ವಿಟ್ಲ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ : ಕಾಂಗ್ರೆಸ್-ಬಿಜೆಪಿ ಜಟಾಪಟಿ


Team Udayavani, Jul 2, 2019, 4:11 PM IST

VITLA

ವಿಟ್ಲ : ವಿಟ್ಲ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಅಧ್ಯಕ್ಷೆ ದಮಯಂತಿ ಅವರ ಅಧ್ಯಕ್ಷತೆಯಲ್ಲಿ ಆರಂಭವಾದ ಸಾಮಾನ್ಯ ಸಭೆ ಬಿಜೆಪಿ-ಕಾಂಗ್ರೆಸ್ ಸದಸ್ಯರ ಜಗಳದ ವೇದಿಕೆಯಾಗಿತ್ತು. ಅಧ್ಯಕ್ಷರ ಮೇಜಿನ ಬಳಿ ಬಂದ ಉಭಯ ಪಕ್ಷಗಳ ಸದಸ್ಯರು ಏರು ಸ್ವರದಲ್ಲಿ ಮಾತನಾಡುತ್ತ, ದಡಬಡನೆ ಮೇಜಿಗೆ ಗುದ್ದುವ ಪೈಪೋಟಿ ಪ್ರದರ್ಶನವಾಯಿತು.

ಅಧ್ಯಕ್ಷರು ಅಜೆಂಡವನ್ನು ಸಭೆಗೆ ಓದುತ್ತಿದ್ದಾಗ ಬಿಜೆಪಿ ಸದಸ್ಯ ರಾಮದಾಸ ಶೆಣೈ ಅವರು ಆಕ್ಷೇಪಿಸಿ, ಮಾ.1ರಂದು ನಡೆದ ಸಾಮಾನ್ಯ ಸಭೆಯ ನಿರ್ಣಯ ನಂಬ್ರ 257/2018-19ರಲ್ಲಿ 3 ಕಾಮಗಾರಿಗಳ ಟೆಂಡರ್ ಮಂಜೂರಾತಿಯನ್ನು ರದ್ದುಪಡಿಸಬೇಕೆಂದು ಪ.ಪಂ.ಉಪಾಧ್ಯಕ್ಷರು, ಸ್ಥಾಯೀ ಸಮಿತಿ ಅಧ್ಯಕ್ಷರು ಸೇರಿ ಒಟ್ಟು 12 ಮಂದಿ ಸದಸ್ಯರು ನಿರ್ಣಯ ಮಾಡಲಾಗಿದೆ. ಸಭೆಯ ಮಂಜೂರಾತಿ ಯನ್ನು ಪಡೆಯದೇ ಈ ಬಗ್ಗೆ ಟೆಂಡರ್ ಕರೆಯಲಾಗಿದೆ. ಆ ಬಗ್ಗೆ ನಿರ್ಣಯವನ್ನು ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.

ಅಧ್ಯಕ್ಷೆ ದಮಯಂತಿ ಅವರು ಮಾತನಾಡಿ, ತಿದ್ದುಪಡಿ ಮಾಡಲಿಲ್ಲ. ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಮಂಜೂರಾದ ಮತ್ತು ನಿರ್ಣಯ ಕೈಗೊಳ್ಳಲಾಗಿದ್ದುದನ್ನೇ ಮುಂದುವರಿಸಲಾಗಿದೆ. ಹೊಸ ಅನುದಾನವಲ್ಲ ಎಂದರು.

ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ಹಳೆಯ ನಿರ್ಣಯವನ್ನು ತಿದ್ದುಪಡಿ ಮಾಡಲಾಗಿದೆ. ನಿರ್ಣಯ ತೋರಿಸಬೇಕೆಂಬ ನಮ್ಮ ಆಗ್ರಹ ಇತ್ಯರ್ಥವಾಗಬೇಕೆಂದರು. ಈಗ ಎಲ್ಲರ ಮಾತು ಏರುಸ್ವರವಾಗಿ, ಕರ್ಕಶವಾಯಿತು. ಯಾರು ಏನು ಹೇಳುತ್ತಿದ್ದಾರೆಂದು ಗೊತ್ತಾಗಲಿಲ್ಲ. ಗದ್ದಲ ತಾರಕಕ್ಕೇರಿತು. ಪದಗಳು ವಿರಳವಾಗಲಿಲ್ಲ. ಇಂತಹ ಸನ್ನಿವೇಶದಲ್ಲೇ ಅಧ್ಯಕ್ಷೆ ದಮಯಂತಿ ಇಂದಿನ ಅಜೆಂಡಗಳನ್ನು ಮೈಕ್‌ನಲ್ಲಿ ಓದಿ ಹೇಳಿದರು. ನಿರ್ಣಯ ಕೈಗೊಳ್ಳಲಾಗಿದೆ ಎಂದು ಘೋಷಿಸುತ್ತ ಹೊರನಡೆದರು.  ಜತೆಗೆ ಕಾಂಗ್ರೆಸ್ ಪಕ್ಷದ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ಅಬ್ದುಲ್‌ರಹಿಮಾನ್ ನೆಲ್ಲಿಗುಡ್ಡೆ, ಸುನಿತಾ ಕೋಟ್ಯಾನ್, ಲತಾ ಅಶೋಕ್, ಅಬೂಬಕ್ಕರ್, ನಾಮನಿರ್ದೇಶಿತ ಸದಸ್ಯರಾದ ವಿ.ಎಚ್.ಸಮೀರ್ ಪಳಿಕೆ, ಪ್ರಭಾಕರ ಭಟ್ ಮಾವೆ ಅವರೂ ಹಿಂಬಾಲಿಸಿದರು. ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಎಂಜಿನಿಯರ್ ಶ್ರೀಧರ್, ರತ್ನಾ ಅವರೂ ತೆರಳಿದರು.

ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ, ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯರಾದ ರವಿಪ್ರಕಾಶ್, ರಾಮದಾಸ ಶೆಣೈ, ಶ್ರೀಕೃಷ್ಣ ವಿಟ್ಲ, ಲೋಕನಾಥ ಶೆಟ್ಟಿ ಕೊಲ್ಯ, ಮಂಜುನಾಥ ಕಲ್ಲಕಟ್ಟ, ಉಷಾ ಕೃಷ್ಣಪ್ಪ, ಇಂದಿರಾ ಅಡ್ಡಾಳಿ, ಗೀತಾ ಪುರಂದರ, ಸಂಧ್ಯಾ ಮೋಹನ್ ಅವರು ಸಭಾಭವನದಲ್ಲೇ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ನ್ಯಾಯ ಬೇಕು, ರಬ್ಬರ್ ಸ್ಟಾಂಪ್ ಅಧ್ಯಕ್ಷರಿಗೆ ಧಿಕ್ಕಾರ, ನಿರ್ಣಯ ತಿದ್ದುಪಡಿದ ಅಧ್ಯಕ್ಷರಿಗೆ ಧಿಕ್ಕಾರ ಇತ್ಯಾದಿ ಘೋಷಗಳು ಮೊಳಗಿದವು.


ಸ್ವಲ್ಪ ಸಮಯದ ಬಳಿಕ ಪಟ್ಟಣ ಪಂಚಾಯತ್ ಕಚೇರಿಗೆ ಮುಂಭಾಗದಲ್ಲಿ ಕುಳಿತ ಬಿಜೆಪಿ ಸದಸ್ಯರು ಅಧ್ಯಕ್ಷರಿಗೆ ಧಿಕ್ಕಾರ ಕೂಗಲಾರಂಭಿಸಿದರು. ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ ಅವರು ಮಾತನಾಡಿ, ಕೊಡಂಗೆಯಲ್ಲಿ ಸೋಲಾರ ದಪ ಅಳವಡಿಕೆ, ಬೊಬ್ಬೆಕೇರಿ ಕೋಡಿಯಲ್ಲಿ ದಾರಿ ಅಭಿವೃದ್ಧಿ ಕಾಮಗಾರಿ, ರಥಬೀದಿಯಲ್ಲಿ ಚರಂಡಿ ಕಾಮಗಾರಿ, ಕೊಡಂಗೆ ರಸ್ತೆ ಬದಿ ತಡೆಗೋಡೆ ರಚನೆ ಕಾಮಗಾರಿಯ ನಿರ್ಣಯಗಳಿಗೆ ಆಕ್ಷೇಪಿಸಿದ್ದೇವೆ. ಆದರೆ ಅದನ್ನು ತಿದ್ದುಪಡಿ ಮಾಡಿ, ಟೆಂಡರ್ ಕರೆದಿದ್ದಾರೆ. ಈ ಸಭೆಯಲ್ಲಿ ಟೆಂಡರ್ ಅಂತಿಮಗೊಳಿಸಲು ನಾವು ವಿರೋಧಿಸಿದ್ದೇವೆ. ಅಧ್ಯಕ್ಷರು ಇದನ್ನೆಲ್ಲ ತಿರಸ್ಕರಿಸಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಇಲ್ಲಿ ಬಿಜೆಪಿಯ ಬಹುಮತವಿದ್ದೂ ಪ್ರತಿಪಕ್ಷದ ಸದಸ್ಯರೆಂದು ಕರೆಯಲಾಗುತ್ತಿದೆ. ಈಗ ವಿರೋಧ ಪಕ್ಷ ಯಾವುದು ? ಆಡಳಿತ ಪಕ್ಷ ಯಾವುದು ಎಂಬ ಗೊಂದಲವೂ ಇಲ್ಲಿದೆ ಎಂದರು.

