Mangaluru: ಹಿರಿಯ ಚಿತ್ರ ನಿರ್ಮಾಪಕ, ಲೇಖಕ, ರಂಗಕರ್ಮಿ ಸದಾನಂದ ಸುವರ್ಣ ನಿಧನ


Team Udayavani, Jul 16, 2024, 1:51 PM IST

Mangaluru: ಹಿರಿಯ ಚಿತ್ರ ನಿರ್ಮಾಪಕ, ರಂಗಕರ್ಮಿ ಸದಾನಂದ ಸುವರ್ಣ ನಿಧನ

ಮಂಗಳೂರು: ಹಿರಿಯ ಚಿತ್ರ ನಿರ್ಮಾಪಕ, ಲೇಖಕ, ರಂಗಕರ್ಮಿ ಸದಾನಂದ ಸುವರ್ಣ ಅವರು ಇಂದು(ಮಂಗಳವಾರ) ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಮೂಲ್ಕಿ ಮೂಲದ ಅವರು ಹಲವು ವರ್ಷಗಳ ಕಾಲ ಮುಂಬಯಿನಲ್ಲಿ ವಾಸವಾಗಿದ್ದರು. ಕನ್ನಡ ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸುವರ್ಣರು ಧರ್ಮಚಕ್ರ, ಸುಳಿ, ಡೊಂಕುಬಾಲದ ನಾಯಕರು, ಕೋರ್ಟ್‌ ಮಾರ್ಷಲ್‌, ಉರುಳು ಮತ್ತಿತರ ಜನಪ್ರಿಯ ನಾಟಕ ರಚನೆಮಾಡಿದ ಹೆಗ್ಗಳಿಕೆ ಇವರದ್ದು.

ಅಲ್ಲದೆ ಅವರ ಗುಡ್ಡೆದ ಭೂತ ಧಾರವಾಹಿ ದೂರದರ್ಶನದಲ್ಲಿ ಬಹಳ ಜನಮೆಚ್ಚುಗೆ ಗಳಿಸಿತ್ತು, ಅವರ ಘಟಶ್ರಾದ್ಧ ಸಿನಿಮಾಕ್ಕೆ ಸ್ವರ್ಣಕಮಲ ಪ್ರಶಸ್ತಿ ಸಿಕ್ಕಿರುತ್ತದೆ. ಮಂಗಳೂರಿನ ಹವ್ಯಾಸಿ ರಂಗಭೂಮಿಗೆ ಹೊಸ ಸ್ಪರ್ಶ ನೀಡಿದವರು ಸದಾನಂದ ಸುವರ್ಣರು.

ಇದನ್ನೂ ಓದಿ: Raichur: ವಾಲ್ಮೀಕಿ ಹಗರಣ… ಮಾಜಿ ಸಚಿವ ನಾಗೇಂದ್ರನ ಆಪ್ತನ ಅಕೌಂಟ್ ನಿಂದಲೇ ಹಣ ವರ್ಗಾವಣೆ

ಗುಡ್ಡೆದ ಭೂತದಂತಹ ಧಾರಾವಾಹಿ,ಶಿವರಾಮ ಕಾರಂತರ ಕುರಿತು ಆಪ್ತ ನೋಟವನ್ನು ನೀಡುವ ಸಾಕ್ಷ್ಯಚಿತ್ರ, ಧಾರಾವಾಹಿಗಳನ್ನು ಕೊಟ್ಟ ರಂಗಭೂಮಿಯ ಹಿರಿಯಜ್ಜ   ಸದಾನಂದ ಸುವರ್ಣ.

ಸ್ವತಃ ನಟ ನಾಟಕಕಾರನಾಗಿ, ಪ್ರಯೋಗಶೀಲ ನಿರ್ದೇಶಕನಾಗಿ ಮುಂಬಯಿ ರಂಗಭೂಮಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದ ಸುವರ್ಣರು ತಮ್ಮ ಇಳಿವಯಸ್ಸಿನಲ್ಲಿ ಮಂಗಳೂರಿನ ರಂಗಭೂಮಿಗೆ ಲಗ್ಗೆಯಿಟ್ಟು ಅಲ್ಲಿಯೂ ತನ್ನ ಸೃಜನಶೀಲ ಪ್ರತಿಭೆಯ ಸುವರ್ಣ ಛಾಪನ್ನು ಒತ್ತಿದವರು..!!ಮಂಗಳೂರಿನ ಹವ್ಯಾಸಿ ನಟ ನಟಿಯರಿಗೆ ಉರುಳು,ಕೋರ್ಟ್ ಮಾರ್ಷಲ್, ಮಳೆ ನಿಲ್ಲುವ ವರೆಗೆ, ಮುಂತಾದ ನಾಟಕಗಳನ್ನು ನಿರ್ದೇಶಿಸಿ ಸದಭಿರುಚಿಯ ರಂಗ ಕಾಯಕ ಹೇಗಿರಬೇಕು ಎಂದು ನಿರೂಪಿಸಿದವರು.

ತಾನೂ ಬೆಳೆಯುತ್ತ ನೂರಾರು ಹಿರಿಯ ಕಿರಿಯ ಕಲಾವಿದರನ್ನೂ ಬೆಳೆಸಿದ ಅನನ್ಯ ರಂಗ ತಪಸ್ವಿ ನಮ್ಮ ಸದಾನಂದ ಸುವರ್ಣ.
ಮುಂಬಯಿ ಮತ್ತು ಮಂಗಳೂರಿನ ಹವ್ಯಾಸಿರಂಗಭೂಮಿಗೆ ಸುವರ್ಣರ ಕೊಡುಗೆ ಅನನ್ಯವಾದುದು.

