ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಕೋವಿಡ್ ಲಸಿಕೆ
Team Udayavani, Jun 6, 2022, 12:47 AM IST
ಮಂಗಳೂರು: ಕೇಂದ್ರ ಹಜ್ ಸಮಿತಿಯ ಮೂಲಕ ಈ ವರ್ಷದ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ರವಿವಾರ ನಗರದ ಯೇನಪೊಯ ಆಸ್ಪತ್ರೆಯಲ್ಲಿ ನಡೆಯಿತು. ಕೇಂದ್ರ ಹಜ್ ಕಮಿಟಿಯ ಅಧ್ಯಕ್ಷ ಅಬ್ದುಲ್ಲಾ ಕುಟ್ಟಿ ಲಸಿಕೆ ಶಿಬಿರವನ್ನು ಉದ್ಘಾಟಿಸಿದರು.
ದೇಶಾದ್ಯಂತ 10 ಕೇಂದ್ರಗಳಿಂದ ಹಜ್ ಯಾತ್ರೆಗೆ ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ. ದೇಶದ ಮೊದಲ ಹಜ್ ವಿಮಾನ ಯಾನವು ಜೂ. 4ಕ್ಕೆ ಕೊಚ್ಚಿಯಿಂದ ಹೊರಟಿದೆ. ಈ ಹಿಂದೆ ಮಂಗಳೂರಿನಿಂದ ಹಜ್ ಯಾತ್ರೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಮಂಗಳೂರು, ಉಡುಪಿ, ಕೊಡಗು ಮತ್ತಿತರ ಕಡೆಯ ಹಜ್ ಯಾತ್ರಿಕರು ಬೆಂಗಳೂರಿನಿಂದ ಜೂ. 9ರಿಂದ ಹೊರಡಲಿದ್ದಾರೆ.
ದ.ಕ.: ಇಬ್ಬರಿಗೆ ಕೋವಿಡ್ ದೃಢ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ಎರಡು ಮಂದಿಗೆ ಕೋವಿಡ್ ದೃಢಪಟ್ಟಿದೆ. ಯಾವುದೇ ಸಾವಿನ ವರದಿಯಾಗಿಲ್ಲ. 4 ಮಂದಿ ಗುಣಮುಖರಾಗಿದ್ದಾರೆ. ಸದ್ಯ 22 ಸಕ್ರಿಯ ಪ್ರಕರಣಗಳಿವೆ.
ಉಡುಪಿ: 1 ಪಾಸಿಟಿವ್ ಪ್ರಕರಣ
ಉಡುಪಿ: ಜಿಲ್ಲೆಯಲ್ಲಿ ರವಿವಾರ ಒಂದು ಕೋವಿಡ್ ಪ್ರಕರಣ ವರದಿಯಾಗಿದೆ. 123 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. 7 ಸಕ್ರಿಯ ಪ್ರಕರಣಗಳಿವೆ.
52 ಮಂದಿಗೆ ಲಸಿಕೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ರವಿವಾರ 52 ಮಂದಿಗೆ ಲಸಿಕೆ ನೀಡಲಾಗಿದೆ. 15 ಮಂದಿಗೆ ಮೊದಲ ಡೋಸ್, 31 ಮಂದಿಗೆ ಎರಡನೆ ಮತ್ತು 6 ಮಂದಿಗೆ ಮುಂಜಾಗ್ರತೆ ಲಸಿಕೆ ವಿತರಿಸಲಾಗಿದೆ ಎಂದು ಡಿಎಚ್‌ಒ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.