ಶತಾಯುಷಿ ,ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮದನ್ ಮಾಸ್ಟರ್ ಇನ್ನಿಲ್ಲ
Team Udayavani, Mar 28, 2017, 11:09 AM IST
ಕಾಸರಗೋಡು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಪಿ.ಮದನ್ ಮಾಸ್ಟರ್ ಅವರು ಮಂಗಳವಾರ ಪೆರ್ಲದ ಸೆರಾಜೆಯ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಇತ್ತೀಚಿಗಿನ ವರೆಗೆ ಲವಲವಿಕೆಯಿಂದ ಇದ್ದ ಅವರು ವಾರ್ಧಕ್ಯದಿಂದ ನಿಧನ ಹೊಂದಿದ್ದಾರೆ. ಜನವರಿ 2 ರಂದು 100 ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು.
ಕ್ವೀಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಹೋರಾಟದಲ್ಲಿ ಧುಮುಕಿ ಸ್ವಾತಂತ್ರ್ಯ ಹೋರಾಟ ನಡೆಸಿದ್ದರು. ಮಹಾತ್ಮಾ ಗಾಂಧೀಜಿ ಜೊತೆಯೂ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.
ಶಿಕ್ಷಕರಾಗಿ, ಹಾಗೂ ಸೇನೆಯಲ್ಲಿ ಕಾರ್ಯನಿವರ್ಹಿಸಿದ್ದ ಮದನ ಮಾಸ್ಟರ್ ಅವರು ರಾಜಿ ಪಂಚಾಯಿತಿಯ ಮದ್ಯಸ್ಥಿಕೆದಾರರಾಗಿ ಗಡಿನಾಡಿನಲ್ಲಿ ಜನಪ್ರಿಯತೆ ಪಡೆದವರು.
ಪ್ರಗತಿಪರ ಕೃಷಿಕರಾಗಿದ್ದ ಮದನ ಮಾಸ್ಟರ್ ಅವರು ಸ್ಥಳೀಯವಾಗಿ ಜೇಣು ಸಾಕಾಣಿಕೆಯನ್ನು ಜನಪ್ರಿಯಗೊಳಿಸಿದವರು ಗಡಿನಾಡಿನಲ್ಲಿ ಕನ್ನಡಪರ ಸಂಘಟನೆ, ಸಹಕಾರಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರು.
ಸುಧಾರಣೆ ಕಾನೂನು ಅನುಷ್ಠಾನಕ್ಕೆ ಸ್ವಯಂ ಪ್ರೇರಿತರಾಗಿ ದುಡಿದಿದ್ದ ಮದನ ಮಾಸ್ತರ್ ಅವರು ಗಡಿನಾಡಿನಲ್ಲಿ ನೂರಾರು ಹಿಡುವಳಿದಾರರಿಗೆ ಜಮೀನು ಒದಗಿಸಿಕೊಡುವಲ್ಲಿ ಶ್ರಮಿಸಿದ್ದರು.
ಖಾದಿ ಉಡುಪನ್ನಷ್ಟೇ ಧರಿಸುತ್ತಿದ್ದ ಮದನ ಮಾಸ್ಟರ್ ಅವರು ಪ್ರಖರ ಗಾಂಧೀವಾದಿಯಾಗಿದ್ದರು.
ಕಳೆದ ಗಾಂಧಿ ಜಯಂತಿಯ ದಿನದಂದು ದ.ಕ.ಜಿಲ್ಲಾಡಳಿತವು ಕೆ.ಪಿ.ಮದನ ಮಾಸ್ಟರ್ ಅವರನ್ನು ಮಂಗಳೂರು ಗಾಂಧಿ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಿತ್ತು.
ಮಾಸ್ಟರ್ ನಿಧನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.