ಐಕಳ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಗ್ರಹ

Team Udayavani, Jan 3, 2018, 12:47 PM IST

1-Jan-9.jpg

ಐಕಳ : ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಜಾಗ ನೀಡಿ, ದೊಜಲಗುರಿ ರಸ್ತೆ ಸರಿಪಡಿಸಿ, ಬಹುಗ್ರಾಮ ಯೋಜನೆ ಯಾಕೆ, ನೀರು ಕೊಡಿ, ಸ್ಥಳಂತ ಗುತ್ತು ರಸ್ತೆ ಸರಿ ಸರಿಪಡಿಸಿ, ಮೋರಿ ರಚನೆ ಮಾಡುವಂತೆ ಐಕಳ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

 ಐಕಳ ಗ್ರಾ.ಪಂ. ವ್ಯಾಪ್ತಿಯ ಐಕಳ, ಉಳೆಪಾಡಿ, ಏಳಿಂಜೆ ಗ್ರಾಮಗಳ ಎರಡನೇಯ ಹಂತದ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷ ದಿವಾಕರ ಚೌಟ ಅಧ್ಯಕ್ಷತೆಯಲ್ಲಿ ಜ. 2 ರಂದು ರಾಜೀವ ಗಾಂಧಿ ಸಭಾಭವನದಲ್ಲಿ ನಡೆಯಿತು. ಗಾ.ಪಂ. ಕಳೆದ 20 ವರ್ಷದಿಂದ ನಿವೇಶನ ರಹಿತರ ಪಟ್ಟಿ ಮಾಡಲಾಗುತ್ತಿದೆ. ಆದರೆ ಸರಕಾರಿ ಜಾಗ ಇಲ್ಲ ಎಂಬ ನೆಪದಿಂದ ಪ್ರತಿ ಗ್ರಾಮ ಸಭೆಯಲ್ಲೂ ಚರ್ಚೆ ನಡೆದರೂ ಫಲಪ್ರದವಾಗಿಲ್ಲ. ಆದರೆ ಕಳೆದ ಬಾರಿ ಜನರ ಒತ್ತಡದ ಮೇರೆಗೆ ಕಂಗುರಿಯಲ್ಲಿ 2 ಎಕರೆ ಜಾಗ ಗೊತ್ತು ಪಡಿಸಿದ್ದರೂ ನಿವೇಶನ ರಹಿತರಿಗೆ ಹಂಚಿಕೆಯಾಗಿಲ್ಲ ಯಾಕೆ ಎಂದು ಗ್ರಾಮಸ್ಥ ವಸಂತ್‌ ಹಾಗೂ ಇನ್ನಿತರು ಪ್ರಶ್ನಿಸಿದರು. ಈ ಬಗ್ಗೆ ಜಿಲ್ಲಾಡಿಳಿತದಿಂದ ಮಾಹಿತಿ ಬಂದಿಲ್ಲ. ಬಂದ ಕೂಡಲೇ ಕ್ರಮಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ದಿವಾಕರ ಚೌಟ ತಿಳಿಸಿದರು.

ಬಹುಗ್ರಾಮ ಯೋಜನೆ ಕಾರ್ಯಗತವಾಗಿಲ್ಲ
15 ಕೋಟಿ ರೂ. ವೆಚ್ಚದ ಬಹುಗ್ರಾಮ ಯೋಜನೆಯಲ್ಲಿ ನೀರು ಬರುತ್ತಿಲ್ಲ. ಬಂದರೂ ಉಪ್ಪು ನೀರು ಬರುತ್ತಿದೆ. ಜನರ ಹಣ ಪೋಲಾಗುತ್ತಿದೆ ಎಂದು ಉಳೆಪಾಡಿ ನಿವಾಸಿ ಕೃಷ್ಣ ಉಳೆಪಾಡಿ ಕೇಳಿದಾಗ ಜಿ.ಪಂ. ಸದಸ್ಯ ವಿನೋದ್‌ ಬೊಳ್ಳೂರು ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ
ಯೋಜನೆಯ ಸದ್ಯ ಸ್ಥಗಿತಗೊಂಡಿದೆ. ಎಂದು ತಿಳಿಸಿದರು.

ಟ್ಯಾಂಕ್‌ ತೆರವುಗೊಳಿಸಿ
ಉಳೆಪಾಡಿಯಲ್ಲಿ ನೀರಿನ ಟ್ಯಾಂಕ್‌ ಸಿಮೆಂಟ್‌ ತುಂಡುಗಳು ಉದುರುತ್ತವೆ. ಹಿಂದಿನ ಗ್ರಾಮ ಸಭೆಯಲ್ಲಿ ತಿಳಿಸಲಾಗಿದೆ. ಆದರೂ ದುರಸ್ತಿಯಾಗಿಲ್ಲ ಎಂದು ಕೃಷ್ಣ ಅವರು ತಿಳಿಸಿದಾಗ ಈ ಬಗ್ಗೆ ಎಂಜಿನಿಯರ್‌ ಬಂದು ಸ್ಥಳ ಪರೀಶೀಲಿಸಿ, ಯೋಜನೆ ಸಿದ್ಧ ಪಡಿಸಿ ತೆರವು ಮಾಡಲಾಗುವುದು ಎಂದು ಅಧ್ಯಕ್ಷರು ತಿ‌ಳಿಸಿದರು.

