ಮಂಜೂರಾದ ಹುದ್ದೆಗಳಲ್ಲಿ ಶೇ.20 ಮಾತ್ರ ಭರ್ತಿ

ಬಂಟ್ವಾಳದ ಪಶುಪಾಲನ ಇಲಾಖೆ

Team Udayavani, Jan 18, 2022, 7:03 PM IST

ಮಂಜೂರಾದ ಹುದ್ದೆಗಳಲ್ಲಿ ಶೇ.20 ಮಾತ್ರ ಭರ್ತಿ

ಬಂಟ್ವಾಳ: ಬಂಟ್ವಾಳದ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿರುವ ಸಿಬಂದಿ 2-3 ಹುದ್ದೆಗಳನ್ನು ಹೊತ್ತು ಒತ್ತಡದಲ್ಲಿ ಕರ್ತವ್ಯ ನಿರ್ವಹಿ ಸಬೇಕಾದ ಸ್ಥಿತಿ ಇದೆ. ತಾಲೂಕಿಗೆ ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಶೇ. 20 ದಷ್ಟು ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಹೀಗಾಗಿ ಗ್ರಾಮೀಣ ಭಾಗದ ಪಶು ಚಿಕಿತ್ಸಾ ಕೇಂದ್ರಗಳಿಗೆ ದಿನದ ಬಹುತೇಕ ಹೊತ್ತು ಬಾಗಿಲು ಹಾಕಬೇಕಾದ ಸ್ಥಿತಿಯೂ ಇದೆ.

ಜಾನುವಾರುಗಳು ಸೇರಿದಂತೆ ಇತರ ಸಾಕು ಪ್ರಾಣಿಗಳ ಸೇವೆಯಲ್ಲಿ ತೊಡಗಿರುವ ಇಲಾಖೆಯಲ್ಲಿ ಬಂಟ್ವಾಳ ತಾಲೂಕಿಗೆ ಒಟ್ಟು ಮಂಜೂರಾದ 89 ಹುದ್ದೆಗಳಲ್ಲಿ ಕೇವಲ 18 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಉಳಿದಂತೆ ಹುದ್ದೆಗಳು ಖಾಲಿ ಇವೆ. ನಿವೃತ್ತಿಯಾಗಿ ಹುದ್ದೆಗಳು ಖಾಲಿಯಾಗುತ್ತಿವೆಯೇ ಹೊರತು ಭರ್ತಿಗೆ ಸರಕಾರ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ತಾಲೂಕಿನ ಚಿಕಿತ್ಸಾ ಕೇಂದ್ರಗಳು
ಬಂಟ್ವಾಳ ತಾಲೂಕಿನಲ್ಲಿ ಬಂಟ್ವಾಳ, ಕಲ್ಲಡ್ಕ, ಮಾಣಿ, ವಿಟ್ಲದಲ್ಲಿ ಪಶು ವೈದ್ಯ ಆಸ್ಪತ್ರೆಯಿದ್ದು, ರಾಯಿ, ಸಿದ್ಧಕಟ್ಟೆ, ಮೂರ್ಜೆ, ವಗ್ಗ, ಮಾವಿನಕಟ್ಟೆ, ವಾಮದಪದವು, ಬೆಂಜನ ಪದವು, ಕುರ್ನಾಡು, ಮೂರ್ಜೆ, ಅಡ್ಯನಡ್ಕ ಹಾಗೂ ಸಂಚಾರಿ ಪಶು ಚಿಕಿತ್ಸಾಲಯಗಳಿವೆ. ಕನ್ಯಾನ, ಪರಿ ಯಲ್ತಡ್ಕ, ಪೆರ್ನೆ, ಸಜೀಪಮೂಡ, ಪಂಜಿಕಲ್ಲು, ಮೇರಮಜಲು, ಕಕ್ಯ ಪದವು, ಕುಡ್ತಮುಗೇರುಗಳಲ್ಲಿ ಪ್ರಾಥ ಮಿಕ ಪಶು ಚಿಕಿತ್ಸಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಹೀಗೆ 22 ಕಡೆ ಗಳಲ್ಲಿ ಇಲಾಖೆಯ ಕಚೇರಿಗಳಿದ್ದು, ಒಬ್ಬೊ ಬ್ಬರು ಒಂದೊಂದು ಕಡೆ ಕರ್ತವ್ಯ ನಿರ್ವ ಹಿಸಿದರೂ ಭರ್ತಿಯಾಗದ ಸ್ಥಿತಿ ಇದೆ.

