಥಿಗಳು ಮತ್ತು 39,614 ವಿದ್ಯಾರ್ಥಿನಿಯರಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು
ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಪದವಿ ಪೂರೈಸಿದ್ದಾರೆ. ಕಲಾ ವಿಭಾಗದಲ್ಲಿ ಮೂರು ಸೆಮಿಸ್ಟರ್‌ಗಳಲ್ಲಿ 9,457 ವಿದ್ಯಾರ್ಥಿಗಳು, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ)ನಲ್ಲಿ 5,769 ವಿದ್ಯಾರ್ಥಿಗಳು, ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ (ಬಿಬಿಎಂ) 762 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗ (ಬಿ.ಕಾಂ.)ದಲ್ಲಿ 38, 682 ವಿದ್ಯಾರ್ಥಿಗಳು, ಕಂಪ್ಯೂಟರ್ ಎಪ್ಲಿಕೇಶನ್ (ಬಿಸಿಎ)ನಲ್ಲಿ 4775 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗ (ಬಿಎಸ್ಸಿ)ದಲ್ಲಿ 6,617 ವಿದ್ಯಾರ್ಥಿಗಳು ಪದವಿ ಪೂರೈಸಿದ್ದಾರೆ.
ಅನ್‌ಲೈನ್ ಎಂಟ್ರಿ ತ್ವರಿತ ಫಲಿತಾಂಶ
ಕಳೆದ ಎರಡು ಸೆಮಿಸ್ಟರ್‌ನಿಂದ ಮೌಲ್ಯಮಾಪನ ಸಂದರ್ಭದಲ್ಲೇ ಆನಲೈನ್ ಎಂಟ್ರಿ ಆರಂಭಿಸಿದ್ದು, ಈ ಬಾರಿ ಪ್ರಾಯೋಗಿಕ ಪರೀಕ್ಷೆಯನ್ನು ಆನ್‌ಲೈನ್ ಎಂಟ್ರಿ ಮೂಲಕ ಆರಂಭ ಮಾಡಲಾಗಿದೆ. ಪ್ರತಿಯೊಬ್ಬ ಮೌಲ್ಯಮಾಪಕರಿಗೂ ಶಾಶ್ವತ ಕೋಡ್ ನೀಡಲಾಗಿದ್ದು ಆ ಕೋಡ್‌ನ ಮೂಲಕವೇ ಆನ್‌ಲೈನ್ ಎಂಟ್ರಿ ಮಾಡಲಾಗುತ್ತಿದೆ. ಹಿಂದೆ ಟ್ಯಾಬ್ಯುಲೇಷನ್ ಪದ್ಧತಿ ಬಳಿಕ ಒಎಂಆರ್ ಶೀಟ್ ಮೂಲಕ ಅಂಕ ನಮೂದಿಸುವ ಪದ್ಧತಿ ಇತ್ತು. ಇದೀಗ ಆನ್‌ಲೈನ್ ಎಂಟ್ರಿಯಿಂದ ದೋಷಗಳು ಕಂಡು ಬರುವುದಿಲ್ಲ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ| ರವೀಂದ್ರ ಆಚಾರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
Mangaluru: ಕರಾವಳಿಯ ವೃತ್ತಿಪರರಿಗೆ ವಿಶ್ವದೆಲ್ಲೆಡೆ ಮನ್ನಣೆ
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.