ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸಂಚಾರ ದುಸ್ತರ


Team Udayavani, Jul 27, 2021, 3:20 AM IST

ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸಂಚಾರ ದುಸ್ತರ

ಮಹಾನಗರ: ರಾಬಜಪೆ, ಜು. 26: ಇಲ್ಲಿನ ಮುರನಗರ ಜಂಕ್ಷನ್‌ನಿಂದ ಹಳೆ ವಿಮಾನ ನಿಲ್ದಾಣದ ವರೆಗಿನ ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರಿಗೆ ಭಾರೀ ತೊಂದರೆಯಾಗಿ, ಸಂಚಾರ ದುಸ್ತರ ಎನಿಸಿದೆ.

ಈ ರಸ್ತೆಯಲ್ಲಿ ಹೊಂಡಗಳು ಬಿದ್ದು, ಸುಮಾರು ಒಂದು ವರ್ಷ ಕಳೆದಿದೆ. ಈ ಹೊಂಡಗಳಿಗೆ ಸ್ಥಳೀಯರು ಕಲ್ಲು, ಮಣ್ಣು ಹಾಕಿ ತೇಪೆ ಹಾಕುತ್ತಿದ್ದಾರೆ, ವಿನಃ ಪೂರ್ಣ ಪ್ರಮಾಣದ ಕಾಮಗಾರಿ ಇನ್ನೂ ಆಗಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಇಲ್ಲದಿರುವುದು ಮಳೆಯ ನೀರು ರಸ್ತೆಯಲ್ಲಿಯೇ ಹರಿದು ಹೊಂಡಗಳು ಸೃಷ್ಟಿಯಾಗುತ್ತಿವೆ.

ಈ ರಸ್ತೆಯ ನಿರ್ವಹಣೆ ಕಾಮಗಾರಿಗಳು ಈ ಹಿಂದೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ನಡೆಯುತ್ತಿದ್ದವು. ಈ ಪ್ರಾಧಿಕಾರ ಕೆಂಜಾರಿಗೆ ಸ್ಥಳಾಂತರಗೊಂಡ ಬಳಿಕ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಮೂರು ವರ್ಷಗಳ ಹಿಂದೆ ಬಜಪೆಯ ಕಿನ್ನಿಪದವಿನಿಂದ ಮುರನಗರ ಜಂಕ್ಷನ್‌ವರೆಗೆ ಡಾಮರು ಕಾಮಗಾರಿ ನಡೆದಿತ್ತು. ಬಳಿಕ ವಿಮಾನ ನಿಲ್ದಾಣ ರಸ್ತೆಯ ಒಂದೆಡೆಯಿಂದ ಸ್ವಲ್ವ ಪ್ರಮಾಣದಲ್ಲಿ ಡಾಮರು ಕಾಮಗಾರಿ ನಡೆದಿತ್ತು.

ಶಾಸಕರ ಸಮನ್ವಯ ಕಾರ್ಯ ಅಗತ್ಯ:

ಹಳೆ ವಿಮಾನ ನಿಲ್ದಾಣ ರಸ್ತೆಯು ಮೂಲ್ಕಿ- ಮೂಡುಬಿದಿರೆ ಮತ್ತು ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರದ ಗಡಿ ಗ್ರಾಮಗಳ ರಸ್ತೆಯಾಗಿದೆ. ಮುರ ಜಂಕ್ಷನ್‌ನಿಂದ ಹಳೆ ವಿಮಾನ ನಿಲ್ದಾಣದವರೆಗೆ ರಸ್ತೆಯ ಬಲ ಬದಿ (ಪಶ್ಚಿಮಕ್ಕೆ)ಮಳವೂರು ಗ್ರಾಮವು (ಬಜಪೆ ಪಟ್ಟಣ ಪಂ. ವ್ಯಾಪ್ತಿ) ಮೂಲ್ಕಿ -ಮೂಡುಬಿದಿರೆ ಕ್ಷೇತ್ರಕ್ಕೆ, ರಸ್ತೆಯ ಎಡಬದಿ (ಪೂರ್ವಕ್ಕೆ) ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರದ ಕಂದಾವರ ಗ್ರಾ.ಪಂ.ವ್ಯಾಪ್ತಿಯ ಕೊಳಂಬೆ ಗ್ರಾಮಕ್ಕೆ ಸೇರುತ್ತದೆ. ಅದೇ ರೀತಿ ಬಜಪೆ ಪೊಲೀಸ್‌ ಠಾಣೆಯಿಂದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಲಬದಿ ಬಜಪೆ ಪಟ್ಟಣ ಪಂಚಾಯತ್‌, ಎಡಬದಿ ಕೊಳಂಬೆ ಗ್ರಾಮಕ್ಕೆ ಸೇರುತ್ತದೆ. ಒಟ್ಟಿನಲ್ಲಿ ಈ ಗಡಿಭಾಗದ ರಸ್ತೆಯನ್ನು ಎರಡು ಕ್ಷೇತ್ರಗಳ ಶಾಸಕರು ಸಮನ್ವಯದಿಂದ ಅಭಿವೃದ್ಧಿಗೊಳಿಸಬೇಕಾಗಿದೆ. ಈ ರಸ್ತೆ ಕೊಳಂಬೆ, ಅದ್ಯಪಾಡಿಗೆ ಹೋಗುವ ಜನರಿಗೆ ಹೆಚ್ಚು ಉಪಯೋಗವಾಗಿದೆ. ಈ ರಸ್ತೆಯಲ್ಲಿ ನಾಲ್ಕು ಬಸ್‌ಗಳು ಅಲ್ಲದೆ ದ್ವಿಚಕ್ರ ವಾಹನಗಳು, ರಿಕ್ಷಾಗಳು, ಟಿಪ್ಪರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿವೆ.

