ಗೆಲುವು ವಿಧಾನಸಭಾ ಚುನಾವಣೆಗೆ ದಿಕ್ಸೂಚಿ: ಮಲ್ಲಿಕಾ ಪ್ರಸಾದ್
Team Udayavani, Feb 22, 2017, 2:16 PM IST
ಪುತ್ತೂರು: ಕಾರ್ಯಕರ್ತರ, ಮುಖಂಡರ ಸಂಘಟಿತ ಪ್ರಯತ್ನದಿಂದ ನಗರಸಭಾ ಉಪ ಚುನಾವಣೆಯಲ್ಲಿ ಬಿಜೆಪಿಗೆ ಗುಣಾತ್ಮಕ ಗೆಲುವು ಲಭಿಸಿದೆ. ಈ ಗೆಲುವು ಮುಂದಿನ ವಿಧಾನಸಭಾ ಚುನಾವಣೆಗೂ ದಿಕ್ಸೂಚಿಯಾಗಲಿದೆ ಎಂದು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಹೇಳಿದರು.
ಮಂಗಳವಾರ ಟೌನ್ ಹಾಲ್‌ನಲ್ಲಿ ನಡೆದ ಬಿಜೆಪಿ ನಗರ ಮಂಡಲ ಕಾರ್ಯಕಾರಿಣಿ ಸಭೆ, ನಗರಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು, ಕಾರ್ಯ ಕರ್ತರ ಅಭಿನಂದನ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು.
ನಗರ ಮಂಡಲ ಅತ್ಯಂತ ಅದ್ಭುತವಾಗಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡ ಕಾರಣ 3 ಸ್ಥಾನಗಳು ಹೆಚ್ಚುವರಿಯಾಗಿ ಬಿಜೆಪಿಗೆ ಲಭಿಸಿವೆ. ಪ್ರತಿಯೊಂದು ಮೋರ್ಚಾಗಳು ಸಂಘಟಿತವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಧನಾತ್ಮಕ ಫಲಿತಾಂಶ ಸಿಗಲು ಸಾಧ್ಯವಿದೆ ಎಂದರು.
ಸಣ್ಣ ಸಣ್ಣ ಭಿನ್ನಾಭಿಪ್ರಾಯ, ಗೊಂದಲ, ವೈಮನಸ್ಸುಗಳನ್ನು ಬಿಟ್ಟು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕಾರ್ಯದಲ್ಲಿ ಈಗಿನಿಂದಲೇ ಅಣಿಯಾಗಬೇಕಿದೆ ಎಂದು ಹೇಳಿದರು.
ಉತ್ತಮ ಬೆಳವಣಿಗೆ
ಬಿಜೆಪಿಯಲ್ಲಿ ನಗರಮಂಡಲ, ಗ್ರಾಮಾಂತರ ಮಂಡಲ ವಿಭಜಿಸಿರುವುದು ಸಂಘಟನಾತ್ಮಕ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಇದರಿಂದ ಪಕ್ಷವನ್ನು ಬಲಾಡ್ಯ ವಾಗಿ ಸಂಘಟಿಸಲು ಸಾಧ್ಯವಿದೆ. ಪಕ್ಷ ನಮ್ಮ ಮನೆ ಎನ್ನುವ ನಿಟ್ಟಿನಲ್ಲಿ ಭಾವಿಸಿ, ದುಡಿಯಬೇಕು. ಪುತ್ತೂರಿಗೆ ಅಚ್ಚೇದಿನ್ ಬರುವುದು ಖಚಿತ ಎಂದರು. ಗೆಲುವು ಸಾಧಿಸಿದ ನಗರಸಭಾ ಸದಸ್ಯರು ಹಾಗೂ ಪರಾಜಿತ ಅಭ್ಯರ್ಥಿಗಳು ತಮ್ಮ ವಾರ್ಡ್‌ನ್ನು ಅಭಿವೃದ್ಧಿಗೊಳಿಸಿ, ಮತ ದಾರರ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕಾಗಿದೆ ಎಂದು ಹೇಳಿದರು.