ಒಂದೆರಡು ವರ್ಷಗಳ ಹಿಂದೆ ಪಶುಪಾಲನ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಗಳು ಹುದ್ದೆಗಳ ಭರ್ತಿಗಾಗಿ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದು, ಮುಂದಿನ 6 ತಿಂಗಳೊಳಗಾಗಿ ಇಡೀ ರಾಜ್ಯದಲ್ಲಿ ಇಲಾಖೆಯ ಶೇ. 50ದಷ್ಟು ಹುದ್ದೆಗಳು ಭರ್ತಿಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಅದು ಅನುಷ್ಠಾನ ಆಗಿದೆಯೋ ಅಥವಾ ಇಲ್ಲವೇ ಎಂಬುದರ ಕುರಿತು ಕೂಡ ಮಾಹಿತಿ ಇಲ್ಲವಾಗಿದೆ.

ಹಿರಿಯ ಪಶುವೈದ್ಯಕೀಯ ಪರೀಕ್ಷಕರು 18 ಹುದ್ದೆಗಳಲ್ಲಿ 4 ಮಾತ್ರ ಭರ್ತಿ ಇದ್ದು, 2 ಪಶುವೈದ್ಯಕೀಯ ಪರೀಕ್ಷಕ ಹುದ್ದೆಗಳಲ್ಲಿ 2 ಕೂಡ ಭರ್ತಿ ಇದೆ. ಪಶು ವೈದ್ಯಕೀಯ ಸಹಾಯಕರ 12 ಹುದ್ದೆಗಳಲ್ಲಿ ಯಾವುದೂ ಕೂಡ ಭರ್ತಿಯಿಲ್ಲ.

ಡಿ ದರ್ಜೆ ನೌಕರರ 35 ಹುದ್ದೆಗಳಲ್ಲಿ 2 ಮಾತ್ರ ಭರ್ತಿಯಿದ್ದು, 33 ಖಾಲಿ ಇವೆ. ದ್ವಿತೀಯ ದರ್ಜೆ ಸಹಾಯಕ ಹಾಗೂ ವಾಹನ ಚಾಲಕರ ತಲಾ ಒಂದು ಹುದ್ದೆಗಳು ಭರ್ತಿ ಇವೆ.

ಇಲಾಖೆಯ ಸಿಬಂದಿಯ ಒತ್ತಡ ತಗ್ಗಿಸುವ ದೃಷ್ಟಿಯಿಂದ ಗ್ರೂಪ್‌ ಡಿ ನೌಕರರನ್ನು ಮಾತ್ರ ಹೊರಗುತ್ತಿಗೆಯ ಆಧಾರದಲ್ಲಿ ತೆಗೆದುಕೊಳ್ಳಲು ಅವಕಾಶವಿದ್ದು, ಕೆಲವೊಂದು ಮಂದಿ ಮಾತ್ರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬಂದಿಯು ಎರಡು-ಮೂರು ಹುದ್ದೆಗಳನ್ನು ನಿಭಾಯಿಸುವ ಪರಿಸ್ಥಿತಿ ಇದೆ.