ಎಲ್ಲೆಂದರಲ್ಲಿ ಕಸ :

ಹಲವು ಸಂಘ-ಸಂಸ್ಥೆಗಳಿಂದ ವರ್ಷವಿಡೀ ಸ್ವಚ್ಛತೆ ಅಭಿಯಾನ ಕೈಗೊಂಡರು ಕೂಡ ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ಕಸ ಬಿಸಾಡುವ ಪ್ರವೃತ್ತಿ ಮುಂದುವರಿದಿದೆ.

ರಸ್ತೆಯ ಇಕ್ಕೆಲಗಳಲ್ಲಿ ಕಸ, ಮದ್ಯದ ಬಾಟಲ್‌ಗ‌ಳು ಕಾಣಸಿಗುತ್ತವೆ.   ಬಜಪೆ ಪೊಲೀಸ್‌ ಠಾಣೆ-ಮುರನಗರ ಜಂಕ್ಷನ್‌ ಹಳೆ ವಿಮಾನ ನಿಲ್ದಾಣ ಕಾಂಕ್ರೀಟ್‌ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಕಾಂಕ್ರೀಟ್‌ ಕಾಮಗಾರಿ ನಡೆಸಿದ ರಸ್ತೆಯಲ್ಲಿ ಏಕ ಕಾಲಕ್ಕೆ ಎರಡೂ ಕಡೆಗಳಿಂದ ವಾಹನ ಸಂಚಾರ ಮಾಡಲು ಕಷ್ಟಕರವಾಗಿದೆ. ಎದುರಿನಿಂದ ಬಂದ ವಾಹನಕ್ಕೆ ದಾರಿ ನೀಡಬೇಕಾದ ಸಂದರ್ಭ ರಸ್ತೆ ಬದಿಯಲ್ಲಿ ಒಂದೆಡೆ ನಿಲ್ಲಿಸಬೇಕಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಮಳೆಯ ನೀರು ನಿಂತು ದ್ವಿಚಕ್ರ ವಾಹನಗಳ ಸಂಚಾರಕ್ಕೆ ಭಾರೀ ತೊಂದರೆಯಾಗುತ್ತಿದೆ.  ಸಂತ ಜಾನ್‌ ಪ್ಲಾವ್‌ ದ್ವಿತೀಯ ಅವರ ಪುಣ್ಯ ಕ್ಷೇತ್ರ, ಫಾದರ್‌ ಮುಲ್ಲರ್‌ ಆಸ್ಪತ್ರೆ ಈ ರಸ್ತೆಯಲ್ಲಿ ಬದಿಯಲ್ಲಿರುವುದರಿಂದ ಈ ಮಾರ್ಗದಲ್ಲಿ ಹೆಚ್ಚಿನ ವಾಹನ ಸಂಚರಿಸುತ್ತಿವೆ. ರಸ್ತೆ ವಿಸ್ತರಣೆ, ಮಳೆ ನೀರು ಹರಿದುಹೋಗಲು ಚರಂಡಿ ವ್ಯವಸ್ಥೆ ಆಗಬೇಕಾಗಿದೆ.

ಬಜಪೆ-ಕೊಳಂಬೆ ಮುರನಗರ ಜಂಕ್ಷನ್‌ನಿಂದ ಹಳೆ ವಿಮಾನ ನಿಲ್ದಾಣದವರೆಗೆ ರಸ್ತೆಯಲ್ಲಿ ಹೊಂಡಗಳು ಬಿದ್ದ ಬಗ್ಗೆ ಜನರಿಂದ ಮನವಿಗಳು ಬಂದಿದ್ದವು. ಈ ರಸ್ತೆಯ ನಿರ್ವಹಣೆ ವಿಮಾನ ನಿಲ್ದಾಣ ಪ್ರಾಧಿಕಾರ ಮಾಡುತ್ತಿತ್ತು. ಈ ರಸ್ತೆ ದುರಸ್ಥಿಯ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಅವರಲ್ಲಿ ಮಾತನಾಡಿ ದ್ದೇನೆ. ಭಾರೀ ಮಳೆಯಾಗುತ್ತಿರುವ ಕಾರಣ ತೇಪೆ ಕಾರ್ಯಕ್ಕೆ ಅಡಚಣೆಯಾಗಿದೆ. ಮುರನಗರದಲ್ಲಿ ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಈ ರಸ್ತೆಗೆ ತೇಪೆ ಹಾಕುವ ಕಾರ್ಯ ಶೀಘ್ರ ಮಾಡಲಾಗುವುದು. .ಡಾ| ಭರತ್ ಶೆಟ್ಟಿ , ಶಾಸಕ

 

-ಸುಬ್ರಾಯ ನಾಯಕ್ ಎಕ್ಕಾರು

ಟಾಪ್ ನ್ಯೂಸ್

DK SHI NEW

Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್‌

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

DK SHI NEW

Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್‌

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Police

Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು

1-yadu

Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.