ಬಿಜೆಪಿ ಮನವಿ : ಪಂಚಾಯತ್ ವ್ಯಾಪ್ತಿಯಲ್ಲಿರುವ ಅನೇಕ ರಸ್ತೆಗಳು, ಚರಂಡಿಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ಮೊದಲೇ ಪುರಸಭಾ ನಿಧಿಯಿಂದ ಮಾಡಿಸಿರುವ ಕಾಮಗಾರಿಗಳ ಅನುದಾನ 40 ಸಾವಿರ ರೂ.ಗಳನ್ನು ಗುತ್ತಿಗೆದಾರರಿಗೆ ಪಾವತಿಸಿಲ್ಲ. ಈ ನಡುವೆ 9.33 ಲಕ್ಷ ರೂ.ಗಳ ಮೊತ್ತದ ಕಾಮಗಾರಿಯನ್ನು ಅಕ್ರಮವಾಗಿ ಟೆಂಡರ್ ಮಾಡಿರುವುದು ಸರಿಯಲ್ಲ. ಸಭೆಯ ಒಪ್ಪಿಗೆ ಇಲ್ಲದೇ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ. ಬಹುಮತ ಪಡೆದ ಪಕ್ಷದವರನ್ನು ಪ್ರತಿಪಕ್ಷದ ಸದಸ್ಯರೆಂದು ಉಲ್ಲೇಖಿಸಲಾಗಿದೆ. ಮೀಸಲಾತಿ ನಿಯಮದಿಂದ ಪ್ರತಿಪಕ್ಷ ಸದಸ್ಯರು ಅಧ್ಯಕ್ಷ ಸ್ಥಾನ ಪಡೆದಿದ್ದಾರೆ ಹೊರತು ಬಹುಮತ ಪಡೆದ ಪಕ್ಷದವರು ಪ್ರತಿಪಕ್ಷದ ಸದಸ್ಯರಾಗಲು ಸಾಧ್ಯವಿಲ್ಲ. ತಿರುಚಿ ಬರೆದ ನಿರ್ಣಯದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಿದ್ದೇವೆ. ಈ ಕಾಮಗಾರಿ ನಡೆದಲ್ಲಿ ಮುಂದಿ ನಸಮಸ್ಯೆಗೆ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ, ಇದೇ ರೀತಿ ಮುಂದುವರಿದರೆ ನಾವು ಯಾವುದೇ ಸಭೆಗೆ ಹಾಜರಾಗುವುದಿಲ್ಲ ಎಂದು ಬಿಜೆಪಿಯ 12 ಸದಸ್ಯರು ಮನವಿ ಪತ್ರವನ್ನು ಮುಖ್ಯಾಽಕಾರಿಗೆ ಸಲ್ಲಿಸಿದ್ದಾರೆ.