ಟಾಪ್ ನ್ಯೂಸ್

1-census

Report; ಸೆಪ್ಟಂಬರ್‌ನಲ್ಲಿ ನಡೆವ ಜನಗಣತಿ ಜತೆಗೇ ಜಾತಿಗಣತಿ?

Mysuru

Mysuru Dasara: ಅರಮನೆ ತಲುಪಿದ ಗಜಪಡೆ : ಭವ್ಯ ಸ್ವಾಗತ

CM-Siddu

Misappropriation Fund: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

Malpe ಮುಂದುವರಿದ ಗಾಳಿ; ಕಡಲಿಗೆ ಇಳಿಯದ ಬೋಟುಗಳು

Malpe ಮುಂದುವರಿದ ಗಾಳಿ; ಕಡಲಿಗೆ ಇಳಿಯದ ಬೋಟುಗಳು

Joshi-vijyebdra

Secret meeting: ಕೇಂದ್ರ ಸಚಿವ ಪ್ರಹ್ಲಾದ ಜೋಶಿ- ವಿಜಯೇಂದ್ರ ಗೌಪ್ಯ ಸಭೆ

Udupi ಗೀತಾರ್ಥ ಚಿಂತನೆ-15; ಭಗವದಿಚ್ಛೆಯೇ ಧರ್ಮಮೂಲ

Udupi ಗೀತಾರ್ಥ ಚಿಂತನೆ-15; ಭಗವದಿಚ್ಛೆಯೇ ಧರ್ಮಮೂಲ

Udupi ಶ್ರೀ ಕೃಷ್ಣಮಠದಲ್ಲಿ ವೈಭವದ ಲಡ್ಡುತ್ಸವ

Udupi ಶ್ರೀ ಕೃಷ್ಣಮಠದಲ್ಲಿ ವೈಭವದ ಲಡ್ಡುತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tulu Cinema; ಕರಾವಳಿಯಾದ್ಯಂತ “ಅನರ್‌ಕಲಿ’ ತುಳು ಸಿನೆಮಾ ತೆರೆಗೆ

Tulu Cinema; ಕರಾವಳಿಯಾದ್ಯಂತ “ಅನರ್‌ಕಲಿ’ ತುಳು ಸಿನೆಮಾ ತೆರೆಗೆ

Mangaluru ನಿರ್ಮಲ ಭಾರತ ಟ್ರಸ್ಟ್‌ಗೆ ಭೂ ಮಂಜೂರಾತಿಗೆ ಹೈಕೋರ್ಟ್‌ ತಡೆ

Mangaluru ನಿರ್ಮಲ ಭಾರತ ಟ್ರಸ್ಟ್‌ಗೆ ಭೂ ಮಂಜೂರಾತಿಗೆ ಹೈಕೋರ್ಟ್‌ ತಡೆ

Mangaluru ಪಾದಯಾತ್ರೆ ವಿರುದ್ಧ ಬಿಜೆಪಿ “ಪ್ರತಿರೋಧ’ ಸಭೆ

Mangaluru ಪಾದಯಾತ್ರೆ ವಿರುದ್ಧ ಬಿಜೆಪಿ “ಪ್ರತಿರೋಧ’ ಸಭೆ

KCCI ಮಂಗಳೂರಿನಲ್ಲಿ ನಮ್ಮದೇ ಉದ್ಯಮ ಬೆಳೆಸೋಣ: ಸಂಸದ ಕ್ಯಾ|ಬ್ರಿಜೇಶ್‌ ಚೌಟ

KCCI ಮಂಗಳೂರಿನಲ್ಲಿ ನಮ್ಮದೇ ಉದ್ಯಮ ಬೆಳೆಸೋಣ: ಸಂಸದ ಕ್ಯಾ|ಬ್ರಿಜೇಶ್‌ ಚೌಟ

Mangaluru ಕೊರಗ ಸಮುದಾಯದ ಪ್ರಗತಿಗೆ ಆದ್ಯತೆ ನೀಡಲು ಸೂಚನೆ

Mangaluru ಕೊರಗ ಸಮುದಾಯದ ಪ್ರಗತಿಗೆ ಆದ್ಯತೆ ನೀಡಲು ಸೂಚನೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

22

Kundapura: ಜೋಳ ನೀಡುವುದಾಗಿ 11.5 ಲಕ್ಷ ರೂ. ವಂಚನೆ: ದೂರು ದಾಖಲು

1-census

Report; ಸೆಪ್ಟಂಬರ್‌ನಲ್ಲಿ ನಡೆವ ಜನಗಣತಿ ಜತೆಗೇ ಜಾತಿಗಣತಿ?

BJP 2

Kashmir Elections:ಬಿಜೆಪಿ ಏಕಾಂಗಿ ಸ್ಪರ್ಧೆ, ಶೀಘ್ರ ಅಭ್ಯರ್ಥಿಗಳ ಪಟ್ಟಿ

air india

Training ಇಲ್ಲದ ಪೈಲಟ್‌ ಬಳಕೆ: ಏರ್‌ ಇಂಡಿಯಾಕ್ಕೆ 90 ಲಕ್ಷ ರೂ. ದಂಡ!

1-gb

Norway ಕಾಯ್ದೆ ಸಡಿಲ: 18ನೇ ವಾರಕ್ಕೂ ಗರ್ಭಪಾತಕ್ಕೆ ಸಮ್ಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.