ನದಿ ಕೊರೆತಕೆ ಶೀಘ್ರ ಪರಿಹಾರ: ಕೋಟ್ಯಾನ್‌ ಭರವಸೆ


Team Udayavani, Jul 15, 2018, 10:43 AM IST

15-july-5.jpg

ಸಸಿಹಿತ್ಲು : ಇಲ್ಲಿ ಪ್ರಾಕೃತಿಕ ವಿಕೋಪದಿಂದ ಬೀಚ್‌ ಪ್ರದೇಶದ ಅಳಿವೆಯಲ್ಲಿನ ನದಿ ಕೊರೆತಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆದು ತುರ್ತು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು. ಸಸಿಹಿತ್ಲು ಬೀಚ್‌ ಪ್ರದೇಶಕ್ಕೆ ಅವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಜು. 15ರಂದು ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೊದಲು ಅಳವೆಯನ್ನು ಉಳಿಸಲು ಸ್ಥಳೀಯ ಅನುಭವಿ ಮೀನುಗಾರರನ್ನು, ಗ್ರಾಮಸ್ಥರ ಸಮ್ಮುಖದಲ್ಲಿಯೇ ಅಧಿಕಾರಿಗಳ ಸಭೆಯನ್ನು ನಡೆಸುವ ಚಿಂತನೆ ಇದೆ. ಸಸಿಹಿತ್ಲು ಪ್ರದೇಶ ಪ್ರವಾಸೋದ್ಯಮಕ್ಕೆ ಬೇಕಾದ ಆವಶ್ಯಕತೆಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರು ಸ್ಥಳೀಯ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದು, ಸಸಿಹಿತ್ಲು ಪ್ರದೇಶದಲ್ಲಿ ಮುಖ್ಯವಾಗಿ ಸರ್ಫಿಂಗ್ ನಡೆಸುವ ಬದಲು ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಾಶಸ್ತ್ಯ  ಸಿಗಲಿ. ಸ್ಥಳೀಯರೇ ರಚಿಸಿರುವ ಬೀಚ್‌ ಅಭಿವೃದ್ಧಿ ಸಮಿತಿಯನ್ನು ಅಧಿಕೃತಗೊಳಿಸಬೇಕು. ಸಸಿಹಿತ್ಲಿನಲ್ಲಿ ಮುಖ್ಯವಾಗಿ ಮೀನುಗಾರಿಕಾ ವೃತ್ತಿಗೆ ಸಂಬಂಧಿತ ಯೋಜನೆ ರೂಪಿಸಲಿ. ಮೀನುಗಾರಿಕಾ ಜೆಟ್ಟಿಯಂತಹ ವಲಯವನ್ನು ನಿರ್ಮಿಸಲು ಪ್ರಯತ್ನ ನಡೆಸಬೇಕು ಎಂದು ಹೇಳಿಕೊಂಡರು.

ಜಿಲ್ಲಾ ಪಂಚಾಯತ್‌ ಸದಸ್ಯ ವಿನೋದ್‌ಕುಮಾರ್‌ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್‌ ಪ್ರಕಾಶ್‌ ಕಾಮೆರೊಟ್ಟು, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸದಸ್ಯರಾದ ವಿನೋದ್‌ ಕುಮಾರ್‌ ಕೊಳುವೈಲು, ಚಿತ್ರಾ ಸುಕೇಶ್‌, ಅಶೋಕ್‌ ಬಂಗೇರ, ಸ್ಥಳೀಯರಾದ ಕದಿಕೆ ಮೊಗವೀರ ಸಭಾದ ಅಧ್ಯಕ್ಷ ವಾಸು ಸಿ. ಸಾಲ್ಯಾನ್‌, ಆಂಜನೇಯ ವ್ಯಾಯಾಮ ಶಾಲಾ ಅಧ್ಯಕ್ಷ ವಿನೋದ್‌ ಸಾಲ್ಯಾನ್‌, ಉದಯ ಬಿ. ಸುವರ್ಣ, ಶೋಭೇಂದ್ರ ಸಸಿಹಿತ್ಲು, ಸೂರ್ಯ ಕಾಂಚನ್‌, ಅನಿಲ್‌ ಕುಂದರ್‌, ಯುವಕ ಮಂಡಲದ ಅಧ್ಯಕ್ಷ ಪ್ರವೀಣ್‌ ಕರ್ಕೇರ, ನಾರಾಯಣ ಕರ್ಕೇರ, ಮನೋಜ್‌ ಕುಮಾರ್‌ ಹಳೆಯಂಗಡಿ, ಹಿಮಕರ್‌ ಕದಿಕೆ, ಆನಂದ ಸುವರ್ಣ, ಪ್ರವೀಣ್‌ ತಿಂಗಳಾಯ, ಹರೀಶ್‌ ಅಗ್ಗಿದಕಳಿಯ, ಜೀವರಕ್ಷಕ ದಳದ ಅನಿಲ್‌ ಸಾಲ್ಯಾನ್‌, ಮೂಲ್ಕಿಯ ವಿಶೇಷ ತಹಶೀಲ್ದಾರ್‌ ಮಾಣಿಕ್ಯ, ಕಂದಾಯ ನಿರೀಕ್ಷಕ ದಿಲೀಪ್‌ ರೋಡ್ಕಕರ್‌, ಗ್ರಾಮ ಕರಣಿಕ ಮೋಹನ್‌, ಸಹಾಯಕ ನವೀನ್‌ ಮೊದಲಾದವರು ಉಪಸ್ಥಿತರಿದ್ದರು.

ಹಕ್ಕುಪತ್ರಗಳ ವಿತರಣೆಗೆ ಪ್ರಯತ್ನ 
ಸಸಿಹಿತ್ಲಿನ ಪ್ರದೇಶದಲ್ಲಿನ ಕೆಲವು ನಿವಾಸಿಗಳು ಹಕ್ಕು ಪತ್ರದ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಸರಕಾರದ ನಿಯಮಾನುಸಾರವಾಗಿ ಹಕ್ಕುಪತ್ರಗಳ ವಿತರಣೆಗೆ ಪ್ರಯತ್ನ ನಡೆಸಲಾಗುವುದು. ಸಮುದ್ರ ತೀರದ ಅಗತ್ಯತೆಗಳನ್ನು ಸಹ ಮುಂದಿನ ದಿನದಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುವ ಭರವಸೆಯನ್ನು ಶಾಸಕರು ನೀಡಿದರು. 

ಟಾಪ್ ನ್ಯೂಸ್

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.