![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 13, 2019, 5:30 AM IST
ಪಣಂಬೂರು: ರಾಜ್ಯ ಕರಾವಳಿಯಲ್ಲಿ ಕಣ್ಗಾವಲು, ಗಸ್ತು ಬಲಪಡಿಸುವುದಕ್ಕಾಗಿ ಪಣಂಬೂರಿನಲ್ಲಿರುವ ಕೋಸ್ಟ್‌ಗಾರ್ಡ್ ಕೇಂದ್ರಕ್ಕೆ ಅತ್ಯಾಧುನಿಕ ಕಾವಲು ಹಡಗು “ವರಾಹ’ ಅ.15ರಂದು ಸೇರ್ಪಡೆಗೊಳ್ಳಲಿದೆ. ಎಲ್ ಆ್ಯಂಡ್ ಟಿ ಕಂಪೆನಿಯು ಈ ನೂತನ ಹಡಗನ್ನು ನಿರ್ಮಿಸಿದೆ. ಸಮುದ್ರ ಮಾರ್ಗದಲ್ಲಿ ಕಳ್ಳಸಾಗಾಣಿಕೆ, ತೈಲ ಸೋರಿಕೆ, ತಪಾಸಣೆ, ಭದ್ರತೆಯ ಕಣ್ಗಾವಲಿಗೆ ಇದನ್ನು ಉಪಯೋಗಿಸಲಾಗುತ್ತದೆ. 14 ಅಧಿಕಾರಿಗಳು ಮತ್ತು 89 ಸಿಬಂದಿಯನ್ನು ಈ ಹಡಗು ಹೊಂದಿರಲಿದ್ದು, ಯಾವುದೇ ಕ್ಷಣದಲ್ಲಿಯೂ ಕಾರ್ಯಾಚರಣೆಗೆ ಇಳಿಯಲು ಸನ್ನದ್ಧವಾಗಿರುತ್ತದೆ. ಪಶ್ಚಿಮ ಕೋಸ್ಟ್ ಗಾರ್ಡ್ ಕಮಾಂಡಿಂಗ್ ಕೇಂದ್ರದಡಿ ಇದು ಕರ್ತವ್ಯ ನಿರ್ವಹಿಸಲಿದೆ.
ತುರ್ತು ಸಂದರ್ಭಗಳಲ್ಲಿ 2 ಎಂಜಿನ್‌ಗಳ ಹೆಲಿಕಾಪ್ಟರ್ ಹೊತ್ತೂಯ್ಯಬಲ್ಲ ಸಾಮರ್ಥ್ಯವುಳ್ಳ ಈ ಹಡಗು 30 ಎಂ.ಎಂ. ಗನ್, 12.7 ಎಂ.ಎಂ ಗನ್, ಅತ್ಯಾಧುನಿಕ ರಾಡಾರ್, ಸೆನ್ಸರ್, ಹೈಸ್ಪೀಡ್ ಬೋಟ್‌ಗಳು ಮತ್ತಿತರ ಸೌಲಭ್ಯಗಳನ್ನು ಒಳಗೊಂಡಿದೆ. 2,100 ಟನ್ ಭಾರದ ಈ ಹಡಗು ತಾಸಿಗೆ 26 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸಬಲ್ಲುದು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.