Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ


Team Udayavani, Oct 1, 2024, 12:54 AM IST

Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ

ಮಂಗಳೂರು: ಮೀನಿನ ಎಣ್ಣೆ, ದನದ ಕೊಬ್ಬು ಬಳಸಿ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿರುವುದನ್ನು ವಿಶ್ವ ಹಿಂದೂ ಪರಿಷತ್‌ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಲಾದ ಧರ್ಮಾಗ್ರಹ ಸಭೆ ಖಂಡಿಸಲಾಯಿತು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹ ವ್ಯಕ್ತವಾಯಿತು.

ನಗರದ ಡೊಂಗರಕೇರಿ ವೆಂಕಟ ರಮಣ ದೇಗುಲದ ಪ್ರಾಂಗಣದಲ್ಲಿ ಸೋಮವಾರ ಜರಗಿದ ಧರ್ಮಾಗ್ರಹ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಡಾ| ಎಂ.ಬಿ.ಪುರಾಣಿಕ್‌ ಅವರು ನಿರ್ಣಯವನ್ನು ವಿವರಿಸಿದರು. ತಿರುಪತಿ ದೇವಸ್ಥಾನಕ್ಕೆ ಅಗತ್ಯ ಇರುವ ತುಪ್ಪವನ್ನು ದೇವಸ್ಥಾನದ ಟ್ರಸ್ಟ್‌ ವತಿಯಿಂದಲೇ ತಯಾರಿಸಲು ಅನುಕೂಲವಾಗುವಂತೆ 25 ಸಾವಿರ ದೇಸೀ ಹಸುಗಳಿರುವ ಬೃಹತ್‌ ಗೋಶಾಲೆ ತೆರೆಸಬೇಕು. ಇತರ ದೇವಸ್ಥಾನಗಳಲ್ಲೂ ಇದೇ ರೀತಿ ಗೋಶಾಲೆ ಆರಂಭಿಸಬೇಕು. ದೇವಸ್ಥಾನಗಳು ಸರಕಾರದ ಸುಪರ್ದಿಯಲ್ಲಿರುವುದರಿಂದಲೇ ಅದು ಅಪವಿತ್ರವಾಗುವುದು. ಆದ್ದರಿಂದ ಎಲ್ಲ ದೇವಸ್ಥಾನಗಳನ್ನು ರಾಜಕೀಯ ಹಾಗೂ ಸರಕಾರದ ಹಿಡಿತದಿಂದ ಮುಕ್ತಗೊಳಿಸಿ ಹಿಂದೂ ಸಮಾಜಕ್ಕೆ ಹಸ್ತಾಂತರಿಸಬೇಕು. ಅದಕ್ಕಾಗಿ ರಾಷ್ಟ್ರೀಯ ಧಾರ್ಮಿಕ ಪರಿಷತ್ತು ಮತ್ತು ರಾಜ್ಯ ಧಾರ್ಮಿಕ ಪರಿಷತ್ತನ್ನು ಸ್ಥಾಪಿಸಬೇಕೆಂದು ಸಭೆ ಯಲ್ಲಿ ನಿರ್ಣಯಿಸಲಾಗಿದೆ ಎಂದರು.

