ಮಳೆ, ಪ್ರವಾಹ ಶಾಂತವಾಗಲು ದೇವರಿಗೆ ಮೊರೆ
Team Udayavani, Aug 23, 2018, 10:37 AM IST
ಸುಬ್ರಹ್ಮಣ್ಯ: ಮಳೆ ಹಾಗೂ ಪ್ರವಾಹದಿಂದ ನಾಡಿನಲ್ಲಿ ನಡೆಯುತ್ತಿರುವ ಅನಾಹುತಗಳು ಕಡಿಮೆಯಾಗಬೇಕು ಎಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇಗುಲದಲ್ಲಿ ಮಂಗಳವಾರ ಸಾಮೂಹಿಕ ಪ್ರಾರ್ಥನೆ ಹಾಗೂ ಕಾರ್ತಿಕ ಪೂಜೆ, ದೀಪಾರಾಧನೆ ನಡೆಸಲಾಯಿತು.
ನಾಡಿನ ವಿವಿಧೆಡೆ ಮಳೆ ಹಾಗೂ ಗಾಳಿಯಿಂದ ಹಾನಿಯಾಗುತ್ತಿದೆ.ಇದರಿಂದ ಜನತೆ ಸಂಕಷ್ಟ ಅನುಭವಿಸುತ್ತಿದ್ದು ಅನೇಕರು ನಿರಾಶ್ರಿತರಾಗಿದ್ದಾರೆ. ಇದೀಗ ದೇವರ ಮೊರೆ ಹೋಗಿ ಎಲ್ಲ ಅಬ್ಬರಗಳನ್ನೂ ತಗ್ಗಿಸಿ ಎಂದು ವೇ|ಮೂ| ವೆಂಕಟ್ರಮಣ ಭಟ್ ಮಂಜಳಗಿರಿ ಹಾಗೂ ವೇ|ಮೂ| ಕೇಶವ ಜೋಯಿಸ್ ಅವರು ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿದರು.
ಆ. 26: ವರುಣ ಯಜ್ಞ
ಆ. 26ರಂದು ವರುಣ ಜಪ, ರುದ್ರಪಾರಾಯಣ, ವರುಣ ಯಜ್ಞ ಮೊದಲಾದ ಕಾರ್ಯಕ್ರಮಗಳನ್ನು ಲೋಕ ಕಲ್ಯಾಣಾರ್ಥವಾಗಿ ನಡೆಸಲು ನಿರ್ಧರಿಸಲಾಯಿತು. ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಹೊಸೋಳಿಕೆ, ಪ್ರಧಾನ ಅರ್ಚಕ ಪರಮೇಶ್ವರ ಭಟ್ ವಳಲಂಬೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸರೋಜಿನಿ ಮುಳುಗಾಡು, ಕೋಮಲ ಮುತ್ಲಾಜೆ, ಅರ್ಚಕ ಮಹಾಬಲೇಶ್ವರ ಭಟ್, ಗುತ್ತಿಗಾರು ವಲಯ ಹವ್ಯಕ ಪರಿಷತ್ತು ಅಧ್ಯಕ್ಷ ಸೀತಾರಾಮ ಭಟ್ ಅಡಿಕೆಹಿತ್ಲು, ಕಾರ್ಯದರ್ಶಿ ಸೂರ್ಯನಾರಾಯಣ ಪುಚ್ಚಪ್ಪಾಡಿ, ಪ್ರಮುಖರಾದ ಎಂ.ಜಿ. ಸತ್ಯನಾರಾಯಣ ಮೊಗ್ರ, ವೇ| ಮೂ| ವೆಂಕಟ್ರಮಣ ಭಟ್ ಮಂಜಳಗಿರಿ, ವೇ| ಮೂ| ಕೇಶವ ಜೋಯಿಸ್ ಕರುವಜೆ, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಸುಬ್ರಹ್ಮಣ್ಯ ಭಟ್ ಜೀರ್ಮುಖಿ, ಮಾಧವ ಮೂಕಮಲೆ, ಶ್ರೀಕೃಷ್ಣ ಭಟ್ ಗುಂಡಿಮಜಲು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.