ನೆರೆ ನೀರಿನಲ್ಲಿ ಹರಿದು ಬಂದ ಕಪ್ಪೆ, ಹಾವುಗಳು


Team Udayavani, Aug 22, 2018, 11:44 AM IST

22-agust-4.jpg

ಮಹಾನಗರ: ‘ಬುಧವಾರ ನಾವು ನೆಲ ಮಹಡಿಯಲ್ಲಿ ಮಲಗಿದ್ದೆವು. ರಾತ್ರಿ 9.30ಕ್ಕೆ ನಿದ್ರೆಗೆ ಜಾರಿದ್ದೆವು. ಮಧ್ಯರಾತ್ರಿ 1 ಗಂಟೆ ವೇಳೆಗೆ ತಂಪು ವಾತಾವರಣದ ಅನುಭವವಾಯಿತು. ನಿದ್ದೆ ಕಣ್ಣಲ್ಲಿ ಎದ್ದು ವಾಶ್‌ ರೂಮ್‌ಗೆ ಹೋದೆವು. ಅಲ್ಲಿ ಪಾದ ಊರಿದಲ್ಲೆಲ್ಲ ನೀರು ತುಂಬಿತ್ತು. ಕೂಡಲೇ ಎದ್ದು ಹೊರಗೆ ಓಡಿದೆವು. ಐದೇ ನಿಮಿಷದಲ್ಲಿ ಮೊಣಕಾಲು ತನಕ ನೀರು ತುಂಬಿತು. ಕಪ್ಪೆ, ಹಾವುಗಳು ನೀರಿನಲ್ಲಿ ಬರುತ್ತಿರುವುದು ಕಂಡು ನೆರೆ ಬಂದಿರುವುದು ಖಚಿತವಾಯಿತು’. ಇದು ಕೇರಳದ ತೃಶ್ಶೂರಿನ ಚಾಲಕುಡಿಯ ಮುರಿಂಗೂರು ಡಿವೈನ್‌ ರಿಟ್ರೀಟ್‌ ಸೆಂಟರ್‌ನಲ್ಲಿ ಕಳೆದ ವಾರ ನೆರೆ ನೀರಿಗೆ ಸಿಲುಕಿದ್ದ ಮಂಗಳೂರಿನ ಯೆಯ್ನಾಡಿಯ ವೀವಿಯನ್‌ ಸಿಕ್ವೇರಾ ಅವರು ಘಟನೆ ಬಗ್ಗೆ ವಿವರಿಸಿದ್ದು ಹೀಗೆ.

ವೀವಿಯನ್‌ ಸಿಕ್ವೇರಾ ಅವರು ಈ ಡಿವೈನ್‌ ಸೆಂಟರ್‌ನಲ್ಲಿ ಬೋಧಕರಾಗಿ, ಕೌನ್ಸೆಲರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾನ್ಯವಾಗಿ ಮಂಗಳವಾರ ಸಂಜೆ ಮಂಗಳೂರಿನಿಂದ ಚಾಲಕುಡಿ ತೆರಳುವ ಅವರು ಶನಿವಾರ ವಾಪಸಾಗುತ್ತಾರೆ. ಆ. 14ರಂದು ಸಂಜೆ ಮಂಗಳೂರಿನಿಂದ ರೈಲಿನಲ್ಲಿ ಹೊರಟು ತಡರಾತ್ರಿ 2.30ಕ್ಕೆ ಚಾಲಕುಡಿ, ಅಲ್ಲಿಂದ 2.45ಕ್ಕೆ ಡಿವೈನ್‌ ಸೆಂಟರ್‌ ತಲುಪಿದ್ದರು. ಬುಧವಾರ ಬೆಳಗ್ಗೆ, ಸಂಜೆ ಬೋಧಕರಾಗಿ ಅಲ್ಲಿ ಕಾರ್ಯನಿರ್ವಹಿಸಿದ್ದು, ರಾತ್ರಿ 9.30ಕ್ಕೆ ಮಲಗಿದ್ದರು. ಡಿವೈನ್‌ ಸೆಂಟರ್‌ನಲ್ಲಿ ಕನ್ನಡ, ಕೊಂಕಣಿ, ಇಂಗ್ಲಿಷ್‌ ಭಾಷಿಗರು ಸಹಿತ ಒಟ್ಟು 1,500 ಮಂದಿ, ಮಲಯಾಳಿಗರು ಸುಮಾರು 2,000 ಮಂದಿಯಿದ್ದರು.

