ಮಂಗಳೂರಿನ ವೆನ್ಸಿಟಾ ಪ್ರಥಮ ರನ್ನರ್ ಅಪ್
"ಮಿಸ್ ಟೀನ್ ವರ್ಲ್ಡ್ ಸೂಪರ್ ಮೋಡೆಲ್ - ಗ್ಲೋಬಲ್'
Team Udayavani, Nov 18, 2019, 5:33 AM IST
ಮಂಗಳೂರು: ಥಾಯ್ಲಂಡ್‌ನ ಬ್ಯಾಂಕಾಕ್‌ನಲ್ಲಿ ನ. 16ರಂದು ನಡೆದ “ಮಿಸ್ ಟೀನ್ ವರ್ಲ್ಡ್ ಸೂಪರ್ ಮೋಡೆಲ್ -ಗ್ಲೋಬಲ್’ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಬೆಡಗಿ ವೆನ್ಸಿಟಾ ಡಯಾಸ್ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದಾರೆ.
ಬೆಂದೂರಿನ ಸೈಂಟ್ ಆ್ಯಗ್ನೆಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ (ವಿಜ್ಞಾನ ವಿಭಾಗ) ವಿದ್ಯಾರ್ಥಿನಿ ಆಗಿರುವ ವೆನ್ಸಿಟಾ ಅವರು ಅಕ್ಟೋಬರ್‌ನಲ್ಲಿ ಮಂಗಳೂರಿನಲ್ಲಿ ಫ್ಯಾಶನ್ ಎಬಿಸಿಡಿ ಏರ್ಪಡಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ಕರ್ನಾಟಕ- 2019 ಪ್ರಶಸ್ತಿಯನ್ನು ಮುಡಿಗೇರಿಸಿ ಬ್ಯಾಂಕಾಕ್‌ನಲ್ಲಿ ನಡೆವ ಅಂತಾರಾಷ್ಟ್ರೀಯ ಮಟ್ಟದ ಮಿಸ್ ಟೀನ್ ವರ್ಲ್ಡ್ ಸೂಪರ್ ಮೋಡೆಲ್ ಸ್ಪರ್ಧೆಗೆ ಅರ್ಹತೆ ಗಳಿಸಿದ್ದರು. ಅದಕ್ಕೂ ಮುನ್ನ ಅವರು ಮಿಸ್ ಮಂಗಳೂರು ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ್ದರು.
ಇಂಡೊ ಥಾಯ್ ಇಂಟರ್‌ನ್ಯಾಶನಲ್ ಫ್ರೆಂಡ್‌ಶಿಪ್ ಆ್ಯಂಡ್ ಕಲ್ಚರಲ್ ಎಕ್ಸ್‌ಚೇಂಜ್ ವತಿಯಿಂದ ಬ್ಯಾಂಕಾಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಏಶಿಯಾದ ವಿವಿಧ ದೇಶಗಳ 16 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಥಾಯ್ಲೆಂಡ್, ಆಫ್ರಿಕಾ, ಭಾರತ, ಅಮೆರಿಕ ದೇಶದವರಿದ್ದರು.
ಪ್ರಶ್ನೋತ್ತರ, ಪರಿಚಯ, ವ್ಯಕ್ತಿಗತ ಸಂದರ್ಶನದ ಬಳಿಕ ನಾಲ್ಕು ಸುತ್ತುಗಳ ಅಂದರೆ ರಾಷ್ಟ್ರೀಯ ಕಾಸ್ಟೂ Âಮ್, ಕಾನ್ಸೆಪ್ಟ್ ಕ್ಲೋತಿಂಗ್, ಬಿಕಿನಿ, ಸೆಲೆಬ್ರೇಶನ್, ಈವ್ನಿಂಗ್ ವೇರ್ ಸುತ್ತುಗಳಲ್ಲಿ ಸ್ಪರ್ಧೆ ನಡೆಯಿತು. ನ. 13ರಿಂದಲೇ ಗ್ರೂಮಿಂಗ್ ಆರಂಭವಾಗಿತ್ತು.
ಮಂಗಳೂರಿನ ನಾಗುರಿಯ ವಾಲ್ಟರ್ ಮತ್ತು ಜ್ಯೋತಿ ಡಯಾಸ್ ದಂಪತಿಯ ಪುತ್ರಿಯಾಗಿರುವ ವೆನ್ಸಿಟಾ ಅವರು ಪ್ರಸ್ತುತ ಎಬಿಸಿಡಿ ಸಂಸ್ಥೆಯಿಂದ ಮೋಡೆಲಿಂಗ್ ತರಬೇತಿ ಪಡೆಯುತ್ತಿದ್ದಾರೆ.
ವೆನ್ಸಿಟಾ ಬಾಲ್ಯದಿಂದಲೇ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದರು. 3ನೇ ತರಗತಿಯಲ್ಲಿದ್ದಾಗ ಆಂಜೆಲೋರ್ ಚರ್ಚ್ ಏರ್ಪಡಿಸಿದ್ದ “ಬಾಳ್ ಆಂಜ್’ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಆಂಜೆಲೋರ್ ಚರ್ಚ್‌ನ ವೈಸಿಎಸ್ ಸದಸ್ಯೆಯಾಗಿದ್ದು, ಹಾಡುಗಾರಿಕೆ, ನೃತ್ಯ, ಕಾರ್ಯಕ್ರಮ ನಿರ್ವಹಣೆ ಇತ್ಯಾದಿ ಬಹುಮುಖ ಪ್ರತಿಭಾನ್ವಿತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.