ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿ ಮತ್ತೆ ಜಯಭೇರಿ


Team Udayavani, Dec 30, 2021, 11:33 AM IST

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿ ಮತ್ತೆ ಜಯಭೇರಿ

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಮತ ಎಣಿಕೆ ಪೂರ್ತಿಯಾಗಿದ್ದು ಬಿಜೆಪಿ ಮತ್ತೆ ಜಯಭೇರಿ ಬಾರಿಸಿದೆ. ಕಳೆದ ಅವಧಿಯ 12 ಸ್ಥಾನಗಳನ್ನು ಉಳಿಸಿಕೊಂಡಿದೆ. ಕಾಂಗ್ರೆಸ್ ಪಕ್ಷವು ಕಳೆದ ಅವಧಿಯಲ್ಲಿದ್ದ ಒಂದು ಸ್ಥಾನ ಕಳೆದುಕೊಂಡು 5 ಸ್ಥಾನ ಪಡೆದುಕೊಂಡರೆ, ಎಸ್ ಡಿಪಿಐ ಖಾತೆ ತೆರೆದಿದೆ.

ಬಿಜೆಪಿ 12, ಕಾಂಗ್ರೆಸ್ 5 ಮತ್ತು ಎಸ್ ಡಿಪಿಐ ಒಂದು ಸ್ಥಾನ ಗಳಿಸಿದ್ದು ಬಿಜೆಪಿ ಆಡಳಿತದ ಗದ್ದುಗೆಗೇರಿದೆ.

ವಿವರ:

1ನೇ ವಾರ್ಡ್‌ನಲ್ಲಿ 828 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ ವಿ. ಕೆ. ಮಹಮ್ಮದ್ ಅಶ್ರಫ್ 425 ಮತಗಳನ್ನು ಪಡೆದು ಜಯಗಳಿಸಿದರೆ, ಬಿಜೆಪಿ ಕೃಷ್ಣಪ್ಪ ಗೌಡ 388 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. 15 ಮತ ನೋಟಕ್ಕೆ ಚಲಾವಣೆಯಾಗಿದೆ.

2ನೇ ವಾರ್ಡ್ ನಲ್ಲಿ 608 ಮತಚಲಾವಣೆಯಾಗಿದ್ದು, ಬಿಜೆಪಿಯ ಸಂಗೀತಾ 316 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಕಮಲಾಕ್ಷಿ 192, ಎಸ್. ಡಿ. ಪಿ. ಐ. ಆಯಿಷಾ ಎನ್. 92 ಮತ ಪಡದು ಸೋಲು ಕಂಡಿದ್ದಾರೆ. ನೋಟ 8 ಮತ ಚಲಾವಣೆಯಾಗಿದೆ.

3ನೇ ವಾರ್ಡ್ ನಲ್ಲಿ 637 ಮತಚಲಾವಣೆಯಾಗಿದ್ದು, ಬಿಜೆಪಿಯ ಸಿ. ಎಚ್. ಜಯಂತ 322 ಮತ ಪಡೆದು ಜಯ ಗಳಿಸಿದ್ದಾರೆ. ಕಾಂಗ್ರೆಸ್ ಶ್ರೀನಿವಾಸ ಶೆಟ್ಟಿ 310 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 5 ಮತ ಚಲಾವಣೆಯಾಗಿದೆ.

ಇದನ್ನೂ ಓದಿ:ಕುಕನೂರು ಪಪಂ ‘ಕೈ’ ವಶ: ಸಚಿವ ಆಚಾರ್ ಗೆ ಸ್ವ ಕ್ಷೇತ್ರದಲ್ಲಿ ಮುಖಭಂಗ

4ನೇ ವಾರ್ಡ್ ನಲ್ಲಿ 578 ಮತಚಲಾವಣೆಯಾಗಿದ್ದು, ಬಿಜೆಪಿ ರಕ್ಷಿತಾ 301 ಮತ ಗಳಿಸಿ ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಆಯಿಷಾ 269 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 8 ಮತ ಚಲಾವಣೆಯಾಗಿದ್ದಾರೆ.

5ನೇ ವಾರ್ಡ್ ನಲ್ಲಿ 578 ಮತಚಲಾವಣೆಯಾಗಿದ್ದು, ಬಿಜೆಪಿ ವಸಂತ ಕೆ. 314 ಮತ ಗಳಿಸಿ ಜಯಗಳಿಸಿದ್ದಾರೆ. ಕಾಂಗ್ರೆಸ್ ವಸಂತಿ 251 ಮತಗಳಿಸಿ ಸೋಲುಂಡಿದ್ದಾರೆ. ನೋಟ 13 ಮತ ಚಲಾವಣೆಯಾಗಿದೆ.

