ವಾಲ್ಮೀಕಿ ಸಂದೇಶ ಎಂದಿಗೂ ಪ್ರಸ್ತುತ : ಶಾಸಕ ಲೋಬೋ
Team Udayavani, Oct 6, 2017, 10:03 AM IST
ಪುರಭವನ : ರಾಮಾಯಣವೆಂಬ ಪವಿತ್ರ ಕೃತಿಯ ಮೂಲಕ ವಾಲ್ಮೀಕಿ ಜಗತ್ತಿಗೆ ಆದರ್ಶದ ಸಂದೇಶ ಸಾರಿದ್ದು, ಅದರ ಪ್ರತಿ ಅಂಶವೂ ಇಂದಿಗೆ ಅತ್ಯಂತ ಪ್ರಸ್ತುತ ಎಂದು ಶಾಸಕ ಜೆ.ಆರ್. ಲೋಬೋ ಹೇಳಿದರು.
ಪುರಭವನದಲ್ಲಿ ಜಿಲ್ಲಾಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ವಾಲ್ಮೀಕಿ ನಾಯಕ ಅಸೋಸಿಯೇಶನ್ ಆಶ್ರಯದಲ್ಲಿ ಗುರುವಾರ ಆಯೋಜಿಸಲಾದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರತ್ನಾಕರನೆಂಬ ವ್ಯಕ್ತಿಯು ಸಂತರ ಸಹವಾಸದಿಂದ ತಾನು ಹಿಂದೆ ಮಾಡಿದ್ದ ತಪ್ಪನ್ನು ಅರಿತು ವಾಲ್ಮೀಕಿಯಾಗಿ
ರಾಮಾಯಣವೆಂಬ ಕೃತಿಯನ್ನು ಜಗತ್ತಿಗೆ ನೀಡಿದರು. ಅವರು ಮನುಕುಲದ ಆಸ್ತಿಯಾಗಿದ್ದು, ಸಮಾಜದ ಜನರೆಲ್ಲರೂ
ರಾಮ, ಲಕ್ಷ್ಮಣ, ಸೀತೆಯಂತೆ ಆದರ್ಶರಾಗಿ ಜೀವಿಸಬೇಕೆಂಬ ಸಂದೇಶ ಅವರ ಕೃತಿಯದ್ದಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಸಮ್ಮಾನ
2016- 17ನೇ ಸಾಲಿನಲ್ಲಿ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳನ್ನು ಈ ವೇಳೆ
ಸಮ್ಮಾನಿಸಲಾಯಿತು.
ಮೇಯರ್ ಕವಿತಾ ಸನಿಲ್, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಜಿತ್, ಎಸಿ ರೇಣುಕಾ ಪ್ರಸಾದ್, ತಹಶೀಲ್ದಾರ್ ಗುರುಪ್ರಸಾದ್, ಜಿ.ಪಂ. ಉಪ ಕಾರ್ಯದರ್ಶಿ ಉಮೇಶ್, ದ.ಕ. ವಾಲ್ಮೀಕಿ ನಾಯಕ ಅಸೋಸಿಯೇಶನ್ ಅಧ್ಯಕ್ಷ ಹಾಲೇಶಪ್ಪ ಉಪಸ್ಥಿತರಿದ್ದರು. ಐಟಿಡಿಪಿ ಅಧಿಕಾರಿ ಡಾ| ಹೇಮಲತಾ ಸ್ವಾಗತಿಸಿ, ಸ್ಮಿತಾ ಶೆಣೈ ನಿರೂಪಿಸಿದರು.
ದೇಶ ಕಟ್ಟುವ ಕೆಲಸವಾಗಲಿ
ವಾಲ್ಮೀಕಿಯ ಬರಹದ ಸಂದೇಶಗಳು ಪರಿಶ್ರಮ, ದೃಢತೆ ಹಾಗೂ ಬದ್ಧತೆಯಿಂದ ಕೂಡಿವೆ. ತಮ್ಮ ಕೃತಿಯ ಮೂಲಕ ಸಮಾಜದ ಕಣ್ಣು ತೆರೆಸುವ ಕೆಲಸವನ್ನು ಅವರು ಮಾಡಿದ್ದಾರೆ. ಹಾಗಾಗಿ ಅವರ ಸಂದೇಶಗಳನ್ನು ಪಾಲಿಸುವುದರೊಂದಿಗೆ ಸಮಾಜ ಹಾಗೂ ದೇಶವನ್ನು ಕಟ್ಟುವ ಕೆಲಸವಾಗಬೇಕು.
ಐವನ್ ಡಿ’ ಸೋಜಾ,
ವಿಧಾನ ಪರಿಷತ್ ಮುಖ್ಯ ಸಚೇತಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.