ವಾಲ್ಮೀಕಿ ಪ್ರಸ್ತುತ ಸಮಾಜಕ್ಕೆ ಮಾದರಿ:ರೈ
Team Udayavani, Oct 6, 2017, 2:42 PM IST
ಬಂಟ್ವಾಳ: ಸಾಧನೆ ಪರಿಶ್ರಮಗಳಿಂದ ವ್ಯಕ್ತಿಯೊಬ್ಬ ಎಂತಹ ಮಟ್ಟಕ್ಕೆ ತಲು ಪಬಹುದು ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಪ್ರಸ್ತುತ ಸಮಾಜಕ್ಕೆ ಮಾದರಿಯಾಗುತ್ತಾರೆ. ಸಮಾಜಕ್ಕೆ ಪೂರಕವಾದ ಕೆಲಸಗಳ ಮೂಲಕ ಗುರುತಿಸಿಕೊಳ್ಳುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಅ.5ರಂದು ಬಿ.ಸಿ.ರೋಡ್ ತಾ.ಪಂ. ಸಭಾಂಗಣದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಸಾಮಾಜಿಕ ನ್ಯಾಯವಂಚಿತ, ಶೋಷಿತ ಬೇಡ ಸಮಾಜದಲ್ಲಿ ಅವರು ಹುಟ್ಟಿದರೂ ಸಮಾಜಕ್ಕೆ ಒಂದು ಮಹಾಗ್ರಂಥವನ್ನು
ನೀಡಿದವರು ಎಂದು ರೈ ಹೇಳಿದರು.
ಸಂಪನ್ಮೂಲ ವ್ಯಕ್ತಿ, ಬೆಳ್ತಂಗಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಅರವಿಂದ ಚೊಕ್ಕಾಡಿ ಮುಂಡಾಜೆ ಮಾತನಾಡಿದರು. ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಪ್ರಸ್ತಾವನೆ ನೀಡಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ವಂದಿಸಿದರು. ಮಂಜು ವಿಟ್ಲ ನಿರ್ವಹಿಸಿದರು
ಸಾಧನೆಗಳಿಂದ ಶ್ರೇಷ್ಠ
ವಾಲ್ಮೀಕಿ ನಮಗೆ ಆದರ್ಶವಾಗಬೇಕು. ಸಮಾಜದಲ್ಲಿ ಹಿಂದೆ ಉಳಿದವನು ಕೂಡ ಮುಂದೆ ಬರುವುದಕ್ಕೆ ಅನೇಕ ಸಾಧನೆಗಳಿಂದ ಸಾಧ್ಯವೆನ್ನುವುದಕ್ಕೆ ರಾಮಾಯಣದ ಕರ್ತೃ ವಾಲ್ಮೀಕಿ ನಮಗೆ ಸಾಕ್ಷಿಯಾಗುತ್ತಾರೆ. ಯಾರೂ ಹುಟ್ಟಿನಿಂದ ಶ್ರೇಷ್ಠ ಅಥವಾ ಕೀಳಲ್ಲ. ಸಾಧನೆಗಳಿಂದ ಶ್ರೇಷ್ಠರಾಗುತ್ತಾರೆ.
ಚಂದ್ರಹಾಸ ಕರ್ಕೇರ,
ತಾ.ಪಂ.ಅಧ್ಯಕ್ಷ, ಬಂಟ್ವಾಳ
ಯುವಜನತೆಗೆ ಪ್ರೇರಣಾ ಶಕ್ತಿ
ಮಹಾಕವಿ ವಾಲ್ಮೀಕಿ ಇಡೀ ವಿಶ್ವಕ್ಕೆ ಮೊಟ್ಟ ಮೊದಲ ಬಾರಿಗೆ ರಾಮರಾಜ್ಯ ಪರಿಚಯ ಮಾಡಿಸಿದ ಮಹರ್ಷಿ. ರಾಮಾಯಣ ಮಹಾಕಾವ್ಯದ ಮೂಲಕ ಮರ್ಯಾದ ಪುರುಷೋತ್ತಮ ಶ್ರೀರಾಮನ ಬದುಕು ಎಲ್ಲ ಕಾಲಕ್ಕೂ ಆದರ್ಶವಾಗಿದೆ ಎಂದು ತೋರಿಸಿದ ಮಹಾಕವಿ. ವಾಲ್ಮೀಕಿ ಮಹರ್ಷಿ ನಮ್ಮ ನಾಡಿನ ಯುವಜನತೆಗೆ ಪ್ರೇರಣಾ ಶಕ್ತಿ ಎಂದು ಸಚಿವ ರೈ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.