ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ
Team Udayavani, Jan 11, 2025, 12:00 AM IST
ಮಂಗಳೂರು/ಉಡುಪಿ: ವೈಕುಂಠ ಏಕಾದಶಿ ಪ್ರಯುಕ್ತ ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧ ವೆಂಕಟರಮಣ ದೇಗುಲಗಳಲ್ಲಿ, ಇಸ್ಕಾನ್ ದೇಗುಲಗಳಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜೆಗಳು ಜರಗಿದವು.
ಉಡುಪಿಯ ಶ್ರೀಕೃಷ್ಣಮಠದಲ್ಲಿ ಸಪ್ತೋತ್ಸವದ ಎರಡನೆಯ ದಿನವಾಗಿದ್ದು ನಿರ್ಜಲ ಉಪವಾಸದೊಂದಿಗೆ ಪರ್ಯಾ ಯ ಪುತ್ತಿಗೆ ಮಠಾಧೀಶರು ವಿಶೇಷ ಪೂಜಾದಿಗಳನ್ನು ನಡೆಸಿದರು.
ಗೀತಾ ಮಂದಿರದಲ್ಲಿ ಸೂರ್ಯಾಸ್ತಮಾನದಿಂದ ಸೂರ್ಯೋದಯದವರೆಗೆ ಏಕಾದಶಿ ಜಾಗರಣೆ ನಿಮಿತ್ತ ಅಖಂಡ ಗೀತಾ ಪಾರಾಯಣ ನಡೆಯಿತು.
ಉಭಯ ಜಿಲ್ಲೆಯ ಮಂಗಳೂರು, ಉಡುಪಿ, ಕುಂದಾಪುರ, ಗಂಗೊಳ್ಳಿ, ಕಾರ್ಕಳ, ಮೂಲ್ಕಿ, ಬಂಟ್ವಾಳ ವೆಂಕಟರಮಣ ದೇವಸ್ಥಾನ ಸಹಿತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಂಪನ್ನಗೊಂಡಿತು.
ಮುಂಜಾನೆಯಿಂದಲೇ ಭಕ್ತರು ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಧಾರ್ಮಿಕ ಕಾರ್ಯಗಳ ಜತೆಗೆ ನಿರಂತರ ಭಜನೆ, ಸಂಕೀರ್ತನೆ, ಮಹಾಪೂಜೆಗಳು ನೆರವೇರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ
ಮೂರು ದಿನವಾದರೂ ದಾಖಲಾಗದ ಎಫ್‌ಐಆರ್ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!
ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.