ವಲಯ ಅರಣ್ಯಧಿಕಾರಿ ಚಿದಾನಂದ ನೋಡಲ್‌ ಅಧಿಕಾರಿಯಾಗಿದ್ದರು. ವಿವಿಧ ಇಲಾಖೆಯ ಶಿಕ್ಷಣ ಇಲಾಖೆಯ ಅನಿತಾ ಪಿಂಟೋ, ಮಕ್ಕಳ ಕಲ್ಯಾಣ ಇಲಾಖೆಯ ಶೀಲಾವತಿ, ಕಂದಾಯ ಇಲಾಖೆಯ ಮಂಜುನಾಥ, ಡಾ| ಭಾಸ್ಕರ ಕೋಟ್ಯಾನ್‌, ಸದಾನಂದ ಮತ್ತಿತರರು ಭಾಗವಹಿಸಿ ಮಾಹಿತಿ ತಿಳಿಸಿದರು. ಉಪಾಧ್ಯಕ್ಷೆ ಸುಂದರಿ ಸಾಲ್ಯಾನ್‌ , ಪಂಚಾಯತ್‌ ಸದಸ್ಯರಾದ ರವಿಂದ್ರ, ಕಿರಣ್‌ ಕುಮಾರ್‌, ದಯಾವತಿ, ರೇಖಾ ಶೆಟ್ಟಿ, ಸಂಜೀವ ಶೆಟ್ಟಿ, ರಾಜೇಶ್‌, ಯೋಗೀಶ್‌ ಕೋಟ್ಯಾನ್‌, ಸರಿತಾ, ಪವಿತ್ರಾ, ಸುಧಾಕರ ಸಾಲ್ಯಾನ್‌ ಉಪಸ್ಥಿತರಿದ್ದರು. ಪಿಡಿಒ ನಾಗರತ್ನ ಜಿ ವಂದಿಸಿದರು.

ಅಭಿವೃದ್ಧಿಯಾಗದ ದೊಜಲಗುರಿ
ಪಂಚಾಯತ್‌ ವ್ಯಾಪ್ತಿಯ ದೊಜಲಗುರಿ ಸಮರ್ಪಕವಾಗಿ ರಸ್ತೆ ನಿರ್ಮಾಣವಾಗಿಲ್ಲ. ನಿಮ್ಮಲ್ಲಿ ಅನುದಾನ ಇಲ್ಲದಿದ್ದರೇ ಬೇರೆ ನಿಧಿಯಿಂದ ಕೆಲಸ ಮಾಡಿಸಿ ಎಂದು ಅಲ್ಲಿನ ನಿವಾಸಿ ಶರತ್‌ ತಿಳಿಸಿದಾಗ ನಮ್ಮ ಗ್ರಾಮ ಪಂಚಾಯತ್‌ಗೆ 75 ಲಕ್ಷ ರೂ. ಅನುದಾನ ಬಂದಿದೆ. ಮೂರು ಗ್ರಾಮಗಳಿಗೂ ಅದ್ಯತೆಯ ಮೇರೆಗೆ ಹಂಚಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನದಲ್ಲಿ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು. ಸ್ಥಳಂತಗುತ್ತು ರಸ್ತೆ ದುರಸ್ತಿ ಹಾಗೂ ಮೋರಿ ರಚನೆ ಮಾಡುವಂತೆ ಎಂದು ರುಡಾಲ್ಫ್ ಹಾಗೂ ಜೆಸಿಂತಾ ಒತ್ತಾಯಿಸಿದರು. ಈ ಬಗ್ಗೆ ನೀವು ಜನ ಹಾಗೂ ಜೆಸಿಬಿ ಗೊತ್ತು ಪಡಿಸಿ ಕೆಲಸ ಮಾಡಿಸಿ. ಅದರ ಖರ್ಚ್‌ ಪಂಚಾಯತ್‌ನಿಂದ ಕೊಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಪೊಲೀಸರಿಗೆ ತಿಳಿಸಿ
ಐಕಳ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕೊಲೆ ಹಾಗೂ ಚಿನ್ನ ಕಳವು ಪ್ರಕರಣ ವಾಗಿದೆ. ಜನರು ಈ ಬಗ್ಗೆ ಜಾಗ್ರತರಾಗಬೇಕು. ಶಂಕಿತರು ಕಂಡುಬಂದರೆ ಕೂಡಲೇ ಪೊಲೀಸರಿಗೆ ತಿಳಿಸಬೇಕು ಎಂದು ಪಂಚಾಯತ್‌ ಅಧ್ಯಕ್ಷ ದಿವಾಕರ ಚೌಟ ತಿಳಿಸಿದರು.

ಟಾಪ್ ನ್ಯೂಸ್

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

9

Mangaluru: ಪಾಲಿಕೆ ಕಚೇರಿ ಪಕ್ಕದಲ್ಲೇ ಫುಟ್‌ಪಾತ್‌ ಅವ್ಯವಸ್ಥೆ

8

Nanthoor: ಮನೆಯಿಂದ ಮಣ್ಣು ತಂದು ರಸ್ತೆಗುಂಡಿ ಮುಚ್ಚುವ ಹಿರಿಯ!

6

Mangaluru: ಕರಾವಳಿ ಖಗೋಳ ಉತ್ಸವ; ಉಲ್ಕಾ ತುಣುಕು, ನಕ್ಷತ್ರ ವೀಕ್ಷಣೆ ಅವಕಾಶ

5

Bajpe: ಇನ್ಮುಂದೆ ದೀಪಗಳಿಂದ ಬೆಳಗ‌ಲಿದೆ ವಿಮಾನ ನಿಲ್ದಾಣ ರಸ್ತೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

12(1

Gudibande: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.