ಹಿಂದೂಗಳು ಎಚ್ಚೆತ್ತುಕೊಳ್ಳಬೇಕು
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಆರೆಸ್ಸೆಸ್‌ನ ಹಿರಿಯ ಮುಖಂಡ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಅವರು, ಹಿಂದೂ ಧರ್ಮ, ಶ್ರದ್ಧಾಕೇಂದ್ರಗಳ ಮೇಲೆ ಕ್ರೂರ ಅಪಚಾರ ನಡೆಯುತ್ತಿದ್ದು, ಹಿಂದೂಗಳು ಇನ್ನೂ ಸಂಘಟಿತರಾಗದಿರುವುದೇ ಇದಕ್ಕೆ ಮುಖ್ಯ ಕಾರಣ. ಸರಕಾರದ ಅಧೀನದ ದೇಗುಲಗಳ ಆಡಳಿತ ಮಂಡಳಿಗಳಿಗೆ ಅನ್ಯ ಮತೀಯರನ್ನು ನೇಮಕ ಮಾಡಿ, ಧರ್ಮದ ಅಚರಣೆಗಳ ಮೇಲೆ ಅಪಚಾರ ಮಾಡಲಾಗುತ್ತಿದೆ. ತಿರುಪತಿಯಂತಹ ಘಟನೆ ಇತರ ಮತೀಯರ ಶ್ರದ್ಧಾ ಕೇಂದ್ರದಲ್ಲಿ ನಡೆಯುತ್ತಿದ್ದರೆ ದೇಶವೇ ಹೊತ್ತಿ ಉರಿಯುತ್ತಿತ್ತು ಎಂದರು.

ರಾಜಕೀಯ ರಹಿತ ಹೋರಾಟ ಅಗತ್ಯ: ಒಡಿಯೂರು ಶ್ರೀ
ಒಡಿಯೂರು ಶ್ರೀ ಗುರುದೇವಾ ನಂದ ಸ್ವಾಮೀಜಿ ಮಾತನಾಡಿ, ಸನಾ ತನ ಹಿಂದೂ ಧರ್ಮಕ್ಕೆ ಧಕ್ಕೆಯಾ ದಾಗ ರಾಜಕೀಯ ರಹಿತವಾಗಿ ಹೋರಾಡಬೇಕು. ಇಚ್ಛಾಶಕ್ತಿಯ ಕೊರತೆ ಕಾರಣದಿಂದ ಅದು ನಮ್ಮಿಂದ ಸಾಧ್ಯ ವಾಗುತ್ತಿಲ್ಲ, ಸಮಾಜ ಹಾಗೂ ಸಂತರು ಜತೆಯಾಗಿ ಸಾಗಿದಾಗ ಮಾತ್ರ ಧರ್ಮಕ್ಕೆ ಜಯ ಸಿಗುತ್ತದೆ. ದೇವಾಲಯಗಳ ಆಡಳಿತ ನಾಸ್ತಿಕರ ಕೈಗೆ ಹೋಗದಂತೆ ತಡೆಯುವ ಅಗತ್ಯವಿದೆ ಎಂದರು.

ಸರಕಾರಗಳಿಂದ ನಿರ್ಲಕ್ಷ್ಯ: ಮಾಣಿಲ ಶ್ರೀ
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಹಿಂದೂ ವಿರೋಧಿ ಧೋರಣೆ ಹೊಂದಿರುವ ಕೆಲವು ರಾಜ್ಯ ಸರಕಾರಗಳಿಗೆ ದೇವಸ್ಥಾನದ ಹಣ ಬೇಕು. ಆದರೆ ದೇಗುಲಗಳ ಅಭಿವೃದ್ಧಿಗೆ ಸರಕಾರ ಮುಂದಾಗುವುದಿಲ್ಲ ಎಂದರು.

