ಪಚ್ಚನಾಡಿಗೆ ವಿಶೇಷ ಅಧ್ಯಯನ ತಂಡ ಭೇಟಿ
Team Udayavani, Sep 20, 2019, 5:20 AM IST
ಮಹಾನಗರ: ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದ ತ್ಯಾಜ್ಯದ ರಾಶಿಯು ಜರಿದು ಮಂದಾರ ಪ್ರದೇಶಕ್ಕೆ ವ್ಯಾಪಿಸಿದ ಪರಿಣಾಮ ಉಂಟಾಗಿರುವ ಅನಾ ಹುತಗಳ ಬಗ್ಗೆ ಸರಕಾರಕ್ಕೆ ವರದಿ ನೀಡುವ ನೆಲೆಯಲ್ಲಿ ರಾಜ್ಯದ ವಿಶೇಷ ಅಧ್ಯಯನ ತಂಡ ಗುರುವಾರ ಮಂಗಳೂರಿಗೆ ಆಗಮಿಸಿ ಮಂದಾರ ಪ್ರದೇಶಕ್ಕೆ ಭೇಟಿ ನೀಡಿತು.
ವಿವಿಧ ಕ್ಷೇತ್ರದ ತಜ್ಞರಾಗಿರುವ ಚೆನ್ನೈಯ ಎಸ್. ಪಟ್ಟಾಭಿರಾಮಣ್, ಮೈಸೂರಿನ ಡಾ| ಪಿ.ಎಂ. ಕುಲಕರ್ಣಿ, ಬೆಂಗಳೂರಿನ ರಮೇಶ್, ತಮಿಳುನಾಡಿನ ನಾಗೇಶ್ ಪ್ರಭು ಅವರನ್ನು ಒಳಗೊಂಡಿರುವ ತಂಡವು ಮಂದಾರ ಪ್ರದೇಶದಲ್ಲಿ ಪರಿ ಶೀಲನೆ ನಡೆಸಿತು. ಬಳಿಕ ಮಂದಾರ ಪ್ರದೇ ಶದ ನಿರ್ವಸಿತರು ತಾತ್ಕಾಲಿಕ ಪುನರ್ವಸತಿ ಪಡೆದಿರುವ ಕುಲಶೇಖರದ ಬೈತುರ್ಲಿಗೆ ತಂಡ ಭೇಟಿ ನೀಡಿ ಮಾತುಕತೆ ನಡೆಸಿತು. ನಿರ್ವಸಿತರು ಮನವಿಯನ್ನು ತಂಡಕ್ಕೆ ಸಲ್ಲಿಸಿದರು. ಪಾಲಿಕೆಯ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಮಂಗಳೂರಿನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಅಧ್ಯಯನ ತಂಡವು ಮಹಾನಗರ ಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳ ಜತೆ ಚರ್ಚಿಸಿತು. ರಾತ್ರಿ ವೇಳೆ ಅಧ್ಯಯನ ತಂಡವು ಜಿಲ್ಲಾಧಿಕಾರಿಗಳ ಜತೆ ಮಾತುಕತೆ ನಡೆಸಲಿದೆ.
ಮಂದಾರದಲ್ಲಿ ಸಂಗ್ರಹವಾಗಿರುವ ತ್ಯಾಜ್ಯದ ಪ್ರಮಾಣದ ಲೆಕ್ಕಾಚಾರ, ಪರಿಹಾರ ಉಪಾಯಗಳ ಬಗ್ಗೆ ವರದಿ, ಮುಂದೆ ಇಂತಹ ಘಟನೆ ಆಗದಂತೆ ಎಚ್ಚರಿಕೆ ಹಾಗೂ ಸದ್ಯ ಪರಿಸರದ ಮೇಲೆ ಬೀಳುವ ಪರಿಣಾಮ ಹಾಗೂ ಪರಿಹಾರ ಇತ್ಯಾದಿಯಾಗಿ ಅಧ್ಯಯನ ತಂಡವು 15 ದಿನಗಳ ಒಳಗೆ ಸರಕಾರಕ್ಕೆ ಸಲ್ಲಿಸಲಿದೆ ಎಂದು ಪಾಲಿಕೆ ಆಯುಕ್ತರು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.