10 ಅಡಿಗಳಷ್ಟು ನೀರು ತುಂಬಿತ್ತು
‘ನೆಲ ಮಹಡಿಗೆ ನೀರು ಬಂದ ಕಾರಣ ನಾವು ಒಂದನೇ ಮಾಳಿಗೆಗೆ ಹೋದೆವು. ಒಂದು ಗಂಟೆ ಅವಧಿಯಲ್ಲಿ ನೆಲ ಮಹಡಿಯ ಅರ್ಧ ತನಕ ನೀರು ತುಂಬಿತ್ತು. ನಾವಿದ್ದ ಕಟ್ಟಡವು 6 ಮಹಡಿಗಳಿಂದ ಕೂಡಿದ್ದರಿಂದ ವಾಸ್ತವ್ಯಕ್ಕೆ ಸಮಸ್ಯೆ ಆಗಿಲ್ಲ. ಪ್ರಾರ್ಥನೆಯಲ್ಲಿಯೇ ಬೆಳಗ್ಗಿನ ತನಕ ಕಾಲ ಕಳೆದೆವು. ಗುರುವಾರ ಬೆಳಗ್ಗೆ 9 ಗಂಟೆ ವೇಳೆಗೆ 10 ಅಡಿಗಳಷ್ಟು ನೀರು ತುಂಬಿದ್ದು, ಒಂದನೇ ಮಹಡಿ ತನಕ ನೀರಿತ್ತು. ಅಲ್ಲಿ ನಿಲ್ಲಿಸಿದ್ದ ವಾಹನಗಳೆಲ್ಲವೂ ಮುಳುಗಿದ್ದವು’.

ಆಹಾರ ವಸ್ತುಗಳೆಲ್ಲವೂ ನೀರು ಪಾಲಾಗಿದ್ದವು. ಗುರುವಾರ ಮಧ್ಯಾಹ್ನ ಆಹಾರದ ಕೊರತೆ ಎದುರಾಯಿತು. ಅಂದು ನಮಗೆ ಒಂದು ಮುಷ್ಟಿ ಅನ್ನ, ಸಾರು ಬಡಿಸಲಾಗಿತ್ತು. ಅಂದು ರಾತ್ರಿ ತಿನ್ನಲು ಏನೂ ಇರಲಿಲ್ಲ. ಶುಕ್ರವಾರ ಬೆಳಗ್ಗೆ ಚಿಪ್ಸ್‌ ಮತ್ತು ಬ್ಲ್ಯಾಕ್  ಕಾಫಿ, ಸಂಜೆ ಹೆಲಿ ಕಾಪ್ಟರ್‌ನಲ್ಲಿ ಬ್ರೆಡ್‌ ಬಂದಿತ್ತು. ಎಲ್ಲರಿಗೂ ಎರಡು ಪೀಸ್‌ ಬ್ರೆಡ್‌, ಕಾಫಿ ವಿತರಿಸಲಾಗಿತು.

