ವಿದ್ಯಾನಂದ ಮುನಿಮಹಾರಾಜ್ ಸಲ್ಲೇಖನ ವ್ರತಧಾರಣೆಯ ಸಮಾಧಿ ಮರಣ: ಡಾ| ಹೆಗ್ಗಡೆ ವಿನಯಾಂಜಲಿ
Team Udayavani, Sep 23, 2019, 5:02 AM IST
ಬೆಳ್ತಂಗಡಿ: ಸಲ್ಲೇಖನ ವ್ರತಧಾರಣೆ ಮಾಡಿದ್ದ ರಾಷ್ಟ್ರಸಂತ ಪರಮಪೂಜ್ಯ ಏಲಾಚಾರ್ಯ ವಿದ್ಯಾನಂದ ಮುನಿಮಹಾರಾಜರು ರವಿವಾರ ಪ್ರಾತಃಕಾಲದಲ್ಲಿ ಸಮಾಧಿ ಮರಣ ಹೊಂದಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ತಮ್ಮ ವಿನಯಾಂಜಲಿ ಸಂದೇಶದಲ್ಲಿ ಪೂಜ್ಯ ಮುನಿಮಹಾರಾಜರ ಔನ್ನತ್ಯ, ಕೊಡುಗೆಗಳು, ಧರ್ಮಸ್ಥಳಕ್ಕೂ ಪೂಜ್ಯರಿಗೂ ಇದ್ದ ಸಂಪರ್ಕಗಳನ್ನು ಸ್ಮರಿಸಿಕೊಂಡಿದ್ದಾರೆ.
ರಾಷ್ಟ್ರಸಂತ ಪರಮಪೂಜ್ಯ ಏಲಾಚಾರ್ಯ ವಿದ್ಯಾನಂದ ಮುನಿಮಹಾರಾಜರು ಸಲ್ಲೇಖನ ವ್ರತಧಾರಣೆಯೊಂದಿಗೆ ಸಮಾಧಿ ಮರಣ ಹೊಂದಿದ ವಿಚಾರ ತಿಳಿಯಿತು.
ಕರ್ನಾಟಕದವರಾದ ಪೂಜ್ಯರು ಕ್ಷುಲ್ಲಕ, ಸಾಧು, ಉಪಾಧ್ಯಾಯ, ಏಲಾಚಾರ್ಯ ಪದವಿಗೇರಿ ಆಧ್ಯಾತ್ಮಿಕ ಉನ್ನತಿ ಸಾಧಿಸಿದವರು. ಉನ್ನತ ಮಟ್ಟದ ರಾಜಕೀಯ ನೇತಾರರೂ ಪೂಜ್ಯರ ಉಪದೇಶಾಮೃತದಿಂದ ಪ್ರಭಾವಿತರಾಗಿದ್ದಾರೆ ಎಂದು ಡಾ| ಹೆಗ್ಗಡೆ ತಮ್ಮ ವಿನಯಾಂಜಲಿ ಸಂದೇಶದಲ್ಲಿ ತಿಳಿಸಿದ್ದಾರೆ.
ಮುನಿಗಳು ಮಂಗಲ ಪ್ರವಚನದ ಮೂಲಕ ಧರ್ಮ ಪ್ರಭಾವನೆ ಮಾಡುತ್ತಿದ್ದರು. ನಾನು ದಿಲ್ಲಿಗೆ ತೆರಳಿದಾಗೆಲ್ಲ ಅವರ ದರ್ಶನಗೈದು ಆಶೀರ್ವಾದ ಪಡೆಯುತ್ತಿದ್ದೆ. 1982ರಲ್ಲಿ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಥಮ ಮಹಾಮಸ್ತಕಾಭಿಷೇಕ ಸಂದರ್ಭ ಅವರು ಪಾವನ ಸಾನ್ನಿಧ್ಯ ವಹಿಸಿದ್ದು, ಮಾರ್ಗದರ್ಶನ ನೀಡಿದ್ದರು. ಅವರ ದರ್ಶನ ಮತ್ತು ಸೇವೆ ಮಾಡುವ ಅವಕಾಶ ನಮಗೆ ದೊರಕಿತ್ತು ಎಂದಿದ್ದಾರೆ.
ಶ್ರವಣಬೆಳಗೊಳದಲ್ಲಿ ಪೂಜ್ಯರು ನೀಡಿದ ಮಂಗಲ ಪ್ರವಚನವನ್ನು ನಾವು “ವಿದ್ಯಾನಂದವಾಣಿ’ ಎಂಬ ಹೆಸರಿನಲ್ಲಿ ಎರಡು ಕೃತಿ ಗಳಾಗಿ ಪ್ರಕಟಿಸಿದ್ದು, ಇದು ಓದುಗರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ನಮನ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.