ನಿರೀಕ್ಷಿತ ಫಲ ನೀಡದ ತಹಶೀಲ್ದಾರ್ ಭೇಟಿ
ಮತದಾನ ಬಹಿಷ್ಕಾರ ನಿರ್ಧಾರ ಬದಲಿಸದ ಕಲ್ಮಕಾರು ನಿವಾಸಿಗರು
Team Udayavani, Apr 17, 2019, 6:00 AM IST
ಸುಬ್ರಹ್ಮಣ್ಯ: ಸೇತುವೆ ಹಾಗೂ ರಸ್ತೆ ಸಹಿತ ಪ್ರಮುಖ ಮೂಲ ಸೌಕರ್ಯ ಬೇಡಿಕೆಗಳನ್ನು ಈಡೇರಿಸದೆ ಇರುವುದಕ್ಕೆ ಅಸಮಾಧಾನಗೊಂಡು ಎ. 18ರ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವ ಕಲ್ಮಕಾರು ಭಾಗದ 40ಕ್ಕೂ ಅಧಿಕ ಕುಟುಂಬಗಳು ಸರಿಯಾದ ಪರಿಹಾರ ದೊರಕುವ ವಿಶ್ವಾಸ ದೊರಕದೆ ಇರುವುದರಿಂದ ಮತದಾನ ಬಹಿಷ್ಕಾರದ ತಮ್ಮ ನಿರ್ಧಾರಕ್ಕೆ ಬದ್ಧರಾಗಿ ನಡೆದುಕೊಳ್ಳಲು ನಿರ್ಧರಿಸಿದ್ದಾರೆ.
ಕಲ್ಮಕಾರು ಭಾಗದ ಶೆಟ್ಟಿಕಟ್ಟ ಪರಿಸರದಲ್ಲಿ ಹರಿಯುವ ಹೊಳೆಗೆ ಸೇತುವೆ ನಿರ್ಮಾಣವಾಗದೆ ಕಾಜಿಮಡ್ಕ, ಕೊಪ್ಪಡ್ಕ, ಮೆಂಟಕಜೆ, ಆಂಜನಕಜೆ ಗುಳಿಕಾನ ಮೊದಲಾದ ಭಾಗಗಳಿಗೆ ಮಳೆಗಾಲದ ಅವಧಿಯಲ್ಲಿ ಸಂಪರ್ಕ ಸಾಧ್ಯವಾಗದೆ ನಾಗರಿಕರು, ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಪರಿಸರದವರು ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಕಳೆದ 35 ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಬಂದಿದ. ಈ ತನಕ ಯಾವುದೇ ಸ್ಪಂದನೆ ದೊರಕಿರಲಿಲ್ಲ. ಇದಕ್ಕೆ ಅಸಮಧಾನಗೊಂಡ ಈ ಭಾಗದ ನಲವತ್ತು ಕುಟುಂಬಗಳು ಈ ಭಾರಿಯ ಲೋಕಸಭಾ ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದರು.
ಮನವೊಲಿಸಿದ್ದರು
ಪರಿಸರದವರೆಲ್ಲರೂ ಕುಳಿತು ಚರ್ಚಿಸಿ ಮತದಾನ ಬಹಿಷ್ಕಾರದ ಸಾಮೂಹಿಕ ನಿರ್ಧಾರಕ್ಕೆ ಬಂದು ಸೇತುವೆ ನಿರ್ಮಾಣವಾಗಬೇಕಿರುವ ಸ್ಥಳದಲ್ಲಿ ಬ್ಯಾನರು ತೂಗು ಹಾಕಿ ಮತದಾನ ಬಹಿಷ್ಕಾರಕ್ಕೆ ವಾರದ ಹಿಂದೆ ನಿರ್ಧರಿಸಿದ್ದರು. ವಿಚಾರ ತಿಳಿದು ಸುಳ್ಯ ತಾ| ತಹಸಿಲ್ದಾರ್ ಕುಂಞಿ ಅಹಮ್ಮದ್ ಸ್ಥಳಕ್ಕೆ ಭೇಟಿ ಇತ್ತು ನಾಗರಿಕರ ಜತೆ ಮಾತುಕತೆ ನಡೆಸಿ ಮನವೊಲಿಸುವ ಕೆಲಸ ಮಾಡಿದ್ದರು.
ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಭೇಟಿ ಇತ್ತ ಮರುದಿನವೇ ಅಧಿಕಾರಿಗಳ ಸಭೆ ಕರೆದು ಸೇತುವೆ ನಿರ್ಮಾಣಕ್ಕೆ ಹಿಂದಿನ ಕಡತಗಳ ಪರಿಶೀಲನೆ ನಡೆಸಿ ಸೂಕ್ತ ವ್ಯವಸ್ಥೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ತಹಸಿಲ್ದಾರ್ ಅವರ ಸ್ಪಂದನೆ ಸ್ಥಳೀಯ ನಿವಾಸಿಗಳಿಗೆ ಆಗ ತೃಪ್ತಿ ನೀಡಿತ್ತು.
ಸಾಧ್ಯವಿಲ್ಲ ಎಂದರು.
ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳು ಸೇತುವೆ ನಿರ್ಮಾಣಕ್ಕೆ ಹೆಚ್ಚು ಅನುದಾನದ ಆವಶ್ಯಕತೆ ಇದೆ. ಅಷ್ಟು ಬೃಹತ್ ಪ್ರಮಾಣದ ಅನುದಾನ ಹೊಂದಿಸಲು ಸಾಧ್ಯವಿಲ್ಲ ಎನ್ನುವ ಉತ್ತರವನ್ನು ಸಭೆಯ ಅನಂತರದಲ್ಲಿ ಕೊಟ್ಟಿದ್ದರಿಂದ ನಿರಾಸೆಗೊಂಡ ಗ್ರಾಮಸ್ಥರು ಮತದಾನ ಬಹಿಷ್ಕಾರ ನಿರ್ಧಾರಕ್ಕೆ ಬದ್ಧರಾಗಿ ನಡೆದುಕೊಳ್ಳಲು ನಿರ್ಧರಿಸಿದ್ದಾರೆ. ನಮ್ಮ ಬೇಡಿಕೆ ಸೂಕ್ತ ಪರಿಹಾರದ ಭರವಸೆ ದೊರೆಯದೆ ಕಾರಣ ನಿವಾಸಿಗಳೆಲ್ಲರೂ ಮತದಾನ ಬಹಿಷ್ಕರಿಸುವ ನಿರ್ಧಾರ ಹಿಂಪಡೆಯದೇ ಇರಲು ನಿರ್ಧರಿಸಿರುವರು.
ಶಾಸಕರ ವಿರುದ್ಧ ಅಕ್ರೋಶ
ಈ ಭಾಗದ ಮೂಲ ಸೌಕರ್ಯ ವಿಚಾರವಾಗಿ ಸುಳ್ಯದ ಶಾಸಕರ ಸಹಿತ ಜನಪ್ರತಿನಿಧಿಗಳ ಸತತ ನಿರ್ಲಕ್ಷಕ್ಕೆ ಭಾರಿ ಆಕ್ರೋಶಗಳು ಪರಿಸರದ ಜನತೆಯಿಂದ ವ್ಯಕ್ತವಾಗಿದೆ. ನಲವತ್ತು ಕುಟುಂಬಗಳು ವಾಸವಿರುವ ಈ ಭಾಗಕ್ಕೆ ಕಿರು ಸೇತುವೆ ನಿರ್ಮಿಸಲು 37 ವರ್ಷಗಳು ಬೇಕಿತ್ತೆ ಎನ್ನುವ ಪ್ರಶ್ನೆಯನ್ನು ಪರಿಸರದವರು ಕೇಳುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿಂದ ಬಳಲಿದ್ದರೂ, ಶಾಸಕರು ಕನಿಷ್ಠ ಸೌಜನ್ಯಕ್ಕೂ ಮತ ಕೇಳುವ ನೆಪದಲ್ಲಾದರೂ ಈ ಭಾಗಕ್ಕೆ ಭೇಟಿ ನೀಡಬೇಕಿತ್ತು. ಅದನ್ನೂ ಮಾಡದೆ ಇರುವ ಶಾಸಕರ ನಿಲುವಿಗೆ ಮತ್ತು ಸ್ಥಳೀಯ ಮುಖಂಡರ ತಟಸ್ಥ ನಿಲುವಿನ ವಿರುದ್ಧ ನಿವಾಸಿಗರು ಆಕ್ರೋಶಿತರಾಗಿದ್ದಾರೆ.
ಇಂದು ಮತ್ತೆ ಸಭೆ
ಎ. 17ರಂದು ಮತ್ತೆ ಸ್ಥಳಿಯರೆಲ್ಲರೂ ಸಭೆ ಸೇರಿ ಚರ್ಚೆ ನಡೆಸಲು ನಿರ್ಧರಿಸಿದ್ದಾಗಿ ಫಲಾನುಭವಿ ಗೋಪಾಲಕೃಷ್ಣ ಕೊಪ್ಪಡ್ಕ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.