ನೆರೆಯಲ್ಲೂ ಕುಡಿಯುವ ನೀರಿಗೂ ತತ್ವಾರ! 
ವಿದ್ಯುತ್‌ ಸಂಪರ್ಕ ಇಲ್ಲದ ಕಾರಣ ನಳ್ಳಿ ನೀರು ಪೂರೈಕೆ ಇರಲಿಲ್ಲ. 6ನೇ ಮಾಳಿಗೆಯಲ್ಲಿದ್ದ ಟ್ಯಾಂಕ್‌ನಿಂದ ಹಗ್ಗದ ಮೂಲಕ ಬಕೆಟ್‌ನಲ್ಲಿ ನೀರನ್ನು ಎತ್ತಿ ಕುಡಿಯುವ ನೀರನ್ನು ನೀಡಲಾಗಿತ್ತು. ಒಬ್ಬೊಬ್ಬರಿಗೆ ಅರ್ಧ ಲೀ. ನೀರು ಮಾತ್ರ ಲಭಿಸಿತ್ತು. ಶನಿವಾರ ಬೆಳಗ್ಗೆ ನೆರೆ ನೀರು ಇಳಿದಿತ್ತು. ನಾನು ಮತ್ತು ನನ್ನ ಜತೆಗಿದ್ದ ಕರ್ನಾಟಕದ ಸುಮಾರು 50 ಮಂದಿ ಧ್ಯಾನ ಕೇಂದ್ರದ ಗೇಟ್‌ ಬಳಿ ಹೋದಾಗ ಅಲ್ಲಿ ಮಿಲಿಟರಿಯ ಲಾರಿ ಲಭಿಸಿದ್ದು, ಅದರಲ್ಲಿ ತೃಶ್ಶೂರಿಗೆ ಪಯಣಿಸಿದೆವು. ಅಲ್ಲಿಂದ ಕೇರಳದ ಸರಕಾರಿ ಬಸ್‌ನಲ್ಲಿ ಪಾಲಕ್ಕಾಡ್‌ ಗೆ ತೆರಳಿದೆವು. ಅಲ್ಲಿ ನಮಗೆ ಈ ಮೊದಲೇ ಮಾಜಿ ಶಾಸಕ ಜೆ.ಆರ್‌. ಲೋಬೋ, ಸಚಿವ ಯು.ಟಿ. ಖಾದರ್‌ ಅವರ ಪ್ರಯತ್ನದ ಫಲವಾಗಿ ವ್ಯವಸ್ಥೆ ಮಾಡಲಾಗಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ ಲಭಿಸಿದ್ದು, ಅದರಲ್ಲಿ ಬೆಂಗಳೂರಿಗೆ ಪ್ರಯಾಣಿಸಿ ರವಿವಾರ ರಾತ್ರಿ ಮಂಗಳೂರಿಗೆ ತಲುಪಿದೆವು ಎಂದು ವೀವಿಯನ್‌ ಸಿಕ್ವೇರಾ ವಿವರಿಸಿದರು. 

ಭಯದ ನಡುವೆ 3 ಹಗಲು, 3 ರಾತ್ರಿ
ನೆರೆಯಿಂದಾಗಿ ಡಿವೈನ್‌ ಸೆಂಟರ್‌ನ ವಾಹನಗಳಿಗೆ, ಮುದ್ರಣಾಲಯ, ಜನರೇಟರ್‌ಗೆ ಹಾನಿಯಾಗಿದೆ. 150 ದನ, 200 ಹಂದಿ, ಕೋಳಿ ಮತ್ತು ಬಾತುಕೋಳಿಗಳು ನೀರು ಪಾಲಾದ ಮಾಹಿತಿ ಇದೆ. ಭಯದ ನಡುವೆಯೂ 3 ಹಗಲು, 3 ರಾತ್ರಿ ಕಳೆದೆವು. ದೇವರ ಅನುಗ್ರಹದಿಂದಾಗಿ ಅಲ್ಲಿದ ಯಾರೊಬ್ಬರಿಗೂ ಅಪಾಯ ಸಂಭವಿಸಿಲ್ಲ ಎಂದು ಸಿಕ್ವೇರಾ ತಿಳಿಸಿದರು. ಆ. 21ರಂದು ವೀವಿಯನ್‌ ಸಿಕ್ವೇರಾ ಮತ್ತು ಸಂಗಡಿಗರು ಮಂಗಳೂರಿನಲ್ಲಿ ಮಾಜಿ ಶಾಸಕ ಜೆ.ಆರ್‌. ಲೋಬೋ ಅವರನ್ನು ಭೇಟಿ ಮಾಡಿ ನೆರವು ಒದಗಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಟಾಪ್ ನ್ಯೂಸ್

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

doctor

ಕೊಪ್ಪಳದಲ್ಲಿ ಕ್ಯಾನ್ಸರ್‌ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್‌ ಪತ್ತೆ!

ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ

ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.