6ನೇ ವಾರ್ಡ್ ನಲ್ಲಿ 507 ಮತಚಲಾವಣೆಯಾಗಿದ್ದು, ಬಿಜೆಪಿ ವಿಜಯಲಕ್ಷ್ಮಿ 274 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಲೀಲಾವತಿ 226 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 7 ಮತ ಚಲಾವಣೆಯಾಗಿದೆ.

7ನೇ ವಾರ್ಡ್ ನಲ್ಲಿ 659 ಮತಚಲಾವಣೆಯಾಗಿದ್ದು, ಬಿಜೆಪಿ ರವಿಪ್ರಕಾಶ್ ಯಸ್. 439 ಮತಗಳಿಸಿ ವಿಜಯಶಾಲಿಯಾದರು. ಕಾಂಗ್ರೆಸ್ ಶಿವಪ್ರಸಾದ್ ವಿ. 214 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 6 ಮತ ಗಳಿಸಿದ್ದಾರೆ.

8ನೇ ವಾರ್ಡ್ ನಲ್ಲಿ 533 ಮತಚಲಾವಣೆಯಾಗಿದ್ದು, ಬಿಜೆಪಿ ಸುನಿತಾ 190 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಸುನೀತಾ ಕೋಟ್ಯಾನ್ 161, ಎಸ್.ಡಿ.ಪಿ.ಐ ರಝೀಯಾ 177 ಮತ ಪಡೆದು ಸೋಲುಕಂಡಿದ್ದಾರೆ. ನೋಟ 5 ಮತ ಪಡೆದಿದ್ದಾರೆ.

9ನೇ ವಾರ್ಡ್ ನಲ್ಲಿ 666 ಮತಚಲಾವಣೆಯಾಗಿದ್ದು, ಬಿಜೆಪಿ ಎನ್. ಕೃಷ್ಣ 395 ಮತ ಗಳಿಸಿ ವಿಜಯಿಯಾಗಿದ್ದಾರೆ. ಕಾಂಗ್ರೆಸ್ ಶಿವಪ್ರಸಾದ್ 266 ಮತ ಗಳಿಸಿ ಸೋಲು ಕಂಡಿದ್ದಾರೆ. ನೋಟ 5 ಮತ ಚಲಾವಣೆಯಾಗಿದೆ.

10ನೇ ವಾರ್ಡ್ ನಲ್ಲಿ 594 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ ಪದ್ಮಿನಿ 377 ಮತಗಳಿಸಿ ವಿಜಯ ಗಳಿಸಿದ್ದಾರೆ. ಬಿಜೆಪಿ ಸುಮತಿ 214 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 3 ಮತ ಚಲಾವಣೆಯಾಗಿದೆ.

11ನೇ ವಾರ್ಡ್ ನಲ್ಲಿ 526 ಮತಚಲಾವಣೆಯಾಗಿದ್ದು, ಬಿಜೆಪಿ ಅರುಣ್ ಎಂ.ವಿಟ್ಲ 288 ಮತಗಳನ್ನು ಪಡೆದು ಜಯಗಳಿಸಿದರೆ, ಕಾಂಗ್ರೆಸ್ ರಮಾನಾಥ ವಿ. 213, ಪಕ್ಷೇತರ ಜಾನ್ ಡಿಸೋಜ 15 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 10 ಚಲಾವಣೆಯಾಗಿದೆ.

12ನೇ ವಾರ್ಡ್ ನಲ್ಲಿ 497 ಮತಚಲಾವಣೆಯಾಗಿದ್ದು, ಬಿಜೆಪಿ ಹರೀಶ್ ಸಿ. ಎಚ್. 332 ಮತಗಳಿಸಿ ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಎಂ. ಕೆ. ಮೂಸಾ 161 ಮತ ಗಳಿಸಿ ಸೋಲು ಕಂಡಿದ್ದಾರೆ. ನೋಟ 4 ಮತ ಚಲಾವಣೆಯಾಗಿದೆ.

13ನೇ ವಾರ್ಡ್ ನಲ್ಲಿ 608 ಮತಚಲಾವಣೆಯಾಗಿದ್ದು, ಎಸ್.ಡಿ.ಪಿ.ಐ. ಶಾಕೀರಾ 279 ಮತಗಳಿಸುವ ಮೂಲಕ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಸ್ಮಾ ಯು.ಕೆ. 204, ಬಿಜೆಪಿ ಪುಷ್ಪಾ 119 ಮತಗಳಿಸಿ ಸೋಲುಕಂಡಿದ್ದಾರೆ. ನೋಟ 6ಮತಗಳಿಸಿದ್ದಾರೆ.

