ಅಂಗವಿಕಲರಿಗೆ ವಿವಿಧ ಸಲಕರಣೆ ವಿತರಣೆ
Team Udayavani, Mar 18, 2018, 10:04 AM IST
ಮಹಾನಗರ: ದ.ಕ. ಸಂಸದ ನಳಿನ್ಕುಮಾರ್ ಕಟೀಲು ಅವರು ಶನಿವಾರ ನಗರದ ಜಿ.ಪಂ. ಸಭಾಂಗಣದಲ್ಲಿ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಒಟ್ಟು 8.29 ಲಕ್ಷ ರೂ. ಅನುದಾನದಲ್ಲಿ ಒಟ್ಟು ಏಳು ಮಂದಿ ಅಂಗವಿಲಕರಿಗೆ ಕೃತಕ ಕಾಲು ಹಾಗೂ ಕೈ ಜೋಡಣೆ ಸಲಕರಣೆಗಳನ್ನು ವಿತರಿಸಿದರು.
ಫಲಾನುಭವಿಗಳಾದ ಚಿಕ್ಕಮುಟ್ನೂರಿನ ರೂಪೇಶ್, 102 ನೆಕ್ಕಿಲಾಡಿಯ ಗಣೇಶ್ ಎಂ., ಮುರುಳ್ಯದ ಸೀತಾರಾಮ, ಬಜ್ಜೋಡಿಯ ನಾರಾಯಣ ಶೆಟ್ಟಿ, ಕೊಯಿಲ ಗ್ರಾಮದ ರಕ್ಷಿತಾ, ರಾಮಕುಂಜದ ರಾಧಾಕೃಷ್ಣ ಎ., ತೋಕೂರಿನ ಆನಂದ ಪೂಜಾರಿ ಅವರಿಗೆ ಸೌಲಭ್ಯ ವಿತರಿಸಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಸಿಇಒ ಡಾ| ಎಂ.ಆರ್. ರವಿ, ಯೋಜನ ನಿರ್ದೇಶಕ ಲೋಕೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಎಂಡೋಲೈಟ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಜೆ. ಇಮ್ಯಾನುವೆಲ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.