ವಿಟ್ಲ : ಬೈಕ್ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಲಾರಿ
Team Udayavani, Nov 30, 2017, 10:05 AM IST
ವಿಟ್ಲ: ಕಲ್ಲಡ್ಕ ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯ ವಿಟ್ಲ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ತಿರುವಿನಲ್ಲಿ ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಲಾರಿ, ಮುಂಭಾಗದಲ್ಲಿ ಹೋಗುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಲಾರಿಯ ಅಡಿಗೆ ಬಿದ್ದು, ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ.
ಈ ಅಪಘಾತದಲ್ಲಿ ಕನ್ಯಾನ ಗ್ರಾಮದ ಪೊಯ್ಯಗದ್ದೆ ನಿವಾಸಿ, ನಿವೃತ್ತ ಯೋಧ ವೆಂಕಪ್ಪ ಮೂಲ್ಯ ಡಿ. (53) ಮತಪಟ್ಟ ಬೈಕ್ ಸವಾರ. ಮುಡಿಪು ಐಟಿ ಕಂಪೆನಿಯೊಂದರ ಭದ್ರತಾ ಸಿಬಂದಿಯಾಗಿರುವ ಇವರು ಬೈಕ್ನಲ್ಲಿ ವಿಟ್ಲಕ್ಕೆ ಬರುತ್ತಿದ್ದರು. ತಿರುವಿನಲ್ಲಿ ಮುಂಭಾಗದಿಂದ ಬಸ್ ಬಂತೆಂದು ಬೈಕ್ ನಿಧಾನವಾಗಿ ಓಡಿಸುತ್ತಿದ್ದಾಗ ಹಿಂದಿನಿಂದ ಕೆಂಪು ಕಲ್ಲು ತುಂಬಿದ್ದ ಲಾರಿ ಬಂದು ಢಿಕ್ಕಿಹೊಡೆಯಿತು. ಆಗ ಬೈಕ್ ರಸ್ತೆಯ ಎಡಭಾಗಕ್ಕೆ ಎಸೆಯಲ್ಪಟ್ಟಿದ್ದು, ಸವಾರ ಲಾರಿಯ ಮುಂಭಾಗದ ಚಕ್ರಕ್ಕೆ ಸಿಲುಕಿದ್ದಾರೆ.
ಲಾರಿ ಚಾಲಕ ವೇಗ ನಿಯಂತ್ರಿಸುವ ನಿಟ್ಟಿನಲ್ಲಿ ತೀರಾ ಎಡಬದಿಗೆ ತಿರುಗಿ ಸಿದ್ದು, ಬೈಕ್ ಸವಾರನನ್ನೂ ಎಳೆದುಕೊಂಡು ಹೋಗಿತ್ತು.
ಅವರ ಎರಡೂ ಕಾಲ ಮೇಲೆ ಲಾರಿಯ ಚಕ್ರಗಳು ಸಂಚರಿಸಿ, ಕಾಲು ಗಳು ಛಿದ್ರ ಗೊಂಡಿದ್ದವು.
ತತ್ಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿ ತಾದರೂ, ಅವರು ದಾರಿ ಮಧ್ಯೆ ಸಾವನ್ನಪ್ಪಿದರು. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನವೀಯತೆ ಮೆರೆದರು
ಯಾರೊಬ್ಬರೂ ಬೈಕ್ ಸವಾರನನ್ನು ಲಾರಿ ಯಡಿಯಿಂದ ರಕ್ಷಿಸಲು ಮುಂದೆ ಬರದೇ ಇದ್ದಾಗ ಯೂಸುಫ್ ಕಾಶಿಮಠ ಹಾಗೂ ಇನ್ನಿಬ್ಬರು ಅವರನ್ನು ಲಾರಿಯಡಿಯಿಂದ ಎತ್ತಿ ತರಲು ಪ್ರಯತ್ನಿಸಿದರು. ಆಗ ಗಾಯಾಳು ತನ್ನ ಹೆಸರನ್ನು ಹೇಳಿಕೊಳ್ಳುತಿದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.