14ನೇ ವಾರ್ಡ್ ನಲ್ಲಿ 512 ಮತಚಲಾವಣೆಯಾಗಿದ್ದು, ಬಿಜೆಪಿ ಅಶೋಕ್ ಕುಮಾರ್ ಶೆಟ್ಟಿ 242 ಮತಗಳಿಸಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಮನೋಹರ ಲ್ಯಾನ್ಸಿ ಡಿಸೋಜಾ 144, ಪಕ್ಷೇತರ ಮೋಹನ್ ಸೇರಾಜೆ 125 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 1ಮತ ಗಳಿಸಿದ್ದಾರೆ.

15ನೇ ವಾರ್ಡ್ ನಲ್ಲಿ 703 ಮತಚಲಾವಣೆಯಾಗಿದ್ದು, ಕಾಂಗ್ರೆಸ್ ಲತಾವೇಣಿ 381ಮತ ಗಳಿಸಿ ಜಯಗಳಿಸಿದ್ದಾರೆ. ಬಿಜೆಪಿ ಸಂಧ್ಯಾಗಣೇಶ್ 319 ಪಡೆದು ಸೋಲು ಕಂಡಿದ್ದಾರೆ. ನೋಟ 3 ಮತ ಚಲಾವಣೆಯಾಗಿದೆ.

16ನೇ ವಾರ್ಡ್ ನಲ್ಲಿ 480 ಮತಚಲಾವಣೆಯಾಗಿದ್ದು, ಕಾಂಗ್ರೆಸ್ ಡೀಕಯ್ಯ 247 ಮತ ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಕೃಷ್ಣಪ್ಪ 220 ಮತ ಪಡೆದ ಸೋಲು ಕಂಡಿದ್ದಾರೆ. ನೋಟ 13 ಮತಚಲಾವಣೆಯಾಗಿದೆ.

17ನೇ ವಾರ್ಡ್ ನಲ್ಲಿ 749 ಮತಚಲಾವಣೆಯಾಗಿದ್ದು, ಬಿಜೆಪಿ ಕರುಣಾಕರ ಗೌಡ ನಾಯ್ತೊಟ್ಟು 415 ಮತ ಗಳಿಸಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಶ್ರೀಚರಣ್ 320 ಮತಪಡೆದು ಸೋಲು ಕಂಡಿದ್ದಾರೆ. ನೋಟ 14 ಮತ ಚಲಾವಣೆಯಾಗಿದೆ.

18ನೇ ವಾರ್ಡ್ ನಲ್ಲಿ 590 ಮತಚಲಾವಣೆಯಾಗಿದ್ದು ಕಾಂಗ್ರೆಸ್ ಅಬ್ದುಲ್ ರಹಿಮಾನ್ 352 ಜಯಗಳಿಸಿದ್ದಾರೆ. ಬಿಜೆಪಿ ಕೃಷ್ಣಪ್ಪ ಮೂಲ್ಯ 60, ಎಸ್.ಡಿ.ಪಿ.ಐ. ಸಯ್ಯದ್ ಇಲ್ಯಾಸ್ 173 ಮತಪಡೆದು ಸೋಲು ಕಂಡಿದ್ದಾರೆ. ನೋಟ 5 ಮತ ಗಳಿಸಿದ್ದಾರೆ.

ಗೆದ್ದ ಪ್ರಮುಖರು:

ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರವಿಪ್ರಕಾಶ್, ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬಂದ ಅಶೋಕ್ ಕುಮಾರ್ ಶೆಟ್ಟಿ

ಸೋತವರು ಪ್ರಮುಖರು:

ಗ್ರಾ.ಪಂ. ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಮಾಜಿ ಅಧ್ಯಕ್ಷ ಜಾನ್ ಡಿಸೋಜಾ, ಎಂ.ಕೆ.ಮೂಸಾ

ಟಾಪ್ ನ್ಯೂಸ್

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

1

Puttur: ನಳಿನ್‌ಗೆ ನಿಂದನೆ; ದೂರು ದಾಖಲು

1-asdaaasdasd

Kadaba; ಪ್ರೀತಿಸುವ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ:ಯುವಕ ಸೆರೆ

1aaaane

Sullia: ತೋಟದಲ್ಲಿ ಮೂರು ಕಾಡಾನೆ!

1-sedi

Puttur: ಕಂದಕಕ್ಕೆ ಉರುಳಿದ ಕಾರು:ಜೀವ ಉಳಿಸಿಕೊಂಡ ಐವರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.