ಕೊರೊನಾ: ತರಕಾರಿ, ಹಣ್ಣು ಹಂಪಲು ವ್ಯವಹಾರ ಅಬಾಧಿತ
ಮಾರುಕಟ್ಟೆಯಲ್ಲಿ ವ್ಯವಹಾರ ಹೆಚ್ಚಳ
Team Udayavani, Mar 16, 2020, 5:18 AM IST
ವಿಶೇಷ ವರದಿ-ಮಹಾನಗರ: ಕೊರೊನಾ ರೋಗ ಭೀತಿಯು ಎಲ್ಲೆಡೆ ತಲ್ಲಣ ಉಂಟು ಮಾಡಿದ್ದರೂ ನಗರದಲ್ಲಿ ತರಕಾರಿ ಮತ್ತು ಹಣ್ಣು ಹಂಪಲು ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮವೇನೂ ಬೀರಿಲ್ಲ.
ಬದಲಾಗಿ ಮಾಲ್‌ಗಳನ್ನು ಸರಕಾರಿ ಆದೇಶದಂತೆ ಬಂದ್ ಮಾಡಿದ ಹಿನ್ನೆಲೆಯಲ್ಲಿ ಕಳೆದ 2 ದಿನಗಳಿಂದ ಮಾರುಕಟ್ಟೆಯಲ್ಲಿ ವ್ಯವಹಾರ ಜಾಸ್ತಿಯಾಗಿದೆ. ತರಕಾರಿಗಳ ಪೂರೈಕೆಯಲ್ಲಾಗಲಿ ಮತ್ತು ಬೆಲೆಗಳಲ್ಲಾಗಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.
ಮಂಗಳೂರಿನ ಮಾರುಕಟ್ಟೆಗೆ ಸ್ಥಳೀಯ ಬೆಳೆಗಾರರಿಂದ ಹಾಗೂ ಬಯಲು ಸೀಮೆಯಿಂದ ತರಕಾರಿ ಪೂರೈಕೆ ಆಗುತ್ತಿದೆ. ಹಣ್ಣು ಹಂಪಲುಗಳು ಬೆಂಗಳೂರು, ಹುಬ್ಬಳ್ಳಿ, ಮಹಾರಾಷ್ಟ್ರ ಭಾಗದಿಂದ ಬರುತ್ತಿವೆ.
ಹೆತ್ತವರೂ ರಜೆ, ಕಾರ್ಮಿಕರ ಕೊರತೆ
ಸರಕಾರ ಶಾಲೆಗಳಿಗೆ ರಜೆ ಘೋಷಿಸಿ ರುವುದರಿಂದ ಹೆತ್ತವರು ತಮ್ಮ ಕೆಲಸವನ್ನು ಬಿಟ್ಟು ಮಕ್ಕಳನ್ನು ನೋಡಿಕೊಳ್ಳುವ ದೃಷ್ಟಿಯಿಂದ ಮನೆಯಲ್ಲಿ ಇರ ಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಹಾಸನ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ, ರಾಮನಗರಗಳಲ್ಲಿ ಕಾರ್ಮಿಕರ ಕೊರತೆ ಉಂಟಾಗಿದೆ. ಇದರಿಂದ ತರಕಾರಿ ಕೊಯ್ಲು ಆಗದೆ ಮಂಗಳೂರಿಗೆ ಬರುವ ತರಕಾರಿಯಲ್ಲಿ ಅಲ್ಪ ಇಳಿಮುಖವಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಚೈನೀಸ್ ತರಕಾರಿ ಗ್ರಾಹಕರ ಇಳಿಮುಖ
ಬಾರ್‌ಗಳು ಬಂದ್ ಆಗಿರುವುದರಿಂದ ಚೈನೀಸ್ ತರಕಾರಿಗಳ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ. ಹಾಗಾಗಿ ವ್ಯವಹಾರ ಕುಸಿದಿದೆ. ಚೈನೀಸ್ ತರಕಾರಿಗಳ ಪೂರೈಗೆ ಸಾಕಷ್ಟಿದೆ, ಬೆಲೆಗಳ ಯಥಾ ಸ್ಥಿತಿಯಲ್ಲಿವೆ.
– ನಿತಿನ್ ಶೆಟ್ಟಿ, ವ್ಯಾಪಾರಿ
ವ್ಯಾಪಾರ ಚೆನ್ನಾಗಿದೆ: ಆದರೆ ಪಾರ್ಕಿಂಗ್ ಸಮಸ್ಯೆ
ಹಣ್ಣು ಹಂಪಲು ವ್ಯಾಪಾರ ಚೆನ್ನಾಗಿದೆ. ಎಲ್ಲ ಕಡೆಗಳಿಂದ ಹಣ್ಣು ಹಂಪಲುಗಳು ಆವಕವಾಗುತ್ತಿವೆ. ಮಾಲ್‌ಗಳು ಬಂದ್ ಆಗಿರುವುದರಿಂದ ಜನರು ಸೆಂಟ್ರಲ್ ಮಾರ್ಕೆಟ್‌ಗೆ ಬರುತ್ತಿದ್ದಾರೆ. ಆದರೆ ಇಲ್ಲಿ ಬೀದಿ ಬದಿ ವ್ಯಾಪಾರಿಗಳ ಹಾವಳಿಯಿಂದಾಗಿ ವಾಹನ ಪಾರ್ಕಿಂಗ್‌ಗೆ ಸಮಸ್ಯೆ ಇದೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳ ಬೇಕಿದೆ.
– ಎಂ.ಜೆ. ಬಶೀರ್,ಹಣ್ಣಿನ ವ್ಯಾಪಾರಿ
ಬೆಲೆ ಹೆಚ್ಚಾಗಿಲ್ಲ; ಬೇಡಿಕೆ ಕುಸಿದಿಲ್ಲ
ಕೊರೊನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಸರಕಾರ ಅನೇಕ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಇದರಿಂದ ತರಕಾರಿ ವ್ಯಾಪಾರದ ಮೇಲೆ ಪರಿಣಾಮ ಬೀರಿಲ್ಲ. ತರಕಾರಿಗಳ ಬೇಡಿಕೆ ಈ ಹಿಂದಿ ನಂತೆಯೇ ಇದ್ದು ಬೆಲೆ ಏರಿಕೆ ಆಗಿಲ್ಲ. ಆದರೆ ಮಾಲ್‌ಗಳನ್ನು ಮುಚ್ಚಿರುವ ಕಾರಣ ಗ್ರಾಹಕರು ಸೆಂಟ್ರಲ್ ಮಾರುಕಟ್ಟೆಯನ್ನು ಅವ ಲಂಬಿಸಿದ್ದು ವ್ಯವಹಾರ ಜಾಸ್ತಿ ಇದೆ.
– ಡೇವಿಡ್ ಡಿ’ಸೋಜಾ, ವ್ಯಾಪಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.