ಎಷ್ಟು ಹುದ್ದೆಗಳು ಖಾಲಿ
ಬಂಟ್ವಾಳ ತಾಲೂಕಿಗೆ ಮಂಜೂರಾ ಗಿರುವ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಒಂದು ಹುದ್ದೆ ಇದ್ದು, ಅದು ಭರ್ತಿಯಾಗಿದೆ. ಮುಖ್ಯಪಶುವೈದ್ಯಾಧಿಕಾರಿ/ ಹಿರಿಯ ಪಶುವೈದ್ಯಾಧಿಕಾರಿ/ಪಶು ವೈದ್ಯಾಧಿಕಾರಿ ಒಟ್ಟು 15 ಹುದ್ದೆಗಳಲ್ಲಿ 5 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಾನುವಾರು ಅಭಿವೃದ್ಧಿ ಅಧಿಕಾರಿ ಒಂದು ಹುದ್ದೆ ಭರ್ತಿ ಇದೆ. ಜಾನುವಾರು ಅಧಿಕಾರಿ 3 ಹುದ್ದೆಗಳಲ್ಲಿ 2 ಮಾತ್ರ ಭರ್ತಿ ಇದೆ.

ಚಾರ್ಜ್‌ಗಳ ಮೂಲಕ ಕರ್ತವ್ಯ ನಿಭಾವಣೆ
ಹಾಲಿ ಇರುವವರಿಗೆ 2-3 ಚಾರ್ಜ್‌ಗಳನ್ನು ನೀಡಿ ನಿರ್ವಹಣೆ ಮಾಡಲಾಗುತ್ತಿದೆ. ಬೆಳಗ್ಗೆ-ಮಧ್ಯಾಹ್ನ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಪಶುವೈದ್ಯಾಧಿಕಾರಿ ಹುದ್ದೆಗಳಿಗೆ 12 ವರ್ಷ ಸೇವಾವಧಿಯಾಗಿರುವವರು ಬೇಕಾಗುತ್ತದೆ. ಡಿ ಗ್ರೂಪ್‌ಗ್ಳಿಗೆ ಹೊರ ಗುತ್ತಿಗೆಯಲ್ಲಿ ತೆಗೆದುಕೊಳ್ಳಬಹುದಾಗಿದ್ದು, 18 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
-ಡಾ| ಎಂ.ಎಸ್‌.ಹರೀಶ್‌,
ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ), ಬಂಟ್ವಾಳ

– ಕಿರಣ್‌ ಸರಪಾಡಿ

 

ಟಾಪ್ ನ್ಯೂಸ್

During the Lok Sabha election, there was a discussion about caste-wise DCM, but….: hc mahadevappa

Lok Sabha ಚುನಾವಣೆ ವೇಳೆ ಜಾತಿವಾರು ಡಿಸಿಎಂ ಚರ್ಚೆ ನಡೆದಿತ್ತು, ಆದರೆ….: ಮಹಾದೇವಪ್ಪ

7-kodagu

Madikeri: ಜು.1 ರಿಂದ ಭಾರಿ ವಾಹನಗಳ ಸಂಚಾರ ನಿಷೇಧ

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-btwl

Bantwala: ಮರ ಬಿದ್ದು ಕೋಳಿ ಫಾರಂ ಜಖಂ

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ; ಕೃಷಿಕರಲ್ಲಿ ಆತಂಕ

Patla Betta; ಅರಣ್ಯದ ರಸ್ತೆ ಬಗ್ಗೆ ವರದಿ ಕೇಳಿದ ಸಚಿವ ಈಶ್ವರ ಖಂಡ್ರೆ

Patla Betta; ಅರಣ್ಯದ ರಸ್ತೆ ಬಗ್ಗೆ ವರದಿ ಕೇಳಿದ ಸಚಿವ ಈಶ್ವರ ಖಂಡ್ರೆ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

During the Lok Sabha election, there was a discussion about caste-wise DCM, but….: hc mahadevappa

Lok Sabha ಚುನಾವಣೆ ವೇಳೆ ಜಾತಿವಾರು ಡಿಸಿಎಂ ಚರ್ಚೆ ನಡೆದಿತ್ತು, ಆದರೆ….: ಮಹಾದೇವಪ್ಪ

7-kodagu

Madikeri: ಜು.1 ರಿಂದ ಭಾರಿ ವಾಹನಗಳ ಸಂಚಾರ ನಿಷೇಧ

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.