ನಿರ್ಣಯ ತಿರುಚಲಿಲ್ಲ : ಅಧ್ಯಕ್ಷೆ ದಮಯಂತಿ ಅವರು ಉದಯವಾಣಿ ಪ್ರತಿನಿಧಿ ಜತೆ ಮಾತನಾಡಿ, ನಿರ್ಣಯವನ್ನು ನಾವು ತಿರುಚಲಿಲ್ಲ. ಕಾಮಗಾರಿ ನಿರ್ಣಯ, ಟೆಂಡರ್ ಬಿಜೆಪಿ ಅಧ್ಯಕ್ಷರ ಅವಧಿಯಲ್ಲೇ ಆಗಿದೆ. ನನ್ನ ಅವಧಿಯಲ್ಲಿ ಆ ಕಾಮಗಾರಿಯನ್ನು ನಿಲ್ಲಿಸಬೇಕೆಂಬುದು ಅವರ ಪ್ರಯತ್ನ. ಆದರೆ ನಾವು ಅದನ್ನು ಮುಂದುವರಿಸಿದ್ದೇವೆ. ಬಿಜೆಪಿ ಸದಸ್ಯರಿಗೆ ನನ್ನ ಅವಧಿಯಲ್ಲಿ ಅಭಿವೃದ್ಧಿ ಯಾಗಬಾರದೆಂಬ ಉದ್ದೇಶದಲ್ಲಿ ಗೊಂದಲ ಸೃಷ್ಟಿಸುತ್ತಾರೆ. ತೆರಿಗೆ ಪಾವತಿಸುವ ನಾಗರಿಕರಿಗೆ ಉಪಯುಕ್ತವಾದ ಅಭಿವೃದ್ಧಿ ಕಾರ್ಯ ಮಾಡಬೇಕಾಗಿದೆ. ಯಾವ ಬೇಧಭಾವ ಮಾಡದೇ ಎಲ್ಲ ಸದಸ್ಯರಿಗೆ 5.43 ಲಕ್ಷ ರೂ ಅನುದಾನ ಸಮಾನವಾಗಿ ಹಂಚಲಾಗಿದೆ. ಇದನ್ನೆಲ್ಲ ಗಮನಿಸುವಾಗ ಅವರಿಗೆ ಅಭಿವೃದ್ಧಿ ಬೇಡ, ಗೊಂದಲವೇ ಬೇಕೆನ್ನುವುದು ಸ್ಪಷ್ಟವಾಗುತ್ತದೆ. ಇವತ್ತಿನ ಸಭೆಯ ಪ್ರತಿಯೊಂದು ನಿರ್ಣಯವನ್ನೂ ಮಂಜೂರು ಮಾಡಲಾಗಿದೆ. ಈ ಸಭೆಯನ್ನು ಪೂರ್ಣಗೊಳಿಸಲಾಗಿದೆ ಎಂದರು.

ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಅಧ್ಯಕ್ಷರು ಸಭೆಯಲ್ಲಿ ಮಾತನಾಡುವಾಗ ಒಬ್ಬೊಬ್ಬರಾಗಿ ಮಾತನಾಡಬೇಕಿತ್ತು. ಎಲ್ಲರೂ ಒಟ್ಟಿಗೇ ಮಾತನಾಡಿ, ಗೊಂದಲ ಸೃಷ್ಟಿಸುವುದು ಯಾಕೆ ? ರಾಮಮಂದಿರ ಬಳಿ ಚರಂಡಿ ಕಾಮಗಾರಿಗೆ 2.5 ಲಕ್ಷ ಅನುದಾನದಲ್ಲಿ ಕಾಮಗಾರಿ ಪೂರ್ತಿ ಯಾಗಲಿಲ್ಲ. ಮತ್ತೆ ಅದು ಸಂಪೂರ್ಣವಾಗಲು 4 ಲಕ್ಷ ರೂ. ಅನುದಾನವನ್ನು ಅಧ್ಯಕ್ಷರು ಇರಿಸಿದ್ದಾರೆ. ಅದು ತಪ್ಪೇ ? ಎಂದು ಪ್ರಶ್ನಿಸಿದ್ದಾರೆ.

ಮುಖ್ಯಾಧಿಕಾರಿ ಮಾಲಿನಿ ಅವರು ಅಧ್ಯಕ್ಷರು ನಿರ್ಣಯಗಳನ್ನು ಓದಿ, ಸಭೆಯನ್ನು ಪೂರ್ಣಗೊಳಿಸಲಾಯಿತು ಎಂದಿದ್ದಾರೆ. ಇಂದಿನ ಸಭೆಯಲ್ಲಿ ಪ್ಲಾಸ್ಟಿಕ್ ಕಾರ್ಯಾಚರಣೆ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಬೇಕಾಗಿತ್ತು. ಅದಾಗಲಿಲ್ಲ. ಆದರೆ ನಾವು ಅದನ್ನು ಮಾಡಲೇಬೇಕು ಎಂದರು.

ಟಾಪ್ ನ್ಯೂಸ್

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.