ಜನಪ್ರತಿನಿಧಿಯ ಕರ್ತವ್ಯ
ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಗೋಪಾಲಕೃಷ್ಣ ಹೇರಳೆ ಮಾತನಾಡಿ, ನಗರಸಭೆ ಉಪಚುನಾವಣೆ ಗೆಲುವೇ ಸಂಘಟಿತ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿ ಯಾಗಿದೆ. ವಿಜೇತ ಅಭ್ಯರ್ಥಿಗಳಷ್ಟೇ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಜವಾಬ್ದಾರಿಯಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಯಾದವನ ಆದ್ಯ ಕರ್ತವ್ಯವಾಗಿದೆ ಎಂದರು. ರಾಷ್ಟ್ರ ರಕ್ಷಣೆ ಭಾರತೀಯ ಜನತಾ ಪಾರ್ಟಿಯಿಂದ ಮಾತ್ರ ಸಾಧ್ಯ ಎನ್ನುವುದನ್ನು ಪ್ರಧಾನಿ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ನಾವು 3 ಸ್ಥಾನಗಳಲ್ಲಿ ಗೆದ್ದರೂ ಕೂಡಾ 6 ಸ್ಥಾನಗಳನ್ನು ಗೆದ್ದಂತೆ. ಸಂಘಟನಾತ್ಮಕ ಕಾರ್ಯ, ಕಾರ್ಯಕರ್ತರ ಉತ್ಸಾಹದಿಂದ ಗೆಲುವು ಸಾಧ್ಯವಾಗಿದೆ ಎಂದರು. ಈ ಚುನಾವಣೆಯಲ್ಲಿ ಉಳಿದ 21 ವಾರ್ಡಿನ ಕಾರ್ಯಕರ್ತರು ಕೂಡ ಬಿಜೆಪಿಯನ್ನು ಗೆಲ್ಲಿಸಲೇಬೇಕೆಂಬ ಶಪಥದೊಂದಿಗೆ ಶ್ರಮ ಪಟ್ಟಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ ನಗರಮಂಡಲ ಅಧ್ಯಕ್ಷ ಜೀವಂದರ್ ಜೈನ್ ಮಾತನಾಡಿ, 6 ವಾರ್ಡ್ ಗಳಲ್ಲೂ ಕಾರ್ಯಕರ್ತರು ಅದ್ಭುತವಾದ ಪರಿಶ್ರಮ ಪಟ್ಟಿದ್ದಾರೆ. 3 ವಾರ್ಡ್‌ಗಳಲ್ಲಿ ಅಲ್ಪ ಮತಗಳಿಂದ ಸೋತಿದ್ದರೂ ಮತಗಳಿಕೆ ಯಲ್ಲಿ ಮುಂದಿದ್ದೇವೆ ಎಂದರು. ಹಿಂದೆ 200- 300 ಮತಗಳ ಅಂತರದಿಂದ ಪರಾಭ ವಗೊಳ್ಳುತ್ತಿದ್ದೆವು. ಆದರೆ ಅದು ಇದೀಗ ಎರಡಂಕಿಗೆ ಕುಸಿದಿದೆ. ಇದರಿಂದ ವಾರ್ಡ್ ಗಳಲ್ಲಿ ಬಿಜೆಪಿಯ ಬೆಳವಣಿಗೆ ಎಂದರು.
ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ ಮಾತನಾಡಿದರು. ವಿಜೇತ ಅಭ್ಯರ್ಥಿಗಳಾದ ಸುಂದರ ಪೂಜಾರಿ ಬಡಾವು, ರಮೇಶ್ ರೈ ಮೊಟ್ಟೆತ್ತಡ್ಕ ಹಾಗೂ ಶ್ಯಾಮಲಾ ವಸಂತ್‌ರನ್ನು ಅಭಿನಂದಿಸಲಾಯಿತು. ಪರಾಜಿತ ಅಭ್ಯರ್ಥಿಗಳನ್ನು ಕಾರ್ಯಕಾರಿಣಿಯಲ್ಲಿ ಗುರುತಿಸುವ ಕಾರ್ಯ ನಡೆಯಿತು. ವಿಜೇತ ಅಭ್ಯರ್ಥಿಗಳು ಗೆಲುವಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ನಿಧನ ಹೊಂದಿದ ಆರ್‌ಎಸ್‌ಎಸ್ ಹಿರಿಯ ನಾಯಕ ಮೈ.ಚ. ಜಯದೇವ್ ಅವರಿಗೆ ಮೌನ ಪ್ರಾರ್ಥನೆ ಮೂಲಕ ಗೌರವ ಸಲ್ಲಿಸಲಾಯಿತು. ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ ವರದಿ ಮಂಡಿಸಿದರು. ವಿವಿಧ ಮೋರ್ಚಾಗಳ ಪ್ರಧಾನ ಕಾರ್ಯದರ್ಶಿಗಳು ವರದಿ ಮಂಡಿಸಿದರು.
ನಗರಮಂಡಲ ಪ್ರಧಾನ ಕಾರ್ಯದರ್ಶಿ ಗೌರಿ ಬನ್ನೂರು ಸ್ವಾಗತಿಸಿ, ನಗರಸಭೆ ಸದಸ್ಯ ಸುಜೀಂದ್ರ ಪ್ರಭು ವಂದಿಸಿದರು. ನಗರಮಂಡಲ ಯುವಮೋರ್ಚಾದ ಅಧ್ಯಕ್ಷ ಅನೀಶ್ ಬಡೆಕ್ಕಿಲ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.