ಬಿಎಸ್ಎನ್ಎಲ್ ಮೋಡೆಮ್ಗೆ ವೈರಸ್ ದಾಳಿ
Team Udayavani, Jul 28, 2017, 12:10 PM IST
ವಿಟ್ಲ: ಬಿಎಸ್ಎನ್ಎಲ್ ಮೋಡೆಮ್ಗೆ ಎಲ್ಲೆಡೆ ವೈರಸ್ ದಾಳಿಯಾಗಿ ಅಂತರ್ಜಾಲ ವ್ಯವಸ್ಥೆಯನ್ನು ಬುಡಮೇಲು ಮಾಡಿದ ಘಟನೆ ಗುರುವಾರ ಸಂಭವಿಸಿದೆ. ಪರಿಣಾಮವಾಗಿ ಎಲ್ಲೆಡೆ ಅಂತರ್ಜಾಲ ಸಂಪರ್ಕ ಅಸ್ತವ್ಯಸ್ತವಾಯಿತು. ಮಾಲ್ವಾರಿಸ್ ಎಂಬ ವೈರಸ್ ಅನ್ನು ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ ಮೋಡೆಮ್ಗೆ ಹರಿಯಬಿಡಲಾಗಿದೆ. ವಿಟ್ಲ ವ್ಯಾಪ್ತಿಯಲ್ಲಿ ಈ ವೈರಸ್ ದಾಳಿಯಿಂದ ಅನೇಕ ಮಂದಿ ತತ್ತರಿಸಿದರು.
ಇಲಾಖೆಯ ಅಧಿಕಾರಿಗಳು ಉದಯವಾಣಿಗೆ ಮಾಹಿತಿ ನೀಡಿ, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಬಿಎಸ್ಎನ್ಎಲ್ಗೆ ನಿರ್ದಿಷ್ಟ ಕಂಪೆನಿಯೊಂದು ಒದಗಿಸಿದ ಮೋಡೆಮ್ಗೆ ಈ ವೈರಸ್ ದಾಳಿಯಾಗಿರುವುದು ಬೆಳಕಿಗೆ ಬಂದಿದೆ. ಅನೇಕ ಮಂದಿ ಗ್ರಾಹಕರಿಗೆ ತೊಂದರೆ ಉಂಟುಮಾಡಲಾಗಿದೆ. ಕಾರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದರು. ಪುತ್ತೂರಿನ ವಿವಿಧೆಡೆ ಕೂಡ ಇದೇ ರೀತಿಯ ವೈರಸ್ ದಾಳಿಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಬೆಳಗ್ಗೆ ಮೋಡೆಮ್ನಲ್ಲಿ ಕೆಂಪು ಬಣ್ಣದ ಲೈಟ್ ಉರಿಯುತ್ತಿತ್ತು ಹಾಗೂ ಯಾವುದೇ ರೀತಿಯಲ್ಲಿ ಅಂತರ್ಜಾಲ ಸಂಪರ್ಕ ಸಾಧಿಸಲಾಗುತ್ತಿರಲಿಲ್ಲ. ಸರ್ವರ್ ಸಮಸ್ಯೆಯೆನ್ನುತ್ತಿತ್ತು. ದೂರವಾಣಿ ವಿನಿಮಯ ಕೇಂದ್ರವನ್ನು ಸಂಪರ್ಕಿಸಿದಾಗ ಇದು ವೈರಸ್ ದಾಳಿ ಎಂದು ತಿಳಿದುಬರುತ್ತದೆ. ಮೋಡೆಮ್ ಮತ್ತು ಚಾರ್ಜರನ್ನು ಕೇಂದ್ರಕ್ಕೆ ಒಯ್ಯಬೇಕು. ಅಲ್ಲಿ ತತ್ಕ್ಷಣ ವೈರಸ್ಸನ್ನು ಇಲ್ಲವಾಗಿಸುತ್ತಾರೆ ಮತ್ತು ಬ್ರಾಡ್ಬ್ಯಾಂಡ್ ಸಂಪರ್ಕ ಲಭ್ಯವಾಗುತ್ತದೆ ಎಂದು ಗ್ರಾಹಕರು ತಿಳಿಸಿದ್ದಾರೆ. ವೈರಸ್ ದಾಳಿಯ ಕುರಿತಂತೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ದ.ಕ. ಜಿಲ್ಲಾ ಟೆಲಿಕಾಂನ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.