ಮಂಗಳೂರಿನ ಓಂ ಶ್ರೀಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಕನ್ಯಾನ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಓಂ ಶ್ರೀಮಠದ ಶ್ರೀ ಶಿವ ಜ್ಞಾನಮಹಿ ಸರಸ್ವತಿ, ವಿಹಿಂಪ ಕ್ಷೇತ್ರೀಯ ಮಂದಿರ ಅರ್ಚಕ ಪುರೋಹಿತ ಸಂಪರ್ಕ ವಿಭಾಗ ಪ್ರಮುಖ್‌ ಬಸವರಾಜ್‌ ಜೀ, ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಎಚ್‌.ಕೆ. ಪುರುತೋಷತ್ತಮ್‌, ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರವೀಣ್‌ ನಾಗ್ವೇಕರ್‌, ಬಿ.ವರದರಾಯ ಎಸ್‌. ನಾಗ್ವೇಕರ್‌, ಬಿ.ಸಾಯಿದತ್ತ, ವಿಎಚ್‌ಪಿ ಪ್ರಮುಖರಾದ ಗೋಪಾಲ ಕುತ್ತಾರ್‌, ಕಟೀಲ್‌ ದಿನೇಶ್‌ ಪೈ, ರವಿ ಅಸೈಗೋಳಿ, ಭುಜಂಗ ಕುಲಾಲ್‌, ಮನೋಹರ್‌ ಸುವರ್ಣ, ಹರೀಶ್‌ ಶೇಟ್‌, ಗುರುಪ್ರಸಾದ್‌ ಕಡಂಬಾರು, ಪ್ರದೀಪ ಸರಿಪಳ್ಳ, ದೀಪಕ್‌ ಮರೋಳಿ, ಪೊಳಲಿ ಗಿರಿಪ್ರಕಾಶ್‌ ತಂತ್ರಿ, ಮುರುಳೀಧರ್‌ ರಾವ್‌, ಪ್ರವೀಣ್‌ ಕುತ್ತಾರ್‌ ಮೊದಲಾದವರು ಉಪಸ್ಥಿತರಿದ್ದರು.

“ಭಗವಾನ್‌’ ಯೋಚನೆಯೇ ರಾಕ್ಷಸೀಯ: ಭಟ್‌
ಪ್ರೊ| ಭಗವಾನ್‌ ಈ ಹಿಂದಿನಿಂದಲೂ ಹುಚ್ಚು ಹುಚ್ಚಾಗಿ ಏನೇನೋ ಮಾತನಾಡುತ್ತಿದ್ದ. ಅವನು ಎಲ್ಲಿ ಹುಟ್ಟಿದ್ದಾನೆ ಎನ್ನುವುದು ಅವನಿಗೇ ಗೊತ್ತಿಲ್ಲ. ಅಪ್ಪ ಅಮ್ಮ ಯಾರೆಂದೂ ಗೊತ್ತಿಲ್ಲ. ಅದಕ್ಕಾಗಿ ಆ ರೀತಿ ಮಾತನಾಡುತ್ತಾನೆ. ಅವನಿಗೆ ಒಳ್ಳೆಯದಾಗಲಿ ಎಂದು “ಭಗವಾನ್‌’ ಎಂದು ಹೆಸರಿಟ್ಟಿದ್ದಾರೆ. ಆದರೆ ಆತ ರಾಕ್ಷಸನ ರೀತಿಯಲ್ಲಿ ಯೋಚಿಸುತ್ತಾನೆ ಎಂದು ಪ್ರೊ| ಕೆ.ಎಸ್‌.ಭಗವಾನ್‌ ವಿರುದ್ಧ ಆರೆಸ್ಸೆಸ್‌ ಮುಖಂಡ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಅವರು ಏಕವಚನದಲ್ಲಿ ವಾಗ್ಧಾಳಿ ನಡೆಸಿದ್ದಾರೆ. ಮೈಸೂರಿನ ಮಹಿಷ ದಸರಾ ಆಚರಣೆ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅ ವರು, ಅದೊಂದು ರಾಕ್ಷಸಿ ವಂಶ. ಅದಕ್ಕಾಗಿ ರಾಕ್ಷಸರನ್ನು ಆರಾಧನೆ ಮಾಡುತ್ತದೆ. ಮನುಷ್ಯರ್ಯಾರೂ ರಾಕ್ಷಸರನ್ನು ಪೂಜಿಸುವುದಿಲ್ಲ. ರಾಕ್ಷಸರು ಮಾತ್ರ ರಾಕ್ಷಸರನ್ನೇ ಪೂಜಿಸುತ್ತಾರೆ ಮತ್ತು ಒಂದು ದಿನ ನಾಶವಾಗುತ್ತಾರೆ ಎಂದರು.

 

ಟಾಪ್ ನ್ಯೂಸ್

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.